ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೩೬ ನಡೇದದ್ದೇ ದಾರಿ
ನಿರ್ಧಾರ ತುಂಬಿದ ಧ್ವನಿಯಲ್ಲಿ ಆಕೆ ಅಂದಳು,'ಏನಿಲ್ಲ ಅಮ್ಮ,ನಾ ಬಂದು ಭಾಳ ದಿವಸಾತು.ನಾಳಿನ ಶನಿವಾರ ಮುಂಬೈಗೆ ಹೋಗ್ಬಿಡ್ತೀನಿ.ರಿಝರ್ವೇಶನ್ ಮಾಡ್ಸು ಅಂತ ತಮ್ಮಗ ಹೇಳ್ಬಿಡು.'ತಾಯಿ ನಕ್ಕು'ಆಗ್ಲಿ'ಅಂದರು. ಲಕ್ಷ್ಮಿ ಊರಿಗೆ ಹೋಗುವಳೆಂದು ಕೇಳಿ ಮುದುಕಿ ಹಾಗೂ ಮೊಮ್ಮಗಳು ಅವಳನ್ನು ನೋಡಲು ಬಂದರು.ಲಕ್ಷ್ಮಿ ಅವರಿಗೆ ಧಾರಾಳವಾಗಿ ತನ್ನ ಒಳ್ಳೆಯದೇ ಆದ ಹಳೆಯ ಸೀರೆಗಳು,ಮಗುವಿನ ಬಟ್ಟೆಗಳು ಇತ್ಯಾದಿ ಕೊಟ್ಟಳು.ಗೌಸಸಾಹೇಬನ ಹೊಸ ವರ್ಷದ ಸಾಹಸದ ಕತೆ ಕೇಳಿದಳು.ಎಂದಿನಂತೆ ಎಮಾಮ್‍ಬೀ ಆತನನ್ನು ಆತನ ವಂಶವನ್ನೂ ಶಪಿಸಿದಾಗ ಸುಮ್ಮನೆ ಕೂತು ಕಿವಿಗೊಟ್ಟಳು.ಈಗೀಗ ಆತ ಸಂಸಾರಕ್ಕಾಗಿ ಏನೂ ಹಣ ಕೊಡುವುದಿಲ್ಲ ಮಕ್ಕಳು ಸತ್ತರೂ ಕೆಟ್ಟರೂ ಕೇಳುವುದಿಲ್ಲ ಅಂತ ಇಮಾಮ್‍ಬೀ ದೂಷಿಸಿದಾಗ,ಆಕೆ ಬೇಡವೆಂದರೂ ಕೇಳದೆ ಒತ್ತಾಯದಿಂದ ನೂರು ರೂಪಾಯಿ ಕೊಟ್ಟಳು.ಕೊನೆಗೆ'ನಾ ಎರಡು ದಿನದಾಗ ಊರಿಗೆ ಹೋಗ್ತೀನಿ ಹಮೀದಾ,ನಿಮ್ಮಜ್ಜೀಗೆ ಪಾಪ ವಯಸ್ಸಾತು,ಕಾಳಜೀ ತಗೋ'ಅಂತ ಹೇಳಿ ಅವರಿಬ್ಬರನ್ನು ಬೀಳ್ಕೊಟ್ಟಳು.ತಿರುಗಿ ಹೊರಟಾಗ,ಇದೇನು ಈ ಸಲ ಈ ಅಮ್ಮಾ ಅವರು 'ನೀನ್ಯಾಕೆ ಆತನನ್ನು ಒದ್ದು ಓಡಿಸುವುದಿಲ್ಲ ಹಮೀದಾ?'ಅಂತ ಅನ್ನಲೇ ಇಲ್ಲವಲ್ಲ,ಅಂತ ಹಮೀದಾಬಾನುವಿಗೆ ಆಶ್ಛರ್ಯವೋ ಆಶ್ಛರ್ಯ.