ಪುಟ:ಮಾತೃನಂದಿನಿ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                           ಮಾತೃನಂದಿನಿ

ಗಿನಿಯರು ತಮ್ಮ ಜೀವಿತವನ್ನು ಕೇವಲ, ನೀಚರ ದಾಸ್ಯಭಾವದಲ್ಲಿ ಮತ್ತು ಶೋಕಕಾತರತೆಯಲ್ಲಿ ಕಳೆಯುತ್ತಿದ್ದ ದುಷ್ಕಾಲವನ್ನು ಹಿಂದಟ್ಟಿ ಅತ್ಮವಿಚಾರದಿಂದ ಸ್ವಾವಲಂಬಿನಿಯರಾಗಿ, ದೇಶಮಾತೃಸೇವಕರಾಗಿ ಧರ್ಮಸಂಸ್ಥಾಪನೆಯಲ್ಲಿ ತಮ್ಮ ಭ್ರಾತೃವರ್ಗವನ್ನು ಪ್ರೋತ್ಸಾಹಿಸುವಂತಾಗುತ್ತಿರುವರು. (ಶುಭವಾರ್ತೆ, ಶುಭವಾರ್ತೆ.) ಹೀಗಾದುದರಿಂದ ಭಟ್ಟಾಚಾರ್ಯರಾದಿಯಾದವರಿಗೂ, ಪೀಠಾಧಿಕಾರಿಗಳಿಗೂ ಎಷ್ಟೊಂದು ನಷ್ಟವಾಗಿರಬೇಕೋ, ನೀವೇ ಊಹಿಸಿರಿ? ಇವೆಲ್ಲಕ್ಕೂ ನಮ್ಮೊಡಗೂಡಿದ ನಗೇಶರಾಯನೇ ಮೂಲವಾದ ಬಳಿಕ, ಆತನು ಈ ಪಟ್ಟಣಕ್ಕೆ ಶತ್ರುವೇ ಅಹುದೋ ಅಲ್ಲವೋ?-(ಕೆಟ್ಟರು, ಕೆಟ್ಟರು; ಮೂರ್ಖರು ಕೆಟ್ಟು ಹಾಳಾದರು. ಸೂರ್ಯನು ಪ್ರಪಂಚಕ್ಕೇ ಮಿತ್ರನು!)

                     ಅಹಹಾ! ಓ ನನ್ನ ದೇಶ ಬಾಂಧವರೇ! ಮತ್ತೊಂದು ಮಾತು:-          
   ಸರ್ವಸಂಘಪರಿತ್ಯಾಗಮಾಡಿದ ಜೀವಾನಂದಪರಮಹಂಸರ ಪ್ರತಿಷ್ಠೆಯಾದರೂ ಎಷ್ಟಿರಬೇಕು? ಮತಾಚಾರವನ್ನ ತಿಕ್ರಮಿಸಿದ ಮತ್ತು ಬ್ರಹ್ಮತೇಜೋವಧೆಯೇ ಮೊದಲಾದ ಅನುಚಿತ ಕೃತ್ಯಗಳನ್ನು ಮಾಡಿದುದಕ್ಕಾಗಿ, ನಾವು ಐದುಸಾವಿರ ರೂಪಾಯಿಗಳನ್ನು ಗುರುಪೀಠಕ್ಕೆ ಕಾಣಿಕೆಯಾಗಿ ಒಪ್ಪಿಸಿ, ಅಪಚಾರಕ್ಷಮಾಪಣೆಯನ್ನು, ಹಾಗೂ ಸಭಾಮಧ್ಯದಲ್ಲಿ, ಕೋರಬೇಕಂತೆ! ಅಲ್ಲವೆ? ಆದೀತು. ಅದರೆ ನೋಡಿರಿ ! ಮತಾಚಾರ ಮತ್ತು ಬ್ರಹ್ಮತೇಜೋವಧೆಗಳೇ ಮೊದಲಾದ ಪಾತಕಗಳು ಯಾರಿಂದ, ಹೇಗೆ ನಡೆಯಿಸಲ್ಪಟ್ಟಿರುವುವೆಂಬುದನ್ನು ಹಿಂದೆಯೇ ಹೇಳಿದ್ದೇನೆ. ಇದಕ್ಕೆ ಮಾಡಬೇಕಾದ ಪ್ರಾಯಶ್ಚಿತ್ತರಗಳನ್ನು ನಿನ್ನಿನ ದಿನದಲ್ಲಿ ನ್ಯಾಯಮೂರ್ತಿ ಕಲೆಕ್ಟರರವರ ದಿವ್ಯಭವನದಲ್ಲಿ ನಡೆಯಿಸಿದ ಅತ್ಯಾಚಾರದ ಪ್ರತೀಕಾರಕ್ರಿಯೆಯಲ್ಲಿ ನಿಮ್ಮೆಲ್ಲರ ಸಮಕ್ಷಮದಲ್ಲಿಯೂ ನಡೆಯಿಸಿರುತ್ತೇನೆ. ಇದರಿಂದ, ಪಾಪ! ಗುರುಪೀಠದವರ ಶಾಸನದ ಪ್ರಮಾಣವಾಗಲೀ, ಗುರುಪೀಠಾಶ್ರಿತರಾದ ಶಿಷ್ಯಮಂಡಲಿಯವರ ಭಕ್ತಿಪಾರವಶ್ಯತೆಯಾಗಲೀ ಎಷ್ಟರದಾಗಿದೆಯೆಂಬುದನ್ನು ನೀವೂ ನೋಡಿ ತಿಳಿಯುವಂತೆ ಮಾಡುತ್ತೇನೆ. [ಮೇಲುಮಾತು; ಮೇಲುಮಾತು.]