೧೧೮ ಸತೀಹಿತೈಷಿಣಿ (ತ್ರೈಮಾಸಿಕ A 2 / 3 4 1 1 1 // + + # \ • • • IfM ಗಳನ್ನು ವಾದ್ಯಗಳೊಡನೆ ಹಾಡಿ, ಸಂತೋಷವನ್ನು ಹೆಚ್ಚಿಸುವುದಕ್ಕೂ ನನಗೆ ನಮ್ಮ ತಂದೆಯ ಅಪ್ಪಣೆಯಾಗಿದೆ. ಅಷ್ಟೆಲ್ಲವನ್ನೂ ನಾನೊಬ್ಬ ಳೇ ನಿಂತು ನೆರವೇರಿಸಲಾರೆನೆಂಬ ಶಂಕೆಯಿಂದ ನಿನ್ನನ್ನೂ, ಶಾರದೆಯ ನ್ಯೂ ಸಹಾಯಕ್ಕೆಂದು ಕರೆದು ತಂದೆನು. ” ಈ ಮೇಲಿನ ಉತ್ತರ ಪ್ರತ್ಯುತ್ತರಗಳು ಭಾಸ್ಕರ ಭಟ್ಟಾಚಾರೈರ ವ್ಯ ನೆಗೆ ಇದಿರಾಗಿದ್ದ ಉಪ್ಪರಿಗೆಯ ಮನೆಯ ಒಳತೊಟ್ಟಿಯ ಕಿರುಮನೆಯ ಲ್ಲಿದ್ದ ಪೂರ್ಣಕಲಾ ಕುಮುದೆಯರಿಗೆ ನಡೆಯುತ್ತಿದ್ದುವು. ಇಬ್ಬರೂ ನಿಂತಿದ್ದರು, ಬಾಗಿಲನ್ನು ಹಾಕಿ ಅದಕ್ಕೆ ಅಡ್ಡಲಾಗಿ ತಾನೇ ನಿಂತಿದ್ದ ಕುಮುದೆಯು,ಗಾಬರಿಗೊಂಡು ಹೊರಟುಹೋಗಲು ಸಮ್ಮತಿಯನ್ನು ಈ ಳುತ್ತಿದ್ದ ಪೂರ್ಣಕಲೆಯ ಕಗ್ಗ ಳನ್ನು ಬಲವಾಗಿ ಹಿಡಿದಿದಳು. ಪೂಣ೯ ಕಲೆಗೆ-ಪಾಪ ! ಭಯವು ಹೆಚ್ಚಿತು. ಹೊರಟುಹೋಗ ಬೇಕೆಂಬ ಆತುರವು ;-ಆದರೆ ಹೋಗುವಲ್ಲಿಗೆ ? ಹೇಗೆ ? ಪೂರ್ಣಕಲೆ ಯ ವಯಸ್ಸು ೧೩ ಮಾತ್ರ. ಕುಮುದೆಗೆ ೧೫ ನೆಯ ವರ್ಷವು ನಡೆಯು ತಿದೆ. ಅಲ್ಲದೆ, ಆಕಾರ, ಶರೀರ ಸೌಷ್ಠವ, ಬಲಾಧ್ಯತೆ, ವಾಗ್ಸ್ ಖರಿ, ಅಂಗಭಂಗಿ, ಸಾಹಸ, ಧೈಯ್ಯಗಳೇ ಮೊದಲಾದ ವಿಚಾರಗಳೆಲ್ಲದ ರಲ್ಲಿಯ ಕುಮುದೆಯು, ಪೂರ್ಣಕಲೆಗೆ ದ್ವಿಗುಣಾಧಿಕಳಾಗಿದ್ದಂತೆ ತೋರುತ್ತಿದ್ದಳು. ಹೀಗಿರುವ ಯವನೋನ್ಮುಖಿಯಾದ ಕುಮುದೆಯ ದೃಢಮುಷ್ಟಿಯನ್ನು, - ಭೀರುಸ್ವಭಾವಿಯೂ, ಲಜ್ಞಾವತಿಯ, ಬಾ ಲೆಯೂ ಆಗಿರುವ ಪೂರ್ಣಕಲೆಯು ಬಿಡಿಸಿಕೊಳ್ಳಲಾದೀತೇ ? ಎಷ್ಟೋ ಹೇಳಿದಳು, ಫಲವಿಲ್ಲವಾಯಿತು. ಮೇಲೆ ಹೇಳಿದ ಕುಮದೆಯ ಮಾತಿ ನಿಂದ ಪೂರ್ಣಕಲೆಯ ಭಯವು ಮತ್ತೂ ಹೆಚ್ಚಿತು; ಕಂಬನಿದುಂಬಿ ಕೇಳಿಕೊಂಡಳು. (6 ಕುಮುದಾ ! ನಿನ್ನ ಕಾಲಿಗೆ ಬೀಳುವೆನು. ಸ್ವಲ್ಪಹೊತ್ತು
ಪುಟ:ಪೂರ್ಣಕಲಾ.djvu/೧೩೬
ಗೋಚರ