ಪುಟ:ಶ್ರೀ ಕೃಷ್ಣ ಲೀಲೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೦ ಕೃಷ್ಣಲೀಲೆ
ವುದೂ ಮುಂತಾದ ಸಂಶಯಗಳು. ಅನರ್ಥ ಪರಂಪರೆಗೆ ಕಾರಣಭೂತ
ಳಾದ ಇವಳನ್ನೇ ಕೊಂದುಬಿಟ್ಟರೆ, ನಂತರ ನಾನು ನಿರ್ಭಿತನಾಗಿರ ಬ
ಹುದಲ್ಲವೆ ?

ವಸುದೇವ-ಹಾಗಲ್ಲ ! “ಯತ್ರಾಪರಾಧಃ ಖಲು ತತ್ರ ದಂಡ” ಎಂ
ಬಂತೆ, ದೋಷವೆಲ್ಲಿರುವುದೋ ಅಲ್ಲಿ ಶಿಕ್ಷೆ ಮಾಡಬೇಕು. ಯಾರಿಂದ
ನಿನಗೆ ಹಾನಿ ಯುಂಟಾಗುವುದೆಂದು ಹೆದರುವೆಯೋ ಅಂತಹ ಈಕೆಯ
(ಗರ್ಭದಲ್ಲಿ ಜನಿಸುವ) ಶಿಶುಗಳನ್ನೆಲ್ಲಾ ನಿನಗೊಪ್ಪಿಸುತ್ತೇನೆ ! ಪುಣ್ಯಾ
ತ್ಮನೇ! ಈಕೆಯನ್ನು ಕೊಲ್ಲಬೇಡ. ನಿನ್ನಡಿಗಳಿಗೆರಗುವೆನು. ಕೈಮು
ಗಿದು ಬೇಡುವೆನು.

ಕಂಸ:-ನೀನು ಹೇಳುವುದೇನೋ ಸ್ವಲ್ಪ ಯುಕ್ತವಾಗಿಯೇ
ಕಾಣುತ್ತದೆ. ಆದಾಗ್ಯೂ, ಹುಟ್ಟುವ ಶಿಶುಗಳನ್ನೆಲ್ಲಾ ನನಗೆ ತಂದೊ
ಪ್ಪಿಸುವಿರೆಂಬುದಕ್ಕೆ ಭರವಸೆ ಯೇನು?

ವಸುದೇವ:~ * ಮತ್ತ ಕೋಕಿಲವೃತ್ತಂ *
     ಭಾವ! ನಿನ್ನಯ ತಂಗಿ ಈಕೆಯ ಪಾರಧರ್ಮ ಗುಣಾಢ್ಯಳೈ|
     ಭಾವನೀಯ ಚರಿತ್ರೆ ಭೀತಳು ಬಾಲೆ ನವ್ಯ ವಿವಾಹಿತೇ|
     ಶ್ರೀವಿಲಾಸಿನಿ ದೀನಕ೦ಪಿತ ಚಿತ್ತಳೀಕೆಯ ರಕ್ಷಿಸೈ |
     ದೇವಕೀ ಸುತರೆಲ್ಲರಂ ನಿನಗೀವೆ ಶೂರ ಶಿಖಾಮಣೀ॥

     ಈಕೆಯು ಗರ್ಭವನ್ನು ಧರಿಸಿ ಪ್ರಸವಿಸಿದ ಕೂಡಲೇ ಪ್ರತಿ
ಯೊಂದು ಮಗುವನ್ನೂ ತಂದು ನಿನಗೊಪ್ಪಿಸುವೆನು. ನಿನ್ನ ರೌದ್ರ
ವನ್ನು ಬಿಟ್ಟು ಪ್ರಸನ್ನನಾಗು !

ಕಂಸ:-ವಸುದೇವಾ ! ಕೇಳಿದುದಕ್ಕೆ ಮಾತ್ರ ಪ್ರತ್ಯುತ್ತರವಿಲ್ಲ.
ಮಿಕ್ಕ ವಿಚಾರಗಳನ್ನೆಲ್ಲಾ ಹೇಳುತ್ತಿರುವೆ !

ವಸುದೇವ-ಹುಟ್ಟುವ ಮಕ್ಕಳನ್ನೆಲ್ಲಾ ನಿನಗೊಪ್ಪಿಸುವೆವಲ್ಲಾ.
ಮತ್ತೇನು ಸಂಶಯವು ?

ಕಂಸ;-ಮಕ್ಕಳನ್ನೆಲ್ಲಾ ತಂದೊಪ್ಪಿಸುವಿರೆಂಬುದಕ್ಕೆ ಭರವಸೆ ಯೇನು ?