ಪುಟ:ಮಾತೃನಂದಿನಿ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

D. 144

                                                                              ಸತೀ ಹಿತೈಷಿಣೀ
ವಂತೆ ತೋರುತ್ತಿರುವುದು. ಮತ್ತು ಒಳಗೆ ಭಾಷಣಕ್ಕೆ ಬರುವ ಮಹಿಳೆಯರು ತಮ್ಮ ಕೈಕೂಸುಗಳನ್ನು ಬಾಗಿಲಿನ ಬಿಡಾರದ ಮುಂದೆ ಕುಳಿತ, ಸರಿ ಚಾರಿಣಿಯರ ವಶಕ್ಕೊಪ್ಪಿಸಬೇಕೆಂದು ನಿಯಮಿಸುತ್ತಿದ್ದ, ಅಚಲಚಂದ್ರನಾದಾನಂದರ ಮಾತಿನಂತೆ ಅವರಲ್ಲಿ ಬಿಟ್ಟ, ಭವನದೊಳಹೊಕ್ಕು, ಉಚಿತ ಸನ್ಮಾನದಿಂದ ಕುಳಿತುಕೊಳ್ಳುತ್ತಿದ್ದರು. ಸ್ತ್ರೀಸಮೂಹವು, ನೆಲದ ಮೇಲೆ ಹಾಸಿದ್ದ ರತ್ನಗಂಬಳಿಗಳಲ್ಲಿ ಕುಳಿತಿದ್ದರು. ಕಲೆಕ್ಟರರ ಪತ್ನಿ, ಶರಚ್ಛಂದ್ರನ ಭಾರ್ಯೆ, ವಿದ್ಯಾನಂದಪ್ರಭುವಿನ ಪತ್ನಿ, ಇವರೊಡನೆ ಚಿತ್ರಕಲೆಯು ಭವನದ ಮೇಗಡೆಯ ಹಜಾರದಲ್ಲಿ ಕುಳಿತು, ಬಂದ ಬಂದ ಸ್ತ್ರೀಯರನ್ನು ಸನ್ಮಾನಿಸುತಿದ್ದಳು. ನಂದಿನಿಯು, ಸ್ವರ್ಣಕುಮಾರಿ, ಸರಸಕುಮಾರಿ, ಪರಿಮಳಾ ದೇವಿಯರೇ ಮೊದಲಾದ ತನ್ನ ಸಖೀವರ್ಗದಲ್ಲಿ ಕಲೆತು ಮಾತನಾಡುತ್ತಿದ್ದಳು.
      ಹೆಚ್ಚೇಕೆ, ನಗೇಶರಾಯನ ಮತ್ತು ಅಚಲಚಂದ್ರನ ಕಾರ್ಯದಕ್ಷತೆಯಿದ, ಇಷ್ಟು ಮಂದಿ ಸ್ತ್ರೀಯರು ನೆರೆದಿದ್ದರೂ ಗದ್ದಲವಿಲ್ಲದಿದ್ದಿತು. ಭವನದ ಹೊರಬಾಗಿಲ ಬಳಿಯಲ್ಲಿಯೇ ಕಲೆಕ್ಟರ್ ಜ್ಞಾನಸಾರ ಚಕ್ರವರ್ತಿ, ದೇಶ ಸೇವಕ ಶರಚ್ಚಂದ್ರನಾಥ ಠಾಕೂರ, ರಾವಬಹದ್ದೂರ್ ವಿದ್ಯಾನಂದಪ್ರಭು, ಇವರೊಡನೆ ಎತ್ತರವಾದ ಪೀಠಗಳಲ್ಲಿ ನಗೇಶರಾಯನೇ ಮೂರ್ತಿಮತ್ತಾಗಿ ಕುಳಿತಿದ್ದುದರಿಂದ ಸ್ತ್ರೀಯರು ಮತ್ತೂ ಭೀತರಾಗಿ ಯಾವ ಮಾತನ್ನೂ ಎತ್ತದೆ, ಕೌತುಕ ವಿಸ್ಮಯಗಳಿಂದ ನೋಡುತ್ತ ಕುಳಿತಿದ್ದರು. ವಿವರಣವಿ ಷ್ಟಕೈ ಸಾಕಲ್ಲವೆ?-
     ನಿರ್ಣಯಿಸಲ್ಪಟ್ಟಿದ್ದ ವೇಳೆಯು ಬಂದಿತು. ಇನ್ನು ಹೊರಗಣಿಂದ ಯಾರೂ ಬರುವಂತಿಲ್ಲ. ಪ್ರಾಕಾರದ ಬಾಗಿಲು ಬಂದಾಯಿತು. ಬಿಡಾರದಲ್ಲಿ ಚಲ್ಲಾಟವಾಡುತ್ತ ಕುಳಿತಿದ್ದ ಪುರುಷವರ್ಗವು, ಮುಂದಿನ ನಂದಿನಿಯ ಉಪನ್ಯಾಸದಲ್ಲಿ ಕುತೂಹಲಾವಿಷ್ಟರಾಗಿ ಎದ್ದು ಹಮ್ಮೈಸಿ ಕೇಳುತ್ತ ನಿಂತರು. ಇದೆಲ್ಲವನ್ನೂ ನೋಡಿ, ನಗೇಶರಾಯನು, ಚಿತ್ರಕಲೆಗೆ ಸೂಚನೆಯನ್ನುಕೊಟ್ಟನು. ಕುಳಿತಿದ್ದ ಚಿತ್ರಕಲೆಯು ಎದ್ದುನಿಂತು, ನೆರೆದಿದ್ದ ಮಹಿಳೆಯರನ್ನು ಅಭಿನಂದಿಸಿ, ಪ್ರೇಮವ್ಯಂಜಕ ಸ್ವರದಿಂದ ಹೇಳಿದಳು:-