ಸೇತುಬಂಧನದ ಕಥೆ 115, ವಾಗಿ ಈ ಕಡಲನ್ನು ಹೂಳಿಸಿ ಮಾರ್ಗವನ್ನು ಸಿದ್ಧಮಾಡಿ ಕರೆದು ಕೊಂಡು ಹೋಗಿ ಹಗೆಯಾದ ರಾವಣನನ್ನು ನಿನಗೆ ತೋರಿಸುವೆನು, ಆ ಮೇಲೆ ಅವನನ್ನು ಕೊಲ್ಲಬೇಕಾದರೂ ಉಳು ಹಬೇಕಾದರೂ ಸರ್ವಜ್ಞ ಚಿತ್ರ ವೇ ಕಾರಣವೆಂದು ಬಿನ್ನವಿಸಿ ದನು, ಆ ಮೇಲೆ ಗವಾಕ್ಷನೆಂಬ ಕವಿನಾಯಕನೆದ್ದು ಕೈಮುಗಿದು- ಎಲೈ ರಾಘವೇಂದ್ರನೇ, ಈ ನನ್ನೊಡೆಯನಾದ ಸುಗ್ರೀವನು ನುಡಿದ ನುಡಿಯು ನನ್ನ ಶೌರ್ಯಾತಿಶಯಕ್ಕೆ ಭೂಷಣವಾದುದೆಂದು ಹೇಳಲಾರೆನು. ಕಪಿನಾಯಕರೆಲ್ಲಾ ಕಷ್ಟ ಪಟ್ಟು ಈ `ಕಡಲನ್ನು ಹೂಳುವುದೇಕೆ ? ಈ ನನ್ನ ಉದ್ದವಾದ ಬಾಲ ವಂದನೆ. ಲಂಕೆಗೆ ಕಳುಹಿಸಿ ಹುಲು ಪರೆಗೆ ಸಮಾನನಾದ ರಾವಣನನ್ನು ಹಿಡಿದು ತರಿಸುವೆನು ಎಂದು ಹೇಳಿದನು. ಆಗ ಗವಯನೆಂಬ ವಾನರ ಸೇನಾಪತಿಯು ಗವಾಕ್ಷ ನನ್ನು ಕುರಿತು ಲೋಕೈಕವೀರನಾದ ರಾಮನ ಮುಂಗಡೆಯಲ್ಲಿ ಒಳ್ಳೆಯ ಪರಾಕ್ರ ಮೋಕ್ಕಿಯನ್ನಾಡಿದಿ ! ಬಲು ಚೆನ್ನಾ ಯಿತು. ಛೇ ! ಆಚೆಗೆ ಹೋಗು, ಹಗೆಯಾದ ರಾವಣನೊಬ್ಬನನ್ನು ಮಾತ್ರ ಹಿಡಿದು ತರುವುದು ಮಹಾ ಪೌರುಷವೋ ? ಆಜ್ಞೆ ಯಾ ದರೆ ಆ ಖಳನನ್ನೂ ಅವನ ಸಮಸ್ತ ಬಲವನ್ನೂ ಅವನ ವಾಸಸ್ಥಾನವಾದ ಲಂಕಾದು ರ್ಗವನ್ನೂ ಕ್ಷಣಕಾಲದಲ್ಲಿ ತಂದು ಈ ರಾಘವನ ಮುಂದಿಳುಹದಿದ್ದರೆ ನಾನು ಬಂಟ ನಲ್ಲ ವೆಂದು ಬೊಬ್ಬಿರಿದನು, ಆ ಮೇಲೆ ಶರಭನೆಂಬ ಕಪಿವೀರನು--ನಮ್ಮೆದುರಿಗಿರುವ ಈ ಸಮುದ್ರವನ್ನು ಬಿಟ್ಟು ಈ ಕೆಲಸವನ್ನು ಮಾಡುವುದು ಬಲು ದೊಡ್ಡದಲ್ಲ. ಕೊಡನ ಮಗನಾದ ಅಗಸ್ಯನ ಹಾಗೆ ಮೊದಲು ಈ ಕಡಲನ್ನೆಲ್ಲಾ ಕುಡಿದು ಆ ಮೇಲೆ ರಾವಣನ ತಲೆಗಳನ್ನು ತರಿದು ತಂದು ಈ ರಾಮನ ಮುಂದೊಟ್ಟು ವೆನು ಅಂದನು. ಅನಂತರದಲ್ಲಿ ಸರ್ವಸೇನಾಪತಿಯಾದ ನೀಲನು--ನೀವು ಹೇಳಿದುದೆಲ್ಲಾ ಮಹಾತಿಶಯವಾದ ಕಾರ್ಯವಲ್ಲ, ಒಡೆಯನ ಅಪ್ಪಣೆಯಾದರೆ ಈ ಬ್ರಹ್ಮಾಂಡವ ನೈ ತಲೆಕೆಳಗುಮಾಡಿಬಿಡುವೆನು ಎಂದು ಗರ್ಜಿಸಿದನು. ಈ ಪ್ರಕಾರವಾಗಿ ಸಮಸ್ತ ಕಪಿಸೇನಾನಾಯಕರೂ ತಮ್ಮ ತಮ್ಮ ಶಕ್ತಿ ಸಾಹ ಸಗಳನ್ನು ವಾಗ್ರೂಪವಾಗಿ ಪ್ರಕಟಿಸಿಕೊಳ್ಳುತ್ತ ಆರ್ಭಟಿಸುತ್ತಿರಲು ; ದಿನಕುಲೇಂ ದ್ರನು ಅದನ್ನೆಲ್ಲಾ ಕೇಳಿ ಅತ್ಯಂತ ಸಂತೋಷದಿಂದ ಹಿಗ್ಗಿ ಹನುಮಂತನ ಮುಖವನ್ನು ನೋಡಿ--ಈ ವಿಷಯ ದಲ್ಲಿ ನಿನ್ನ ಬುದ್ದಿಗೆ ಏನು ಯೋಚನೆಯು ತೋರುತ್ತಿರುವು ದೈಯ್ಯಾ ? ಎಂದು ಕೇಳಲು ; ಮಾರುತಿಯು ಎದ್ದು ಕೈಮುಗಿದು-ಜೀಯಾ, ಈ ಪ್ರಖ್ಯಾತರಾದ ಕಪೀಂದ್ರರೊಳಗೆ ನಾನೆಷ್ಟರವನು ? ಪ್ರಭುವಿನ ಅಪ್ಪಣೆಯಾದಂತೆ ನಡೆ ಯುವುದೊಂದೇ ನನ್ನ ಮತವು ಎಂದು ಬಿನ್ನವಿಸಲು ; ರಾಮನು ಆಂಜನೇಯನ ವಿಚಾರಪೂರ್ವಕವಾದ ಬಿನ್ನ ಪಕ್ಕೆ ಮೆಚ್ಚಿ ಸುಗ್ರೀವನನ್ನು ನೋಡಿ-ಎಲೈ ಪ್ರಿಯ ಸಖನೇ, ನಿನ್ನ ಕಪಿಸೇನಾಪತಿಗಳೆಲ್ಲರಿಗೂ ಅಪ್ಪಣೆಯನ್ನು ಕೊಟ್ಟು ತರುಪರ್ವತಾದಿ ಗಳನ್ನು ತರಿಸು, ಅವರು ತಂದ ತರುಗಿರಿಶಿಲಾದಿಗಳನ್ನು ತೆಗೆದು ಕೊಂಡು ಸಮುದ್ರ ದಲ್ಲಿಟ್ಟು ಸೇತುವನ್ನು ಕಟ್ಟುವಂತೆ ನಳನಿಗೆ ಆಜ್ಞಾಪಿಸು, ಇನ್ನು ಸಾವಕಾಶವೇತಕ್ಕೆ? ಎಂದು ಅಪ್ಪಣೆಯನ್ನು ಕೊಡಲು; ಆಗ ಸುಗ್ರೀವನು ನಳನನ್ನು ಕರಿಸಿ ಅವನಿಗೆ ಶ್ರೀ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೫
ಗೋಚರ