ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ್ರಸ್ತಾವನೆ

ಶ್ಲೋ|| ಯೇಷಾಂನವಿದ್ಯಾನತಪೋನದಾನ೦। ಜ್ಞಾನಂಚಭಕ್ತಿಶ್ಚನಶೀಲವೃತ್ತಿಃ|
       ತೇಮರ್ತ್ಯಲೋಕೇಭುವಿಭಾರಭೂತಾ| ಮನುಷ್ಯರೂಪೇಣ ಮೃಗಾಶ್ಚರಂತಿ||

ಎಂಬ ಆರೆ ಆ್ಯ__ಯಂತೆ, ಭಗವದ್ಭಕ್ತಿಯಿಲ್ಲದ ಮನುಷ್ಯರನ್ನು ಮಾನ
ವರೂಪದಿಂದ ಕಾಣುವ ದ್ವಿಪಾದ ಪಶುಗಳೆಂದು ಹೇಳಬಹುದು!

ಕಮಲೆ:-ಹಾಯೆ ! ಹಾಯೆ !! ಅಂಥವರಿಗೆ ಧಿಕ್ಕಾರವಿರಲಿ !!!

ಕರುಣಾ:-ಅಂತಹ ಧಿಕ್ಕಾರವನ್ನು ನಾವುಮಾತ್ರವೇ ಹೇಳ
ಬೇಕಾಗಿಲ್ಲವು! ಕೇವಲ ಜಡಪದಾರ್ಥಗಳು ಕೂಡಾ ಗಂಭೀರವಾಗಿ
ಸಾರುತ್ತಿರುವುವು !

ಕಮಲೆ:- ಪ್ರಿಯಾ ! ಅದುಹೇಗೆ ?

ಕರುಣಾ:- ಪ್ರಿಯೇ ! ಲಾಲಿಸು !

ಶ್ಲೋ|| ಯೇಷಾ೦ಶ್ರೀಮದ್ಯಶೋದಾ ಸುತಪದಕಮಲೇನಾಸ್ತಿ ಭಕ್ತಿರ್ನರಾಣಾಂ|
       ಯೇಷಾಮಾಭೀರಕನ್ಯಾಪ್ರಿಯಗುಣಕಥನೇ ನಾನುರಕ್ತಾರಸಜ್ಞಾ!
       ಯೇಷಾಂ ಶ್ರೀಕೃಷ್ಣಲೀಲಾ ಲಲಿತಗುಣರಸೇಸಾದ‌ರೌ ನೈವಕರ್ಣೌ |
       ಧಿಕ್ರ್ಶಾ ! ಧಿಕ್'ರ್ತಾ !! ಧಿಗೇರ್ತಾ !!! ಕಥಯತಿಸತತ೦ ಕೀರ್ತನ
       ಸ್ಥೋಮೃದಂಗಃ||

       ನಂದಗೋಪ ಸುಂದರಿಯಾದ ಶ್ರೀ ಯಶೋದಾಕುಮಾರನ ಪದ
ಕಮಲಗಳಲ್ಲಿ ಭಕ್ತಿಯಿಲ್ಲದವರಿಗೂ, ಗೋಪಿಕಾ ವಲ್ಲಭನ ಗುಣಕೀರ್ತ
ನೆಯಲ್ಲಿ ರಸಜ್ಞತೆಯಿಲ್ಲದವರಿಗೂ, ಶ್ರೀ ಕೃಷ್ಣ ಲೀಲೆಯನ್ನು ಕೇಳು
ವುದರಲ್ಲಿ ಆಸಕ್ತಿಯಿಲ್ಲದ ಕಿವಿಗಳಿಗೂ, ಧಿಕರ್ತಾ! ಧಿಕರ್ತಾ !! ಅಂ
ದರೇ ಅಂತಹ ನರಪಶುಗಳಿಗೆ ಧಿಕ್ಕಾರವಿರಲಿ | ಧಿಕ್ಕಾರವಿರಲಿ | ಧಿಕ್ಕಾ
ರವಿರಲೆಂದು "ಮೃದಂಗವು" ಕೀರ್ತನಾರಂಭದಲ್ಲಿಯೇ ಸೂಚಿಸುತ್ತದೆ!
ಆದುದರಿಂದ ನಪಂಸಾಲಂಕಾರ ಭರಿತವಾದ ಶ್ರೀಕೃಲೀಲೆಯನ್ನು
ಕೇಳುವುದರಲ್ಲಿ ಅಭಿರುಚಿಯಿಲ್ಲಡವರು ಕೇವಲ ಅರಸಿಕರಾದ ನರಪಶು
ಗಳೆನಿಸುವರು!

    ಕಮಲೆ:-ಹಾಗಾದರೆ , ಶ್ರೀ ಕೃಷ್ಣ ಲೀಲೆಯಲ್ಲಿ, ಶೃಂಗಾರರಸ,
ವೀರರಸ, ಕಾರುಣ್ಯರಸ, ಅದ್ಭುತರಸ, ಹಾಸ್ಯರಸ, ಭೀಭತ್ಸರಸ,