ಪುಟ:ರಾಣಾ ರಾಜಾಸಿಂಹ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hಓ೨ ಕಾಣಾ ರಾಜಸಿಂಹ ಪ್ರಕರಣ \ N SAAA 11 1 1 1 ೧/ ಆ ಖಂಡಿಯಿಂದ ಹಾಯ್ದು ಉದಯಸಾಗರದ ದಂಡೆಯಮೇಲೆ ಇನಃ ಛಾವಣಿಯನ್ನು ಹಾಕಿದರು. ಇವರು ರಾತ್ರಿಯನ್ನು ಅಲ್ಲಿಯೇ ಕಳೆಯ ಬೇಕೆಂದು ವಿಚಾರವಾಯಿತು. ಶಿಪಾಯಿ ಮೊದಲಾದವರು ಅನ್ನ ಪಾನಗ ಳಲ್ಲಿ ಮಗ್ನರಾಗಿದ್ದರು. ಊಟ ತೀರಿದಮೇಲೆ ಹಾಡೋಣ, ಬಾರಿಸೋಣ ಕಥೆಗಳನ್ನು ಹೇಳಿಕೊಳ್ಳೋಣ, ಇವೆಲ್ಲ ಆರಂಭವಾದವು ಒಬ್ಬ ಮುಸ ಲ್ಯಾನನು-« ಭಾಯಿ, ಹಿಂದುರಾಜ್ಯದಲ್ಲಿ ಬಂದದ್ದರಿಂದ ನಮಗೆ ಏಕಾ ದಶಿಯ ಉಪವಾಸವುಂಟಾಯಿತು ” ಎಂದನು ಅದನ್ನು ಕೇಳಿ ಒಬ್ಬ ಮೊಗಲನ್ನೀಯು-« ಬದುಕಿದ್ದದರಿಂದ ನಿಮಗದು ದೊರೆಯಿತು. ಇಲ್ಲ ದಿದ್ದರೆ ನೀವು ಸತ್ತುಹೋಗಿದ್ದರೆ, ನಾವು ಉಪವಾಸ ಬೀಳಬೇಕಾಗು ತಿತ್ತು” ಎಂದು ಹೇಳಿದಳು. ಒಬ್ಬ ಗಾಯಕಿಯು ಎಷ್ಟೋ ರಸಿಕರನ್ನು ತನ್ನ ಗಾನದಿಂದ ಆನಂದ ಗೊಳಿಸುತ್ತಿದ್ದಳು ಹಾಡುತ್ತ ಹಾಡುತ್ತ ತಾಳ ತಪ್ಪಿದನ್ನು ಕಂಡು ಒಬ್ಬನು- ಬೀಬಿ, ಲಕ್ಷ ಹೀಗೇಕೆ ಆಯಿತು? ತಾಳವೇಕೆ ತಪ್ಪಿತು? ?” ಎಂದು ಕೇಳಿದನು ಅದಕ್ಕೆ ಅವಳು ನಿಮ್ಮ ಪ್ರತಾಪವನ್ನು ಕಂಡು,” ಎಂದು ಉತ್ತರಕೊಟ್ಟಳು ಉದೇಪುರದ ಬೇಗ ಮೃಳ ಹರಣ ಮಾಡಿದ್ದನ್ನು ಕೇಳಿ ಎಲ್ಲರೂ ಚಕಿತರಾದರು, ಶೇರಖಾನ ನೆಂಬೊಬ್ಬ ಶಿಪಾಯಿಯು ರಾಮಾಯಣದೊಳಗಿನ ಸೀತಾಪಹರಣಕ್ಕೂ ಬೇಗಮ್ಮಳ ಹರಣಕ್ಕೂ ಸರಿಹೋಲಿಸಿ ಸರಸಾಗಿ ಹೇಳುತ್ತಿದ್ದನು. ಅದ ರೊಳಗೆ ಕೆಲಕೆಲವರು ನಡುವೆ ಬಾಯಿಹಾಕಿ c« ಎಲೆ, ಬಾದಶಹನೊಡನೆ ಇಷ್ಟು ಕಪಿಸೇನೆಯು ಬಂದಮೇಲೆ ಸೀತೆಯ ಬಿಡುಗಡೆಯಾಗುವುದಿಲ್ಲ ವೇ? ಎಂದು ಹೇಳುತ್ತಿದ್ದನು. ಈಪ್ರಕಾರ ಅನೇಕತರದ ಮಾತು ಕಥೆಗಳು ನಡೆಯುತ್ತಿದ್ದವು, ಬಾದಶಹನು ಬೇಗಮ್ಮಳ ಡೇರೆಗೆ ಹೋದಕೂಡಲೆ ಅವಳು ಎಲ್ಲ ಸಂಗತಿಯನ್ನು ಉಪ್ಪು ಕಾರ ಹೆಚ್ಚಿ ಹೇಳಿದಳು. ಚಂಚಲ ಕುಮಾರಿಯ ಕಡೆಯ ವಾಕ್ಯವನ್ನೂ ಅವನ ಕಿವಿಯ ಮೇಲೆ ಹಾಕಿದಳು. ಅದನ್ನು ಕೇಳಿ ಬಾದಶಹನು ತಪ್ತನಾದನು. ಅಕಬರ ಬಾದಶಹನ ಬಿಡುಗ ಈಗ ದಿಲೇರಖಾನನನ್ನು ಕಳಿಸಿಕೊಟ್ಟನು. ಮರುದಿವಸ ಸಭೆಗೂಡಿಸಿ ಅಲ್ಲಿ