ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕೃಷ್ಣಲೀಲೆ

ವಾಸಿಗಳಾದ ಗೋಪಾಲಕರೂ, ಗೋವಸುಂದರಿಯರೂ, ಗೋವುಗಳೂ
ಆನಂದ ಸಮುದ್ರದಲ್ಲಿ ಓಲಾಡಿದರೋ, ಅಚೇತನಗಳಾದ ತರುಲ
ತಾದಿಗಳು ಸಹಾ ತನ್ಮಯವಾಗಿ ಪ್ರತಿಧ್ವನಿಗೈದುವೋ, ಆವ ಜಗದೇಕ
ಪರಾಕ್ರಮಶಾಲಿಯು, ಲೋಕ ಕಂಟಕರಾದ ಕಂಸಾದಿ ದುಷ್ಟರಾಕ್ಷ
ಸರನ್ನು ಸಂಹರಿಸಿ ಧರ್ಮಸಂಸ್ಥಾಪನೆ ಗೈದನೋ, ಆವ ಪರಬ್ರಹ್ಮನ ಲೀಲಾ
ಮಾನುಷ ವಿಲಾಸವನ್ನು ಕಂಡು ಇಂದ್ರಾದಿ ಬೃಂದಾರಕರು ಸಹ ಚಕಿ
ತರಾದರೋ, ಆ ಜಗನ್ನಾಥನಾದ ಶ್ರೀಕೃಷ್ಣ ಪರಮಾತ್ಮನನ್ನು ಕುರಿತ
ಸ್ತೋತ್ರವು!
    ಕಮಲೆ:-ನಾಥಾ! ವೇಣುನಾದವನ್ನು ಕೇಳಿ, ಸಚೇತನಗಳಾದ
ಗೋ, ಗೋಪ, ಗೋಪಿಯರು ಆನಂದ ತುಂದಿಲರಾಗುವುದೇನೋ ಸಹ
ಜವು! ಅಚೇತನಗಳಾದ ತರುಲತಾದಿಗಳು ಸಹ ವಿಕಾಸಹೊಂದಿ ಪ್ರತಿ
ಧ್ವನಿ ಕೊಡಬೇಕಾದರೆ ಅಂತಹ ಗಾನವನ್ನು ಮಾಡಿದ ಶ್ರೀಕೃಷ್ಕನು
ಸಾಕ್ಷಾತ್ ಪರಮಾತ್ಮನೆಂಬಲ್ಲಿ ಸಂಶಯವೇನಿದೆ? ಹಾಗಲ್ಲದಿದ್ದರೆ,ಸರ್ವ
ವ್ಯಾಪಕತ್ವವು ವಿಶ್ವಮಯನಾದ ಭಗವಂತನಲ್ಲಿ ಹೊರತು ಅನ್ಯರಲ್ಲಿರಲಾ
ರದಲ್ಲವೆ?

    ಕರುಣಾ:-ಅಹುದು! ಆದುದರಿಂದಲೇ ವೇದವೇತ್ತರಾದ ಮಹ
ರ್ಷಿಗಳು-
   ಶ್ಲೋ||ಬ್ರಹ್ಮಣ್ಯೋ ದೇವಕೀಪುತ್ರೋ| ಬ್ರಹ್ಮಣ್ಯೋ ವಿಷ್ಣುರಚ್ಯುತಃ|
         ಬ್ರಹ್ಮಣ್ಯಃ ಪುಂಡರೀಕಾಕ್ಷೋ| ಬ್ರಹ್ಮಣ್ಯೋ ಮಧುಸೂದನಃ|
         ನಪೋಬ್ರಹ್ಮಣ್ಯದೇವಾಯ | ಗೋಭೂರಹಿತಾಯಚ |
         ಜಗದ್ಧಿತಾಯ ಕೃಷ್ಣಾಯ | ಗೋವಿಂದಾಯ ನಮೋನಮಃ|

ಎಂದು ಬಗೆಬಗೆಯಾಗಿ ಬಣ್ಣಿಸಿರುವರು.

      ಕಮಲೆ:-ವೇದವೇತ್ತರಾದ ಮಹರ್ಷಿಗಳೇ ಹೀಗೆ ಸ್ತೋತ್ರ
ಮಾಡಿರುವಲ್ಲಿ, ಪರಮದಯಾಕರಮೂರ್ತಿಯಾದ ಭಗವಂತನನ್ನು ಭಕ್ತಿ
ಯಿಂದ ಭಜಿಸದವರ ಜನ್ಮವು ವ್ಯರ್ಥವಲ್ಲವೆ !

      ಕರುಣಾ:-ಸಂಶಯವೇನಿದೆ?