೧೯ದ್ವಿತೀಯಾಂಕಂ.
ಚಕ್ರವರ್ತಿಯಾದ ಕಂಸ ಭೂಪಾಲನ ಬಳಿಯಲ್ಲಿ ನಿನ್ನ ಮಾಯೋಪಾಯ
ಗಳೇನೂ ನಡೆಯಲಾರವೆಂದು ತಿಳಿ !
ದೇವಕಿ:-ಉ|| ಅಣ್ಣನೇಕೇಳು ನಿನ್ನ ಒಡಹುಟ್ಟಿದ ಸೋದರಿಯಾದ ಯೆನ್ನೊಳೀ!
ಬಣ್ಣದಿ ಕೋಪಗೊಂಡು ನೆರೆ ಸಂಹರಿಸಲ್ ಪಿಡಿದಿರ್ಪೆ ಧರ್ಮವೇ| ನಣ್ಣ
ವಿಚಾರಿಸಣ್ಣ ಧರಣೀಶ್ವರರೊಳ್ ನಿನಗಿರ್ಪ ಕೀರ್ತಿಯುಂ| ಗಣ್ಯತೆ
ಯು೦ ವಿನಾಶವಹುದಣ್ಣ ಕಟಾಕ್ಷಿಸಿ ರಕ್ಷಿಸಣ್ಣ ನೀಂ ||
ಅಣ್ಣಾ ! ಒಡಹುಟ್ಟಿದ ತಂಗಿಯಾದವಳಿಗೆ, ಧನಕನಕ ವಸ್ತು
ವಾಹನಾದಿಗಳನ್ನು ಕೊಟ್ಟು ಮನ್ನಣೆ ಮಾಡಬೇಕಾದುದು ಲೋಕ
ಧರ್ಮವಾಗಿರುವಲ್ಲಿ, ಅಂತಹ ಧರ್ಮವನ್ನು ತೊರೆದು ಒಡಹುಟ್ಟಿದವಳ
ಕುತ್ತಿಗೆಯನ್ನು ಕತ್ತರಿಸತಕ್ಕವರು ನಿನ್ನ ಹೊರತು ಲೋಕದಲ್ಲಿ ಮತ್ತಾ
ರಾದರೂ ಇರುವರೇನಣ್ಣ?
ಕಂಸ:- ನಿಜ ! ಒಡಹುಟ್ಟಿದ ತಂಗಿಯನ್ನು ಕೊಲ್ಲತಕ್ಕವನು
ಲೋಕದಲ್ಲಿ ನಾನೊಬ್ಬನೇ ! ಒಡಹುಟ್ಟಿದವನ ಪಾಲಿಗೆ ಮೃತ್ಯುದೇವತೆ
ಗಳಾದ ಮಕ್ಕಳನ್ನು ಹೆರತಕ್ಕವಳೂ ನೀನೊಬ್ಬಳೇ ! ಇದೊಂದೇ
ನನ್ನ ಆಗ್ರಹಕ್ಕೆ ಮೂಲಕಾರಣವು.
ವಸುದೇವ:-(ತನ್ನಲ್ಲಿ) ಓಹೋ ! ಈತನನ್ನು ಸಮಾಧಾನಪ
ಡಿಸುವದಕ್ಕೆ ಸ್ವಲ್ಪ ಅವಕಾಶ ವುಂಟಾದಂತಿದೆ. ಹೇಳಿ ನೋಡುವೆನು.
ಎಲೈ ಕಂಸ ಭೂಪಾಲನೇ ! ಧೀರನೂ, ಶೂರನೂ, ವೀರನೂ ಆದ
ನೀನು, ಈ ಸ್ವಲ್ಪ ವಿಷಯಕ್ಕಾಗಿ ಇಷ್ಟು ಚಿಂತಿಸಬೇಕೇ ?
ಕಂಸ:-ಇದಕ್ಕಿಂತಲೂ ಹೆಚ್ಚಾದ ವಿಷಯವಾವುದು ? ನನ್ನ
ಕ್ಷೇಮವನ್ನು ನಾನು ನೋಡಿಕೊಳ್ಳುವುದೇ ಮಹದ್ವಿಚಾರವು.
ವಸುದೇವ-ಭಾವಾ | ನಿನ್ನ ಕ್ಷೇಮವೇ ನಮ್ಮ ಕ್ಷೇಮವು.
ಅಶರೀರವಾಣಿಯು ಹೇಳಿದುದೇನು ? ಈಕೆಯ ಗರ್ಭದಲ್ಲಿ ಜನಿಸುವ
ಮಕ್ಕಳಿಂದ ನಿನಗೆ ಹಾನಿ ಯುಂಟಾಗುವುದೆಂದು ಹೇಳಿದಳೇ ಹೊರತು
ಈಕೆಯಿಂದಲೇ ನಿನಗಾಪಾಯವುಂಟಾಗುವುದೆಂದು ಹೇಳಲಿಲ್ಲವಷ್ಟೆ !
ಕಂಸ:-ಎಲೈ ಮೂರ್ಖ ಶಿರೋಮಣಿಯೇ ! ಈಕೆ ಇದ್ದರಲ್ಲ
ವೇ ಈಕೆಗೆ ಮಕ್ಕಳಾಗುವುದೂ, ಅವುಗಳಿಂದ ನನಗೆ ಕೇಡುಂಟಾಗು