ಕುಂಭಕರ್ಣಸಂಹಾರ 127 ಕೂಡಲೆ ಹನುಮಂತನು ಆ ಲತೆಗಳನ್ನು ತರುವುದಕ್ಕಾಗಿ ಜಾಂಬವದಾದಿಗಳಿಗೆ ನಮ ಸ್ಕರಿಸಿ ಸನ್ನದ್ಧನಾಗಿ ನಿಲ್ಲಲು ; ಅಷ್ಟರಲ್ಲಿಯೇ ಗೈರಿಕಾದಿಧಾತುಮಯವಾದ ಮಹಾಶರೀರವನ್ನು ಧರಿಸಿ ಅದರಲಿ ಋಗೋದ ಮಯವಾದ ಬಲದ ಗರಿಯ ಯಜುರ್ವೇದಮಯವಾದ ಎಡದ ಗರಿಯ ಸಾಮವೇದಮಯವಾದ ಮುಖಮಂಡಲವೂ ಉಪನಿಷದ್ವಿಕಾರವಾದ ಒಡಲೂ ಉಳ್ಳವನಾಗಿ ಗರುಡನು ಚಂದ್ರಮಂಡಲದತ್ತಣಿಂದ ಹೊರಟು ಆ ರಣಭೂ ಮಿಗಿಳಿದು ಬರುತ್ತಿರಲು ; ಆತನ ಗರಿಯ ಗಾಳಿಯ ಘಾತದಿಂದ ಸಮುದ್ರವೆಲ್ಲವೂ ಕಲಕಲ್ಪಟ್ಟು ತುಂತುರು ಹನಿಗಳು ಅಂಬರದಲ್ಲಿ ತುಂಬಿದುವು. ಮೇರುಮಂದರ ವಿಂಧ್ಯಾದಿ ಕುಲಾಚಲಗಳು ಅಲುಗಿದುವು. ಮಹಾಶೇಷವಾಸು ಕಿರ್ತಕಾದಿ ಸರ್ಪ ಪತಿಗಳ ಮೈಸಿರಿಗಳು ಉಡುಗಿದುವು. ಉಳಿದ ಬಣಗುಹಾವುಗಳಲ್ಲಿ ಖಗರಾಜನ ಮುಂದೆ ಒಂದನ್ನಾದರೂ ಕಾಣೆನು, ಕೆಲವು ಭು ಜಂಗಮಗಳು ಕ್ಷಣಮಾತ್ರದಲ್ಲಿ ಅಸುಗಳನ್ನು ತೊರೆದುವು. ಇನ್ನು ಕೆಲವು ನೆಲವನ್ನು ಕೊರೆಕೊರೆದು ಹೊಕ್ಕು ಮರೆ ಯಾದುವು. ಕೆಲವು ಪನ್ನಗಗಳು ಮುನ್ನೀರಲ್ಲಿ ಹೊಕ್ಕು ಅಡಗಿಕೊಂಡುವು. ಕೆಲವು ತೋರಿದ ಕಡೆಗೆ ಮುರಿದು ಕೆಟ್ಟೂಡಿದುವ, ಇನ್ನು ಕೆಲವು ಆ ರಣಭೂಮಿಯಲ್ಲಿ ಹುತ್ತಗಳನ್ನು ಅರಸುತ್ತ ತಿರುಗಿದುವು. ಕೆಲವು ಗರುತ್ಮಂತನ ಉಗ್ರದೃಷ್ಟಿಗೆದುರಾಗಿ ಸುಟ್ಟು ಕರಿಮುರಿಯಾಗಿ ಹೋದುವು. ಇನ್ನು ಹೇಳತಕ್ಕುದೇನು ? ಜಗತ್ತಿನಲ್ಲಿ ಸರ್ಪ ಕುಲಕ್ಕೆ ಮಹಾ ಪ್ರಳಯ ದಿನವು ಸಂಭವಿಸಿತು. ಆ ಮೇಲೆ ಶ್ರೀರಾಮನೂ ಲಕ್ಷ್ಯ ಣನೂ ಮೂರ್ಛಿಯಿಂದಚ್ಚೆತ್ತು ಕಣ್ಣೆರೆದು ನಸುನಗುತ್ತ ವಿಹಗೇಂದ್ರನನ್ನು ನೋಡಿ ದರು. ಸರ್ಪಗಳೂ ಅವುಗಳ ವಿಷೋನ್ನತಿಯ ನಿರ್ನಾಮವಾದುದರಿಂದ ವಾನರಬಲ ವೆಲ್ಲಾ ಮಲಗಿದ್ದೆದ್ದಂತೆ ಎದ್ದು ಒಡೆಯನಾದ ಶ್ರೀರಾಮನಿಗೆ ನಮಸ್ಕರಿಸಿ ಶೀಘ್ರವಾಗಿ ಅಲ್ಲಿಂದ ಹೊರಟು ಮೃತ್ಯುವಿನ ದಂಡಿನಂತೆ ಲಂಕಾನಗರವನ್ನು ಮುತ್ತಿ ರಾಕ್ಷಸಸಂಘ ನನ್ನು ಸಂಹರಿಸುತ್ತಿರಲು ; ಆಗ ರಾವಣನು ಅದನ್ನು ನೋಡಿ ಚಿಂತಾಕ್ರಾಂತನಾಗಿ ಶೂರದೈತ್ಯಪರಿವಾರದೊಡನೆ ಬಲ್ಲಿದರಾದ ವಜ್ರದಂಷ್ಟ್ರನನ್ನೂ ಧೂಮ್ರಾಕ್ಷನನ್ನೂ ಯುದ್ಧಕ್ಕೆ ಕಳುಹಿಸಲು; ಕೂಡಲೆ ಕಪಿವೀರಾಗ್ರಗಣ್ಯನಾದ ಅಂಗದನು ವಜ್ರದಂಷ್ಟ ನೊಡನೆಯ ನಿಶಾಚರಕುಲತೂಲದಾವಾನಲನಾದ ಆಂಜನೇಯನು ಧೂಮ್ರಾಕ್ಷ ನೊಡನೆಯ ಯುದ್ದ ಕ್ಕೆ ನಿಂತು ಆಶ್ಚರ್ಯರೀತಿಯಿಂದ ಯುದ್ಧ ಮಾಡಿ ಕಡೆಗೆ ಆ ರಾಕ್ಷಸರಿಬ್ಬರನ್ನೂ ಬಲವಾಗಿ ಬಡಿದು ಕೊಂದು ಬಿಟ್ಟು ಅವರೊಡನೆ ತಂದಿದ್ದ ಚತು ರಂಗಬಲದಲ್ಲಿ ಸ್ವಲ್ಪವಾದರೂ ಹಿಂದಿರುಗದಂತೆ ಸವರಿ ಬೊಬ್ಬಿರಿದರು, ರಾವಣನು ಆ ಸಂಗತಿಯನ್ನು ಕೇಳಿ ಪರಿತಪ್ತ ಚಿತ್ತನಾಗಿ ಅಪರಿಮಿತಬಲದೊಡನೆ ಅಕಂಸನೆಂಬ ಘೋರ ಪರಾಕ್ರಮಿಯನ್ನು ರಣರಂಗಕ್ಕಟ್ಟಲು ; ಮಹಾಬಲಗರ್ವಿತನಾದ ಮಾರುತಿಯು ಅವನ ಮೇಲೆ ಬಿದ್ದು ಅವನ ಕೈಗಳನ್ನು ಹಿಡಿದೆಳೆದು ತಿರುಗಿಸಿ ಎತ್ತಿ ಬಡಿದು ಕೊಂದು ಬಿಸುಟು ಅವನ ಬಲವನ್ನೆಲ್ಲಾ ಬಯಲು ಮಾಡಿದನು. ಇದನ್ನು ಕೇಳಿ ಕುಪಿತನಾದ ರಾಕ್ಷಸಚಕ್ರವರ್ತಿಯು ತಿರುಗಿ ತನ್ನ ಸರ್ವಸೇನಾನಾಯಕನಾದ ಪ್ರಹಸ್ತನನ್ನು ಕರೆದು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೭
ಗೋಚರ