ಪುಟ:ಮಾತೃನಂದಿನಿ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃನಂದಿನಿ 145 "ಇಲ್ಲಿ ನೆರೆದಿರುವ ನನ್ನ ಪ್ರಿಯಭಗಿನೀಯರೇ

    ಇಂದಿನ ವರೆಗೂ ಈ ಮನೆಯಲ್ಲಿ ಕಾಣದಿದ್ದ ನೇತ್ರೋತ್ಸವವನ್ನು ಇಂದು, ನೀವೆಲ್ಲರೂ ಸದಯಾಂತಃಕರಣರಾಗಿ ಬಂದು ಉಂಟುಮಾಡಿರುವುದಕ್ಕಾಗಿ ನಿಮಗೆ ನನ್ನೀ ನಿರಂತರದ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಇದೊ ಸಮರ್ಪಿಸಿರುವೆನು. ನಂದಿನಿಯ ನಿಮಿತ್ತದಿಂದಲಾದರೂ ಈ ದಿನ ನೀವೆಲ್ಲರೂ ಇಲ್ಲಿ ಸಮ್ಮಿಲಿತರಾಗಿರುವುದರಿಂದ ಇಂದು ನಮ್ಮ ಮನೆಯವರೆಲ್ಲರಿಗೂ ಉಂಟಾಗಿರುವ ಉತ್ಸಾಹವು ಅಷ್ಟಿಷ್ಟೆಂದು ಹೇಳುವಂತಿಲ್ಲ. ಆದರೂ ಅದರ ಹಿಂದೆಯೇ ಈಗಾಗಿರುವ ಉತ್ಸಾಹವು. ಮುಂದೆ ಮತ್ತಾವ ವ್ಯಾಚಾಂತರದಿಂದೇ ಆಗಲೀ ಭಂಗಹೊಂದುವಂತಾಗದೆ ಉತ್ತ ರೋತ್ತರಾಭಿವೃದ್ಧಿಹೊಂದಿ, ಅಡಿಗಡಿಗೂ ಹೀಗೆಯೇ ನಾವೆಲ್ಲರೂ ಒಟ್ಟಾಗಿ ಕಲೆತು, ನಮ್ಮ ಇತಿಕರ್ತವ್ಯತೆಯನ್ನು ಭದ್ರಪಡಿಸಿಕೊಳ್ಳುವಂತಾಗಲಾರದೇನೆಂದು ಸ್ವಲ್ಪ ಶಂಕೆಯೂ ಉಂಟಾಗುತ್ತದೆ. ಏಕೆಂದರೆ,-ನಮ್ಮವರ ಭಿನ್ನಾಭಿ ಪ್ರಾಯಗಳೂ, ಅನೈಕಮತ್ಯವೂ, ಅಂತದರಿಂದ ನಮ್ಮನ್ನು ಸುತ್ತಿಕಾಡುತ್ತಿರುವ ಹೆಮ್ಮೆ, ಅಸೂಯೆ ಮೊದಲಾದ ತಿಳಿಗೇಡಿತನವೂ ಪ್ರಾಮುಖ್ಯಕಾರಣಗಳಾಗಿವೆ. ಇಂತಹ ಸಂದಿಗ್ಧಸಮಯದಲ್ಲಿ ಇಂದು, ನಮ್ಮ ಧರ್ಮಬಾಂಧವರ ಭಗೀರಥ ಪ್ರಯತ್ನದಿಂದ ಇಲ್ಲಿ ನೆರೆದಿರುವ ಈ ಮಹಿಳಾಸಮ್ಮೇಲನವು, ಮುಂದೆಯಾದರೂ ಸ್ವಪ್ರಯತ್ನದಿಂದಲೇ ಕಲೆತು, ದೇಶೋ ನೈತಿಗೆ ಪ್ರಬಲನಾಧನಗಳನ್ನು ಕಲ್ಪಿಸಿಕೊಡುವಂತಾಗಬೇಕೆಂಬ ಆತುರವನ್ನೂ (ಆಶೋತ್ತರವನ್ನೂ) ಉಂಟುಮಾಡಿರುವುದು ಆಶ್ಚರ್ಯವಲ್ಲವಷ್ಟೆ?- 

ಮಹಿಳಾಮಣಿಯರೇ!

    ಇನ್ನು ನನ್ನ ಭಾಷಣದ ಮುಖ್ಯಾಂಶವನ್ನು ಸೂಚಿಸಿ ವಿರಮಿಸುವೆನು. ಮಾತೃನಂದಿನಿಯ ಜನ್ಮಧಾರಣವು, ನಮ್ಮವರ ಅಭ್ಯುದಯಕ್ಕೆಂದೂ, ಅವಳ ಸ್ಮಿರಬ್ರಹ್ಮಚರ್ಯವ್ರತವೂ ನಮ್ಮ ದೇಶಮಾತೆಯ ಹೃತ್ತಾಪನಿವಾರಣೆಗೆಂದೂ, ಹಾಗೂ ಇವಳು, ಇಲ್ಲಿ, ನಮ್ಮ ಮನೆಯಲ್ಲಿ ಒಂದೆರಡು ವರ್ಷಗಳ ಅಜ್ಞಾತವಾಸದಲ್ಲಿದ್ದುದು, ಶಿಥಿಲಸ್ಥಿತಿಯಲ್ಲಿಳಿದಿರುವ ನಮ್ಮ ಆರ್ಯಧರ್ಮದ ಪುನರುತ್ಥಾಪನಕ್ಕೆಂದೂ ದೃಢವಾಗಿ ತಿಳಿದು, ಇಂದು ನಾವೆಲ್ಲರೂ ಒಂದೆಡೆಯಲ್ಲಿ ಕಲೆತು, ಮಾತನಾಡುವಂತಾಗಿರುವ ಈ ಸುಯೋಗವನ್ನು ವ್ಯರ್ಥವೆ
                                                                                                                                           1D