ಪುಟ:ಮಾತೃನಂದಿನಿ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೀ

ಗಾಗಿ,ದೇಶಭ್ರಷ್ಟನಾಗುವಂತೆ ಮಾಡಿದ, ಈ ನಗರದ ಜೀವಾನಂದ ಪೀಠದವರಂತೆ ಅಭಿಮಾನಿಯೂ ಆತನಲ್ಲ. ಮತ್ತು, ಯಾವ ಗಣೇಶಪ೦ತರು, ತನ್ನ ಭಾತೃಭಾರ್ಯೆಯನ್ನು ಭರ್ತೃವಿಯೋಗಾನಂತರ, ತಮ್ಮ ಮತ್ತು ಜೀವಾನಂದರವರ ಸೇವಾಕಾರ್ಯದಲ್ಲಿ ಮಾತ್ರವೇ ನಿಯಮಿಸಿ, ಉಳಿದ ಸ್ವಾತಂತ್ರ್ಯವನ್ನು ಸೂರೆಗೊಳ್ಳಬೇಕೆಂದು ಮಾಡಿದ್ದ ತಮ್ಮ ಉದ್ದೇಶಕ್ಕೆ, ಆ ತಪಸ್ವಿನಿಯು ಒಳಗಾಗದೆ, ಅಗ್ರಜನ ಉಪದೇಶದಂತೆ ಆತ್ಮಧ್ಯಾನದಲ್ಲಿ ಮಾತ್ರವೇ ನಿರತಳಾದಳೆಂಬ ಒಂದೇ ಒಂದು ದೊಡ್ಡ ತಪ್ಪಿಗಾಗಿ, ಅವಳನ್ನು ಅಪವಾದಕ್ಕೆಡೆ ಮಾಡಿ, ಸಮಾಜದಿಂದ ಬಹಿಷ್ಕರಿಸಿ ಹೊರಡಿಸಿ ಬಿಟ್ಟರೋ,ಅ ಮಹನೀಯರಷ್ಟು ಭೂತದಯಾಪರತೆಯಾದರೂ ನಮ್ಮ ಶ್ರೀಮಂತರಿಗಿಲ್ಲ. ಹೀಗೆಂದ ಬಳಿಕ, ಆ ಅಕಾಲಮೃತ್ಯುವಶೆಯಾದವಳ ಸುಕುಮಾರಿಯನ್ನು- ಆತ್ಮಧ್ಯಾನನಿಷ್ಟಾಪರಳಾದ ತಪಸ್ವಿನಿಯ ನೈಸರ್ಗಿಕ ಪ್ರೇಮದಿಂದ ಪೋಷಿತೆಯಾದ ಅ ನಂದಿನಿಯನ್ನು -ದಿವ್ಯಜ್ಞಾನಪರಿಪೂರ್ಣನಾದ ಆ ಸತ್ಯಾನಂದ ಸ್ವಾಮಿಯ ಪೂರ್ಣಾನುಗ್ರಹಕ್ಕೆ ಪಾತ್ರಳಾಗಿ, ದೇಶಮಾತೃ ಸೇವೆಗಾಗಿ ಒಪ್ಪಿಸಲ್ಪಟ್ಟಿರುವ ನಮ್ಮ ನಂದಿನಿಯನ್ನು, ಬಿಟ್ಟು ಬಿಡಬೇಕೆಂದರೆ, ಭಟ್ಟಾಚಾರ್ಯರಂತಹವರಿಗಲ್ಲದೆ ಮತ್ತಾರಿಗೆ ಸಾಧ್ಯವು? (ನಾಚಿಕೆಕೇಡಿನ ಸಂಗತಿ. ನಚಿಗ್ಗೇಡಿಗಳ ಮಾತು! ಮುಂದೆ ಸಾಗಲಿ.)

ಪರಮಪ್ರಿಯರೇ!
     ನಮ್ಮ ದೇಶಭಕ್ತ ನಗೇಶರಾಯನ ನಾಸ್ತಿಕವಾದಿತ್ವದಿಂದ ಈ ಪಟ್ಟಣಕ್ಕಾಗಿರುವ ದುರವಸ್ಥೆಯೇನೆಂದು ತಿಳಿದಿರುವಿರಿ? ಪೀಠಾಧಿಕಾರಿಗಳ ಉಪಾಸ್ಯದೇವತೆಗೆ ಸಮರ್ಪಿಸಲ್ಪಡಬೇಕಾಗಿದ್ದ ಕಾಣಿಕೆಗಳು ತಡೆಯಲ್ಪಟ್ಟು ಅದರಿಂದ ಇಲ್ಲಿಯ ಸಂಸ್ಕೃತ ಸಾಹಿತ್ಯ ಮಂದಿರವು ಸ್ಥಾಪಿಸಲ್ಪಟ್ಟಿತು. ಸಂತರ್ಪಣ-ಸಂತಸೇವೆಗಳಿಗೆಂದು ಸಲ್ಲುತ್ತಿದ್ದ ಆದಾಯವು, ಇಲ್ಲಿಯ ಅಮೃತಸರಸ್ಸಿನ ನಿರ್ಮಾಣಕ್ಕೆ ಕಾರಣವಾಗಿ, ಭಟ್ಟಾಚಾರ್ಯರಾದಿಯಾದವರ ಭಾರ್ಯಾಪುತ್ರರಿಗೆ ಉಡುವು-ತೊಡವುಗಳಿಗಭಾವವಾಯಿತು. ಸಮಾಜದ ಶಾಸನೋಲ್ಲಂಘನೆಗೆ ಪ್ರಾಯಶ್ಚಿತ್ತವೆಂದು ತೆಗೆದುಕೊಳ್ಳುತ್ತಿದ್ದ ಸುಂಕದಿಂದ, ಸಣ್ಣ ಅನಾಥಾಲಯವೊ೦ದು ನಿರ್ಮಿತವಾಗಲು ಅವಕಾಶವಾಯಿತು. ಇಷ್ಟಾದುದೂ ಅಲ್ಲದೆ, ನಮ್ಮ ಧರ್ಮಸೋದರಿಯರಾದ ಬಹುಮಂದಿ ಅಭಾ