208 ಕಥಾಸಂಗ್ರಹ-೪ ನೆಯ ಭಾಗ ಈ ಪ್ರಕಾರವಾಗಿ ಸರ್ವಜಗನ್ಮನೋಹರಾ೦ಗಿಯಾದ ಜನಕರಾಜನ ಮಗಳು ಸರ್ವ ದಿವಂಬರಾಭರಣಭೂಷಿತಳಾಗಲು; ಆಗ ಸ್ತ್ರೀಯರು ದೃಷ್ಟಿ ದೋಷ ನಿವಾರಣಾ ರ್ಥವಾಗಿ ಆರತಿಯನ್ನೆತ್ತಿ ಹಜಾರದಲ್ಲಿ ಮಂಚದ ಮೇಲೆ ಕುಳಿತಿರುವ ರಾಮಚಂದ್ರನ ಬಳಿಗೆ ಕರೆದು ಕೊಂಡು ಬಂದು ಅವನ ಬಲಗಡೆಯಲ್ಲಿ ಕುಳ್ಳಿರಿಸಿ ಅವರಿಬ್ಬರಿಗೂ ಸೊಡ ರಿನ ಆರತಿಗಳನ್ನು ಎತ್ತಿದರು. ಅಷ್ಟರಲ್ಲಿಯೇ ವಶಿಷ್ಠ ಮಹರ್ಷಿಗಳು ಬಂದು ತಮ್ಮ ಶಿಷ್ಯ ಮಂಡಲಿಯಿಂದ ವೇದ ಘೋಷಗಳನ್ನು ಮಾಡಿಸುತ್ತ ಸೀತಾರಾಮರನ್ನು ಓಲಗದ ಚಾವಡಿಗೆ ಕರೆದು ಕೊಂಡು ಬಂದು ದಿವ್ಯ ಪೀಠಾಗ್ರದಲ್ಲಿ ಕುಳ್ಳಿರಿಸಿದರು. ತರುವಾಯ ವಶಿಷ್ಠರೇ ಮೊದಲಾದ ಎಂಟು ಜನ ಮಹರ್ಷಿಗಳೂ ಅಷ್ಟವಸುಗಳೂ ಇಂದ್ರನನ್ನು ಹೇಗೋ ಹಾಗೆ ನಿರ್ಮಲವಾಗಿಯ ದಿವ್ಯಪರಿಮಳ ಯುಕ್ತವಾಗಿಯೂ ಇರುವ ಪವಿತೋದಕದಿಂದ ಸೀತಾರಾಮರಿಗೆ ಅಭಿಷೇಕವನ್ನು ಮಾಡಿದರು. ಆ ಮೇಲೆ ಮುನಿ ಪತಿಗಳೂ ಮಂತ್ರಿಗಳೂ ದಳವಾಯಿಗಳೂ ಜ್ಞಾನವೃದ್ದ ರೂ ವಯೋವೃದ್ದ ರೂ ಆದ ಪುರ ಜನರೂ ಇವರೇ ಮೊದಲಾದ ಸರ್ವಜನರೂ ಚತುಸ್ಸಮುದ್ರೋದಕಗಳಿಂದಲೂ ಗಂಗಾ ದಿಮಹಾನದಿಗಳ ಪುಣೋದಕಗಳಿಂದಲೂ ಅಖಿಲೌಷಧೀರಸಗಳಿಂದಲೂ ಕ್ರಮವಾಗಿ ಅಭಿ ಷೇಕವನ್ನು ಮಾಡಿ ಹರಸಿದರು. ಪೂರ್ವದಲ್ಲಿ ಸರೋಜಸಂಭವನು ತಾನೇ ದಿವ್ಯ ರತ್ನ ಮಯವಾದ ಮಹಾಕಿರೀಟವನ್ನು ನಿರ್ಮಿಸಿ ರಘುವಂಶದ ರಾಜರಿಗೆ ಆದ್ಯನಾದ ವೈವ ಸ್ವತಮನುವಿಗೆ ಕೊಟ್ಟಿದ್ದ ಅಸದೃಶವಾದ ಕಿರೀಟವನ್ನು ಪುರೋಹಿತರಾದ ವಶಿಷ್ಠ ರು ಸಂತೋಷದಿಂದ ತೆಗೆದು ಕೊಂಡು ಬಂದು ರಾಮನ ಶಿರಸ್ಸಿಗೆ ಧರಿಸಿದರು, ಆಗ ಶತ್ರು ೬ನು ಶ್ವೇತಛತ್ರವನ್ನು ಹಿಡಿದು ನಿಂತನು. ಕಪಿರಾಕ್ಷಸ ರಾಜರಾದ ಸುಗ್ರೀವ ವಿಭೀಷ ಣರು ಶ್ವೇತ ಚಾಮರಗಳನ್ನು ಹಿಡಿದು ಕೊಂಡು ಪಟ್ಟಾಭಿಷಿಕ್ತನಾದ ಶ್ರೀರಾಮನ ಉಭಯ ಪಾರ್ಶ್ವಗಳಲ್ಲೂ ಬೀಸುತ್ತಿದ್ದರು. ಆಗ ವಾಯುವು ದೇವೇಂದ್ರನಿಂದ ಪ್ರೇರಿ ತನಾಗಿ ದಿವ್ಯವಾದ ಮುತ್ತುಗಳ ಕಂಠಮಾಲಿಕೆಯನ್ನು ತೆಗೆದು ಕೊಂಡು ಬಂದು ಶ್ರೀರಾಮಚಂದ್ರನ ಕೊರಳಿಗೆ ಹಾಕಿದನು. ಆಗ ದೇವಲೋಕದಲ್ಲಿ ಸುರದುಂದುಭಿ ಗಳು ಮೊಳಗಿದುವು, ಗಂಧರ್ವಾದಿ ದೇವಗಾಯಕರು ದಿವ್ಯಗಾನವನು ಮಾಡಿ ಸಂತೋ ಪಿಸಿದರು, ಅಷ್ಟರಾಂಗನೆಯರು ನರ್ತಿಸಿ ನಲಿದಾಡಿದರು. ದೇವತೆಗಳು ಪೂಮಳೆಯನ್ನು ಕರೆದರು, ಶೈತ್ಯಸೌರಭ್ಯಮಾಂದ್ಯ ಯುಕ್ತವಾದ ವಾಯುವು ಬೀಸಿತು, ದಿಕ್ಕುಗಳೆಲ್ಲಾ ನಿರ್ಮಲವಾದುವು. ಸುಜನರ ಹೃದಯಗಳೆಲ್ಲವೂ ಪ್ರಸನ್ನ ತೆಯನ್ನು ಹೊಂದಿ ಆನಂದ ಯುಕ್ತಗಳಾದುವು. ಪುಣ್ಯಕರ್ಮಲತೆಯು ಕುಡಿವಡೆದು ಹಬ್ಬಿತು. ಸತ್ಯವು ನಿಶ್ಚಂಚಲತೆಯನ್ನೊಳಗೊಂಡಿತು, ದೇಶವೆಲ್ಲವೂ ನಿರ್ಭಯದಿಂದೊಡಗೂಡಿತು. ವೇ ದಶಾಸ್ತ್ರಗಳ ಪ್ರಚಾರವು ಅಭಿವೃದ್ಧಿಗೆ ಬಂದಿತು. ವಿಶೇಷವರ್ಣನೆಯಿಂದೇನು ? ರಘುಕುಲದ ಕೀರ್ತಿಚ೦ದ್ರನು ಪ್ರಸಿದ್ದ ಚಂದ್ರನನ್ನು ಹೊಯ್ದ ಸ್ಪಳಿಸಿ ಕ್ಷಯಕ್ಕೆ ಗುರಿಮಾಡಿದನು, ಸರ್ವಲೋಕವೂ ಆನಂದಾಂಬುಧಿಯೊಳಗೆ ಮುಳುಗಿತು, ಅನಂ ತರದಲ್ಲಿ ಶ್ರೀರಾಮಚಂದ್ರನು ಚತುರ್ವಣ್ರದವರಿಗೂ ದೀನಾನಾಥವಿಪನ್ನರಿಗೂ ಕುರುಡ ಕುಂಟರೇ ಮೊದಲಾದ ಅಂಗಹೀನರಿಗೂ ಅಪರಿಮಿತವಾದ ಧನಕನಕವಸ್ಸಾ ಭರಣಾದಿಗಳನ್ನು ಕೊಟ್ಟು ದಣಿಸಿದನು. ಆಗ ಸಂತೋಷಯುಕ್ತನಾದ ಶ್ರೀರಾಮ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೮
ಗೋಚರ