ಪುಟ:ಶ್ರೀ ಕೃಷ್ಣ ಲೀಲೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ರ ಸ್ತು
ಶ್ರೀಗೋಪಾಲಕೃಷ್ಣ ಪರಬ್ರಹ್ಮಣೇ ನಮಃ

'ಶ್ರೀಕೃಷ್ಣಲೀಲೆ'
                                -----------
ಪ್ರಸ್ತಾವನೆ
ಕರುಣಾಕರ:- ನಾಂದೀವೃತ್ತಂ.

ಶ್ರೀ
ರಾಮಾಮಣಿ ರುಕ್ಕಿಣೀಮಣಿ ಮನೋಲ್ಲಾಸಂ ಸುರಾರಾಧಿತಂ|
ಪಾರಾಶರ್ಯ ವಸಿಷ್ಥ ನಾರದಮುಖ ಪ್ರಸ್ತೂಯಮಾನಂಮಹಾ|
ಕಾರುಣ್ಯಾ ಯತ ದಿವ್ಯಚಿತ್ರಮಮಲಂ ಕಂಜಾತಪತ್ರಾಂಬಕಂ|
ಶ್ರೀರಾಧಾರಮಣೀ ವಿನೋದನಿರತಂ ಶ್ರೀಕೃಷ್ಣಮೂರ್ತಿಂಭಜೇ||

ರಾಗ-ಆ೦ದಭೈರವಿ-ಏಕತಾಳ

ಭಜೇಮುಕುಂದಮಾಧವಂ | ನಿಜಾಶ್ರಿತಾವನಂ || ಪ ||
ಮಾರಮಣಿಮಾನಸವಿಲಾಸಸುಂದರಂ ಸಮಸ್ತದುಃಖಶೋಷಣಂ|
ಪ್ರಶಸ್ತಧರ್ಮಭೂಷಣಂ|| ಅ || ಪ ||
ಅನಂತರೂಪಮವ್ಯಯಂ | ಅನೂನಸತ್ಯಭಾಷಣಂ| ಮನೋಜಕೋಟಿ
ಸನ್ನಿಭಂ| ದಿನೇಶಚಂದ್ರಲೋಚನಂ|| ಭಜೇ ||
ಅನನ್ಯದಿವ್ಯಸುಂದರಂ| ಅಪಾರಶೌರ್ಯಮಂದಿರಂ| ಮುನೀಂದ್ರಮಾನಸಾ
ಲಯಂ | ನಮಾಮಿಲೋಕನಾಯಕಂ || ಭಜೇ ||

ಕಮಲೆ:-ಪ್ರಿಯಾ ! ಈ ಸ್ತೋತ್ರವು ಯಾರನ್ನು ಕುರಿತು? '
ಕರುಣಾ:- ಪ್ರಿಯೆ! ಆವ ಮಹಾಪುರುಷನ ಮುಖಾರವಿಂದದಿಂದ
ಪ್ರವಹಿಸಿದ ವೇಣುನಾದ ಮಕರಂದವನ್ನು ಸವಿದು, ನಂದಗೋಕುಲ