ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ{| ಮಾರ್ಗಶಿರ) ಪೂರ್ಣ ಕಲಾ ೧೧೬ \\ / \ / \ / * * * * * • , , , , v. \ \ \ / \ \ \ / \ / s \ / \ + 1/ “ ನಷ್ಟವಾವುದೂ ಇಲ್ಲದಿದ್ದರೂ ಅಜ್ಜಿಯ ನಿಷ್ಟೂರ, ಮಾವನ ಆಕ್ಷೇಪ, ಇವುಗಳಿಗೆ ಅವಕಾಶವುಂಟಾಗುವುದು. “ಅಜ್ಜಿಯ ನಿಷ್ಟೂರ ! ಅದೇಕೆ ? ಈ ಮನೆಗೆ ಬರಬೇಕಾದರೂ ಅವರನ್ನು ಕೇಳಿ ಒರಬೇಕೊ ?

  • ಬೇಡವೆ-ಕುಮುದೆ ? ಮನೆಯಲ್ಲಿ ನಾನಿಲ್ಲದಿದ್ದರೆ ಅವರ ವು ನಸ್ಸು ಹೇಗಾಗಬಹುದು-ಯೋಚಿಸು. ಹೇಳದೆ ಕೇಳದೆ ಮನೆಯ ಹೊಸ ಲನ್ನು ದಾಟಿ ಹೊರಗೆ ಹೋಗುವದೆಂದರೇನೆಂದು-ಕೂಗಲಾರರೇ ? ”

“ ನಮ್ಮಮ್ಮ -ಬಿಡು ಬಿಡು ! ಎಷ್ಟು ಬಡಿವಾರವನ್ನು ಕಿರು ತೀಯೆ! ಇಂತಹ ಕೆಲಸಕ್ಕೆ ಬಾರದ ಆಕ್ಷೇಪಗಳನ್ನು ನಾವೆಂದೂ ಕೇಳಿ ದವರಲ್ಲ. ಇರಲಿ, ನಾಳೆಯಿಂದ ನಾನೂ ನಿಮ್ಮ ಮನೆಗೆ ಬರುವುದನ್ನು ನಿಲ್ಲಿಸಿದರಾಯಿತು ! ಆದರೆ, ಕಲೆ ? ಇದೊಂದು ದಿನದ ಮಟ್ಟಿಗಾದರೂ ನಮ್ಮ ಮನೆಯವಳಾಗಿರು. ನೋಡು ಮನೆಯಲ್ಲಿ ನಮ್ಮ ಅಪ್ಪಯ್ಯನಿಗೆ ಇಂ ದು ಹುಟ್ಟಿದ ಹಬ್ಬವು! ಇಂದಿಗೆ ಅವರಿಗೆ ೪೫ ನೆಯ ವರ್ಷವು ತುಂಬಿ, ೪೬ ನೆಯ ವರ್ಷಕ್ಕೆ ಮೊದಲಾಗುತ್ತದೆ. ಆದುದರಿಂದ ಜನ್ಮ ದಿನದ ಉ ತ್ಸವವನ್ನು ಸಡಗರದಿಂದ ನಡೆಯಿಸಬೇಕೆಂದು ನಮ್ಮ ತಂದೆಯು ಎಷ್ಟೋ ಸನ್ನಾ ಹಮಾಡಿರುತ್ತಾರೆ. ಈದಿನ, ನಮ್ಮ ತಂದೆಯ ಶಿಷ್ಯ ಮಂಡಲಿ ಯವರೆಲ್ಲರಿಗೂ ದೊಡ್ಡ ಔತಣವು. ಅವರೆಲ್ಲರೂ ಇನ್ನು ಸ್ವಲ್ಪಹೊತ್ತಿ ನಲ್ಲಿ ಬರುತ್ತಾರೆ. ಅವರು ಬರುವ ಸೊಬಗನ್ನಾದರೂ ನೀನು ನೋಡ ಬೇಕೋ-ಬೇಡವೆ ? ಪೂರ್ಣಕಲೆ ! ಸ್ವಲ್ಪದಯೆಯಿಟ್ಟು ನನಗಾಗಿ ನಿಲ್ಲು!-ಆ ವೇಳೆಯಲ್ಲಿ ಅವರನ್ನು ಆದುಸಿ ಕರೆತಂದು ತಂದೆಯಮುಂದೆ ಬಿಡುವದಕ್ಕೂ, ಎಲ್ಲರಿಗೂ ಉಪಹಾರ-ಪಾನೀಯಗಳನ್ನು ಒಪ್ಪಿಸಿ ಫಲ ಪುಷ್ಪ, ಗಂಧ-ತಾಂಬೂಲಗಳನ್ನು ಕೊಡುವದಕ್ಕೂ, ಆ ಬಳಿಕ ಅವರ ಮನಸ್ಸಿಗೆ ಉಲ್ಲಾಸವಾಗುವಂತೆ ಸೊಗಸಾದ ಹೊಸಮಟ್ಟುಗಳ ಸಂಗೀತ