ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



     146                                                           ಸತೀ ಹಿತೈಷಿಣೀ 

ನ್ನಿಸದೆ, ಇವಳ ಆತ್ಮವಿಶ್ವಾಸಪೂರ್ವಕವಾದ ಹಿತಬೋಧೆಗೆ ಕಿವಿಕೊಟ್ಟು, ಮುಂದೆ ನಮ್ಮವರ ಯಶಶ್ಚಂದ್ರಿಕೆಯನ್ನು ಪ್ರಕಾಶಪಡಿಸುವಂತೆ ನೀವೆಲ್ಲರೂ ಅನುಗ್ರಹಿಸಬೇಕೆಂಬುದೇ ನನ್ನ ದೈನ್ಯಪ್ರಾರ್ಥನೆಯಾಗಿದೆ, ”

     ಹೀಗೆ ಹೇಳಿದ ಬಳಿಕ ಚಿತ್ರಕಲೆಯು ಸುಮ್ಮನಾದಳು. ಆ ಬಳಿಕ ಅಲ್ಲಿ ಕುಳಿತಿದ್ದವರು, ಕಲೆಕ್ಟರರ ಪತ್ನಿಯನ್ನು ಮುಖ್ಯ ಪೀಠದಲ್ಲಿ ಮಂಡಿಸುವಂತೆ ಪ್ರಾರ್ಥಿಸಿದರು. ಅದರಂತೆಯೇ ಆಕೆ, ಅಗ್ರಾಸನವನ್ನು ಸ್ವೀಕರಿಸಿ, ಅಭಿನಂದನವನ್ನು ಸೂಚಿಸಿ, ಬಳಿಕ ನಂದಿನಿಯನ್ನು ಮುಂದಿನ ಭಾಷಣಕ್ಕೆ ಮೊದಲುಮಾಡೆಂದು ಹೇಳಿದಳು.
    
     ನಂದಿನಿಯು ಎದ್ದುನಿಂತು, ಕುಳಿತಿದ್ದ ಮಹಿಳೆಯರೆಲ್ಲರನ್ನೂ ಒಮ್ಮೆ ಚೆನ್ನಾಗಿ ನೋಡಿ, ಗದ್ಗದಸ್ವರದಿಂದ ಹೇಳತೊಡಗಿದಳು.- 
"ನನ್ನ ಪರಮಪೂಜ್ಯ ಭಗಿನಿಯರೇ'
      ಹಿರಿಯರೂ ಬಲ್ಲವರೂ ಆದ ಗುರುಜನರ ಮುಂದೆ, ಅರಿಯದವರು ಬಾಯ್ದೆರೆವುದು ನಗೆಗೇಡೆಂದು ಕೆಲವರು ಹೇಳಿಕೊಳ್ಳುವರು. ಆದರೂ ಹಾಗೆ ಹಿರಿಯರ ಮುಂದೆ ಕಿರಿಯರು ಬಾಯ್ದೆರೆಯದೆಯೇ ಇರುವುದಾಗಲೀ, ಅವರ ಇದಿಕೆ ಅಭಿಮಾನವಿಶೇಷದಿಂದ ಹಾರಾಡುವುದಾಗಲೀ, ಸರಿಯಲ್ಲವೆಂದೂ, ಗುರುಜನರಿಂದ ಅನುಜ್ಞಾತರಾಗಿ, ಕೈ ಕೊಂಡ ಕಾರ್ಯವನ್ನು ಎಚ್ಚರಿಕೆಯಿಂದ ನೆರವೇರಿಸುವುದೂ, ಮಕ್ಕಳು ಮೊದಮೊದಲು ಎಡವಿತೊಡರಿ ಬಿದ್ಲೇಳದೆಯೇ ನಡೆಯನ್ನು ಕಲಿತುಕೊಳ್ಳುವುದು ಹೇಗೆ ಅಸಂಭವವೋ, ಹಾಗೆಯೇ ಅರಿಯೆವೆಂದು ಕುಳಿತಿರದೆ, ಅರಿಯಬೇಕೆಂಬ ಹುರುಪಿ ನಿಂದ ಪ್ರಯತ್ನ ಪರರಾದವರು, ಮೊದಮೊದಲು ತಮಗಾಗುವ ಪ್ರತಿಬಂಧಕವನ್ನು ಕುರಿತು ಭೀತರಾಗದೆ, ಮು೦ಬರಿದು ಹೋಗಬೇಕಾದುದೇ ಸಹಜ ಗುಣವೆಂಬುದೂ ಬಲ್ಲವರ ವ್ಯಾಖ್ಯಾನವಾಗಿರುವುದು. ಆದುದರಿಂದ ಗುರು ಜನರಿಂದ ಆಜ್ಞಾಪಿಸಲ್ಪಟ್ಟು, ಇಲ್ಲಿ ನಿಂತಿರುವ ನಾನು, ಇಂದಿನ ಭಾಷಣದಲ್ಲಿ ಮೈಮರೆತೇನಾದರೂ ಮರ್ಯಾದಾತಿಕ್ರಮದ ಮಾತುಗಳನ್ನಾಡಿದರೂ ಅದನ್ನು ತಾವೆಲ್ಲರೂ ಅಗಾಗಲೇ ನಿದರ್ಶನಕ್ಕೆ ತಂದುಕೊಟ್ಟು ಎಚ್ಚರಿಸಬೇಕೆಂದು ಮೊದಲೇ ನಿಮ್ಮನ್ನು ಕೇಳಿಕೊಳ್ಳುತ್ತಿರುವೆನು.