ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 163 ಅಧೀನಮಾಡಿಕೊಳ್ಳಬೇಕೆಂಬ ಕೊನೆಮುಟ್ಟಿದ ದುರಾಲೋಚನೆಯನ್ನು ಮಾಡಿಕೊಂಡು ನಮ್ಮನ್ನು ಬಿಟ್ಟು ಒಂದು ನಿಮ್ಮನ್ನು ಸೇರಿದ್ದಾನೆ ಲೋಕದಲ್ಲಿ ಹಸುವಿಗೂ ಹುಲಿಗೂ, ಹಾವಿಗೂ ಗರುಡನಿಗೂ ಮಿತ್ರತ್ವವು ಸಂಭವಿಸುವುದುಂಟೇ ? ಎಂದಿಗೂ ಇಲ್ಲ ವು. ನಿಮ್ಮ ಗತಿಯು ಕಡೆಗೇನಾಗುವುದು ನೋಡಿಕೋ ಎಂದನು. “ ಆ ಮಾತುಗಳನ್ನು ಕೇಳಿ ಲಕ್ಷ್ಮಣನು-ಎಲಾ ನೀಚನೇ, ಈ ರಣರಂಗದಲ್ಲಿ ಎದುರಾಗಿ ನಿಂತು ಕಾದಲಾರದೆ ಕಪಟ ತಂತ್ರದ ಮಾತುಗಳ ಬಳಕೆಯಿಂದ ಬೆದರಿಸಿ ದರೆ ಬೆದರುವರೆಂದು ಮನಸ್ಸಿನಲ್ಲಿ ಬಗೆದಿಯಾ ? ನೀನು ಶುದ್ಧ ಮೂಢಾತ್ಮನೇ ಸರಿ ! ಕೊಳಕಾದ ಕಪ್ಪೆಚಿಪ್ಪಿನಲ್ಲಿ ಹುಟ್ಟಿದುದಾದರೂ ಮುತ್ತಿಗೆ ಆ ಕೊಳಕಿನ ಸಂಪರ್ಕ ವುಂಟೇ ? ಹಾಗೆ ದುರಾತ್ಮ ಪಾಪಪಂಕಲೇಪಿತರ ಆದ ನಿಮ್ಮೊಡನೆ ಹುಟ್ಟಿ ದವನಾ ದರೂ ಮಹಾತ್ಮನಾದ ಈ ವಿಭೀಷಣನು ನಿರ್ಮಲಾತ್ಮನೆಂಬುದನ್ನು ನಾವು ತಿಳಿಯೆವೇ? ಸಾಕು ! ಇನ್ನು ಹೀಗೆ ಹುಚ್ಚು ಮಾತುಗಳನ್ನು ಬೊಗುಳದಿರು ! ಕುದುರೆಗಳನ್ನು ಹೊಡಿ ! ರಥವನ್ನು ಮುಂದಕ್ಕೆ ನೂಕು ! ಕಣೆಗಳನ್ನು ಪ್ರಯೋಗಿಸು ! ನಿಷ್ಪಲವಾದ ಮಾಯಾ ಪಾಂಡಿತ್ಯವನ್ನು ಆಶ್ರಯಿಸಿಕೊಂಡು ನಮ್ಮೆದುರಿಗೆ ಮೆರೆದು ಮೊಂಕಾಗ ಬೇಡ ಎಂದು ಹೊಸ ಸಾಣೆಯ ಕೂರಲಗುಗಳನ್ನು ಶಿಂಜಿನಿಯಲ್ಲಿ ಹೂಡಿ ಲಕ್ಷೀಕರಿಸಿ ಇಂದ್ರಜಿತ್ತನ್ನು ಹೊಡೆದನು. ಆಗ ರಾವಣಿಯು ತನ್ನನ್ನು ಕೊಲ್ಲುವುದಕ್ಕೆ ಬರುತ್ತಿ ರುವ ಲಕ್ಷ್ಮಣನ ಕೂರಲಗುಗಳನ್ನು ಮಾರ್ಸರಳುಗಳಿಂದ ನಡುದಾರಿಯಲ್ಲೇ ಕಡಿದು ಬೀಳಿಸಿ ಬಿಲ್ಲಿನಲ್ಲಿ ನೈರುತಾಸ್ತ್ರವನ್ನು ಹೂಡಿ ಗುರಿಗಟ್ಟಿ, ಲಕ್ಷ್ಮಣನೆದೆಗೆಸೆಯಲು ; ಆ ಬಾಣಗಳು ಪ್ರತ್ಯಸಹತಿಗಂಜದೆ ನುಗ್ಗಿ ಬಂದು ಲಕ್ಷಣನಿಗೆ ತಗುಲಲು ; ಆಗ ರಕ್ತ ಸುರಿದು ಕಳವಳಗೊಂಡು ಕೈಯಾಡದೆ ನಿಂತಿರುವ ಲಕ್ಷ್ಮಣನನ್ನು ನೋಡಿ ಕಪಿ ವೀರರು ಕೋಪೋದ್ರೇಕದಿಂದ ಕೂಡಿ ಬಂದು ರಾವಣಿಯನ್ನು, ಕವಿದರು, ಆಗ ಶೂರನಾದ ರಾವಣಾತ್ಮಜನು ಕವಿಯುವುದಕ್ಕೆ ಬಂದ ನೀಲನನ್ನು ಇಕ್ಕಿ ಮಲಗಿಸಿ ದನು, ಅಂಗದನನು ನೆಕ್ಕುರುಳಿಸಿದನು, ಆ ಜಾಂಬವಂತನನು ತಲೆನಡುಗುವಂತೆ ತೆಗೆದಿಟ್ಟನು, ಗವಾಕ್ಷ ನನ್ನು ಉಸಿರಡಗಿತೋ ಎಂಬಂತೆ ಹೊಡೆದನು. ನಳನನ್ನು ಓಡಿಸಿಕೊಂಡು ಹೋಗಿ ಬಡಿದನು. ಸುಷೇಣನನ್ನು ಹಲ್ಲಿ ರಿಯುವಂತೆ ತಿವಿದನು. ನಿರ್ದಾಕ್ಷಿಣ್ಯದಿಂದ ಹೊಯ್ತು ಗಜಗವಯರನ್ನು ಮರ್ಛಗೊಳಿಸಿದನು. ಎದುರಾದ ಆಂಜನೇಯನನ್ನು ಬಾಣಾಂಬುಧಿಯಲ್ಲಿ ಹೂಳಿ ವಿಭೀಷಣನನ್ನು ಜಗಳಕ್ಕೆ ಬಾಗೆಂದು ಕೆಣಕಿದನು, ಮುನಿದರೆ ವಿಭೀಷಣನು ಯುದ್ಧಕ್ಕಂಜುವ ವೀರನೇ ? ಕೋಪಿಸಿ ನಿಂತರೆ ಲಂಕಾದುರ್ಗವನ್ನು ನಿರ್ನಾಮಮಾಡದಿರುವನೇ ? ಆಗ ವಿಭೀಷಣನು ತನ್ನ ಮಹಾ ಗದಾಯುಧವನ್ನು ತೆಗೆದುಕೊಂಡು ಅಣ್ಣನ ಮಗನ ರಥವನ್ನು ಹೊಯ್ದನು. ಇಂದ್ರಜಿತ್ತು ಚಿಕ್ಕಪ್ಪನ ಗದೆಯ ಹೊಯ್ದಿನ ಮಹಾ ಘಾತವನ್ನು ತಿಳಿದಿದ್ದವನಾದು ದರಿಂದ ಕೂಡಲೆ ಪಕ್ಷಿಯಂತೆ ಮತ್ತೊಂದು ರಥಕ್ಕೆ ಹಾರಿ ಬದುಕಿದನು. ಮೊದಲ ರಥವು ಆಶ್ವ ಸಾರಥಿಗಳೊಡನೆ ನುಚ್ಚುನುರಿಯಾಗಿ ಮಣ್ಣಿನಲ್ಲಿ ಬೆರೆದು ನಿಶೈಷವಾಯಿತು. ಆಗ ದೇವತೆಗಳು ವಿಭೀಷಣನನ್ನು ಹೊಗಳಿದರು, ಕಸಿಕಟಕವೆಲ್ಲವೂ ಹರ್ಷಧ್ವನಿ ಯನ್ನು ಮಾಡಿತು, ಆ ಮೇಲೆ ವಿಭೀಷಣನು ತೋರಿದ ಕಡೆಗೆ ನುಗ್ಗಿ ರಾಕ್ಷಸ ಸೇನೆ ಗಳನ್ನು ಸವರುತ್ತ ಯಮಲೋಕವನ್ನು ಕಾಣಿಸುತ್ತಿದ್ದನು.