ಪುಟ:ಮಾತೃನಂದಿನಿ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೀ

   ಇನ್ನು ಈ ಪಟ್ಟಣದ ಮಹಾಜನರ ವಿಚಾರವಿಮರ್ಶೆಗಳು ಇಲ್ಲಿಯವರೆಗೆ ಸಾಕಾಗಿರಲಿ. ಮುಂದೆ ನಮ್ಮ ಕರ್ತವ್ಯವನ್ನೂ, ಸುಧಾರಿಸಲ್ಪಡಬೇಕಾದ ವಿಚಾರಗಳನ್ನೂ ಸ್ವಲ್ಪ ವಿಚಾರ ಮಾಡುವ. 

ಸುಹೃದರೇ!

  ನಮ್ಮ ವಿಚಾರಶಕ್ತಿಲೋಪದಿಂದ ನಾನಾ ವಿಧದ ಅಂತಸ್ತಾಪಗಳಿಗೆ ಗುರಿಯಾಗಿರುವ ನಮ್ಮ ದೇಶಮಾತೆಯನ್ನು ಉನ್ನತಿಗೆ ತರುವಂತೆ ಮಾಡಬೇಕಾದುದೇ ನಮ್ಮ ಮುಖ್ಯ ಕರ್ತವ್ಯವು. ಇದು ನಮ್ಮವರ ಐಕಮತ್ಯಬಲ ಅಥವಾ ಸಂಘಶಕ್ತಿಯ ಏಕರೂಪದಲ್ಲಿಯೇ ಸಿದ್ಧಿ ಹೊಂದಬೇಕಲ್ಲದೆ ಮತ್ತೇತರಿಂದೆಯೂ ಆಗದು. ಈವರೆಗೂ ಇದ್ದಂತೆ ನಾವು ಮುಂದೆಯೂ ಬೇರೆಬೇರೆಯಾಗಿದ್ದು, ಒಬ್ಬೊಬ್ಬರೊಂದೊಂದು ಬಗೆಯ ವಿಷಯರೋಗಗಳಿಗೆ ತುತ್ತಾಗುವಂತಾಗುವುದು ಸರಿಯಲ್ಲ. ನಮ್ಮಲ್ಲಿ ಮೊದಲು, ಸ್ವಾತಂತ್ರ್ಯನಿಷ್ಠೆ ಅಥವಾ ಸ್ವಾವಲಂಬನವೂ ಬಲವಾಗಿರಬೇಕು. ಸ್ವಾವಲಂಬನವು ನಮ್ಮಲ್ಲಿ ದೃಢವಾಗಿರಬೇಕಾದರೆ, ನಮ್ಮನಮ್ಮಲ್ಲಿ ವಸ್ತುವಿಚಾರ ವಿಮರ್ಶಾರೂಪವಾದ ಪ್ರಜ್ಞೆಯು ಅಥವಾ ಜ್ಞಾನದ ಅಂತಸ್ಸತ್ವವು ಸಹಕಾರವಾಗಿರಬೇಕು. ಇಲ್ಲವಾದರೆ ನಾವು ಹೇಗೂ ಕೃತಕಾರ್ಯರಾಗಲಾರೆವು.
   ಅಂತಸ್ಸತ್ವವೆಂಬುದು, ನಮ್ಮ ಸ್ತ್ರೀವರ್ಗವನ್ನೇ ಮುಖ್ಯವಾಗಿ ಆಶ್ರಯಿಸಿರುವುದರಿಂದ, ಮೊದಲು ನಾವು, ಆ ನಮ್ಮ ಸ್ತ್ರೀವರ್ಗವನ್ನು ಸುಧಾರಿಸುವುದರಲ್ಲಿ ಜಾಗರೂಕತೆಯನ್ನು ವಹಿಸಬೇಕು.
   ನಮ್ಮ ಹೆಂಗಸರು ಸ್ಕೂಲಿಗೆ ಹೋಗಿ, ನಾಲ್ಕಾರು ಅನ್ಯಭಾಷಾ ಪುಸ್ತಕಗಳನ್ನು ಮುಗಿಸಿ, ವಿದೇಶೀಯರ ನಡೆನುಡಿಗಳನ್ನು ಅನುಕರಣೆಮಾಡಿಬಂದ ಮಾತ್ರಕ್ಕೆ, ನಮ್ಮ ಸ್ತ್ರೀಯರು ವಿದ್ಯಾವತಿಯರಾಗಲಿಲ್ಲ. ಪಾಶ್ಚಿಮಾತ್ಯರ ನಡೆನುಡಿಗಳನ್ನು ಅನುಕರಣೆ ಮಾಡಲು, ಅನಾದಿಯಾಗಿ ಬಂದಿರುವ ನಮ್ಮ ಆರ್ಯಧರ್ಮವನ್ನು ಕಡಿದುಹಾಕುವುದು ಭಾರತೀಯರಾದ ಹಾಗೂ ದಾಕ್ಷಿಣಾತ್ಯರಾದ ನಮಗೆ ಸರ್ವಥಾ ಸರಿಯಲ್ಲ. ಎಂದರೆ, ಪಾಶ್ಚಿಮಾತ್ಯರ ವಿಚಾರವನ್ನೇ ಬಿಡಬೇಕೆಂಬುದು ನನ್ನ ಮತವಲ್ಲ. ಅವರಲ್ಲಿರುವ ಪ್ರಾಮುಖ್ಯಗಳಾದ ಗುಣಗಳನ್ನು -ಎಂದರೆ, ಉದ್ಯೋಗಶೀಲತೆ, ಸಂಘಶಕ್ತಿ, ದೇಶದ ಸಂಪದಭಿವೃದ್ಧಿಯಮೇಲೆ ಅವರು ತೋರುತ್ತಿರುವ ಅಭಿಮಾನ,