ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 207 ಗಳಿಗೇ ಅಸದೃಶವಾದ ಪ್ರಾಶಸ್ತ್ರಮು೦ಟಾಗುವುದೇ ಹೊರತು ಅವುಗಳಿ೦ದಿವಳಿಗೇನೂ ಸೌಂದರ್ಯವುಂಟಾಗಲಾರದು ಎಂದು ಹೇಳಲು ; ಆಗ ಮತ್ತೊಬ್ಬಳು- ಎಲೈ ತಂಗಿಯೇ, ನೀನು ಹೇಳಿದ ಮಾತು ಸತ್ಯವಾದುದೇ ಸರಿ. ಆದರೂ ಲೋಕದ ನಡವ ಳಿಕೆಯ ಪ್ರಕಾರ ಈಕೆಗೆ ಆಭರಣಗಳನ್ನು ತೊಡಿಸಬೇಕಾಗಿದೆ ಎಂದು ಹೇಳಿ ಸೀತಾ ದೇವಿಯ ಕಾಲ್ಕೆರಳುಗಳಿಗೆ ವಜ್ರದ ಆಣಿಮೆಟ್ಟು ಕಾಲುಂಗುರ ಬೊಬ್ಬುಳಿಕಾಯಿ ಅಕ್ಕಿ ವಿಲ್ಲಿ ಕಿರುಪಿಲ್ಲಿಗಳೆಂಬ ಒಡವೆಗಳನ್ನು ಇಕ್ಕಿದುದರಿಂದ ಆ ಬೆರಳುಗಳ ಉಗುರು ಗಳ ಶ್ರೇಷ್ಠವಾದ ಕಾಂತಿಯಿಂದ ಪರಾಜಿತಗಳಾದ ನಕ್ಷತ್ರಗಳು ಬಂದು ಸೀತಾದೇ ವಿಯ ಪದನಖಗಳನ್ನು ಸೇವಿಸುತ್ತಿವೆಯೋ ಎಂಬಂತೆ ಪ್ರಕಾಶಿಸಿದುವು, ಮತ್ತೊಬ್ಬಳು ವಿಲಾಸವತಿಯು ಅರಗಿನ ರಸವನ್ನು ತಂದು ಬತ್ತಿಯಿಂದ ಅದ್ದಿ ತೆಗೆದು ಸೀತಾದೇ ವಿಯ ಕಾಲ್ಪಕ್ಕೆ ಹಿಂಮಡಿಗಳಿಗೆ ಬೊಳಿದು ಶೃಂಗರಿಸಲು ; ಆ ಅರಗಿನ ರಸದ ಕಾಂತಿ ಯೊಡನೆ ಕೂಡಿದ ಪಾದದ ಕೆಂದಳಿರ್ವಣ್ಣವು ಸೂರ್ಯೋದಯ ಕಾಲದಲ್ಲಿ ಉಂಟಾ ಗುವ ಪ್ರಾತಸ್ಸಂಧ್ಯಾರಾಗವನ್ನು ಪಳಿಯುತ್ತಿದ್ದಿತು. ಇನ್ನೊಬ್ಬಳು ಗಾಡಿಕಾತಿಯು ಚಿನ್ನ ದಿಂದ ಮಾಡಲ್ಪಟ್ಟ ಮನೋಹರವಾದ ಲುಳಿಯನ್ನು ತೆಗೆದು ಕೊಂಡು ಬಂದು ಸೀತಾದೇವಿಯ ಕಾಲುಗಳಿಗೆ ಇಡಲು ; ಅವುಗಳು ಬಾಲಾದಿತ್ಯನ ಪರಿವೇಷದಂತೆ ಕಂಗೊಳಿಸಿದುವು. ಮತ್ತೊಬ್ಬಳು ಮಾನಿನಿಯು ಸುವರ್ಣದ ಸರಿಗೆಗಳಿಂದ ನೇಯ ಲ್ಪಟ್ಟು ಅತಿ ರಮ್ಯತೆಯನ್ನೊಳಗೊಂಡಿರುವ ದಿವ್ಯವಾದ ಸೀರೆಯನ್ನು ಚೆನ್ನಾಗಿ ನೆರಿ ಹಿಡಿದು ತಂದು ಉಡಿಸುವುದಕ್ಕೆ ಆರಂಭಿಸಿ ಬಲುಹೊತ್ತಿನ ವರೆಗೂ ಆಕೆಯ ನಡು ವನ್ನು ಕಾಣದೆ ಕಡೆಗೆ ಪ್ರಯಾಸದಿಂದ ಬಡನಡುವನ್ನು ಕಂಡು ಉಡಿಸಿದಳು ಮತ್ತೊಬ್ಬಳು ಕಮಲವಿಮಲಮುಖಿಯು ಸುವರ್ಣದ ನ್ಯಾವಣದಿಂದಲೂ ಕಿರುಗೆಜ್ಜೆ ಗಳಿಂದಲೂ ಕೂಡಿ ನವರತ್ನ ಖಚಿತವಾದ ನಡುವಿನ ಪಟ್ಟಿಯನ್ನು ತಂದು ಜನಕನಂದಿ ನಿಯ ನಡುವಿಗಿಟ್ಟು ನೋಡಿ ಈ ಸೊಬಗು ಯಾರಿಗುಂಟೆಂದು ತಲೆದೂಗಿದಳು. ಇನ್ನೊಬ್ಬಳು ಭೂಮಿಜೆಯ ಕೈಬೆರಳುಗಳಿಗೆ ಚಿತ್ರ ವಿಚಿತ್ರ ಗಳಾದ ಉಂಗುರಗಳನ್ನು ತಂದು ತೊಡಿಸಿದಳು. ಇನ್ನೋರ್ವಳು ಹಸ್ತಗಳಿಗೆ ನವರತ್ನ ಖಚಿತಗಳಾದ ಕಟಕ ಹಿಂಬಳೆ ಚಳಿಕೆ ಮುಂತಾದ ಆಭರಣಗಳನ್ನೂ ತೋಳುಗಳಿಗೆ ನಾಗಮುರಿ ಬಾಜೇಂ ದುಗಳನ್ನೂ ಕೊರಳಿಗೆ ಕಂಠೀಸರ ಕಡಲೇಕಾಯಿಯ ಸರ ಜಿರೀ ಸರ ಮುತ್ತಿನ ಸರ ಜೋಮಾಲೆ ಅಡ್ಡಿ ಕೆ ನಕ್ಷತ್ರಮಾಲಿಕೆ ಈ ಮೊದಲಾದ ನಾನಾವಿಧವಾದ ಕಂಠಾಭರಣ ಗಳನ್ನೂ ಹಣೆಯಲ್ಲಿ ಶ್ರೇಷ್ಠ ಮೌಕ್ತಿಕಗಳಿಂದ ರಚಿಸಲ್ಪಟ್ಟ ಚುಟ್ಟಿಯನ್ನೂ ಮೂಗಿನಲ್ಲಿ ಮನೋಹರವಾದ ಮೂಗುತಿಯನ್ನೂ ನಡುದಲೆಯಲ್ಲಿ ಮಲಕುಗೊಂಡೇ ಧಾರಗ ಳನ್ನೂ ಹಿಂದಲೆಯಲ್ಲಿ ಜಡೆ ಭಂಗಾರವೇ ಮೊದಲಾದ ವಿವಿಧಾಭರಣಗಳನ್ನೂ ಇಟ್ಟು ಇನ್ನೂ ಹೇಳುವುದಕ್ಕೆ ಅಸಾಧ್ಯವಾದ ಅಪಾರಾಭರಣಗಳನ್ನೂ ಇಟ್ಟು ಶೃಂಗರಿಸಿದಳು. ಮತ್ತೊಬ್ಬಳು ದಿವ್ಯ ರತ್ನ ಪುಂಜರಂಜಿತವಾಗಿ ನೋಡುವವರ ಕಣ್ಣಗೆಗಳನ್ನು ಸೆಳೆ ಯುತ್ತ ಅಸದೃಶವಾಗಿರುವ ಕುಪ್ಪಸವನ್ನು ತೊಡಿಸಿದಳು, ಈ ರೀತಿಯಾಗಿ ವಿವಿಧಾಭ ರಣಾಂಬರಗಳಿಂದ ಭೂಷಿತಳಾದ ಸೀತಾದೇವಿಯನ್ನು ನೋಡಿ ಅಂತಃಪುರನಾರಿಯರು ತಲೆದೂಗಿ ನಲಿದು ಸೀತಾದೇವಿಯ ಜನ್ಮ ವನ್ನು ಕೊಂಡಾಡಿ ದಣಿದರು.