LL ರಾಣಾ ರಾಜಸಿಂಹ vvvvvs v hvvv tvvvvvvvvvvvvv »v [ಪ್ರಕರಣ vvvvv 41 ಮಟ್ಟಿಯನ್ನು ತುಂಬ ಕೊಳ್ಳುವಿರಿ, ಬಡಜನರಿಗೆ ತಮ್ಮ ಅನ್ನವನ್ನು ಊಟಮಾಡಗೊಡದೆ ಪರಸ್ತ್ರೀಯರನ್ನೂ ಕನ್ನೆ ಯರನ್ನೂ ಬಲಾತ್ಕಾರ ದಿಂದ ಒಯ್ಯಲಿಕ್ಕೆ ಯತ್ನಿ ಸುವಿಂ ಸ್ಮರಣದಲ್ಲಿಡಿರಿ ಈಶ್ವರನು ದೂರ ಇಲ್ಲ ನಾನು ನಿನಗೆ ಸಾದೋಪಚಾರದಿಂದ ಹೇಳುವೆನು ಅವಳನ್ನು ಬಿಡು ಕೇಳದಿದ್ದರೆ ಅದರ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ ? ಎಲೆ ಹೂಗು, ನಿಮ್ಮಂಧ ಮರ್ಕಟಗಳ ಮಾತಿಗೆ ಹೆದರು ವವನು ನಾನಲ್ಲ, ಶಕ್ತಿಯಿದ್ದರೆ ಮುಂದಕ್ಕೆ ಬಾ, ಇಬ್ಬರಿಗೂ ಒಂದು ಕೈಯ್ಯಾಗಲಿ ” ಎಂದು ಆ ಮನುಷ್ಯನಿಗೆ ಒಂದು ಏಟು ಹೊಡೆದನು ಪೆಟ್ಟು ಬಿದ್ದ ಕೂಡಲೆ ಆತನ ಸಿಟ್ಟು ಮಿತಿಇಲ್ಲದಾಯಿತು. ಕೂಡಲೆ ನಡುವಿ ನಲ್ಲಿರುವ ಕರಾರಿಯನ್ನು ಹಿರಿದು ಆ ಪಾಪಿಷ್ಟನ ಎದೆಯಲ್ಲಿ ಪಾರಾಗು ವಂತೆ ನೆಟ್ಟನು ಎದೆಯೊಳಗಿಂದ ರಕ್ತವು ಸುರಿಯಹತ್ತಿತು. ಹಾಗೇ ಮೂರ್ಛಬಂದು ಭೂಮಿಯಲ್ಲಿ ಬಿದ್ದು ಬಿಟ್ಟು ಬೀಳುವಕಾಲಕ್ಕೆ ಸಹಾ ಯಕೊಸುಗ ಘಟ್ಟಿಯಾಗಿ ಕೂಗುಹಾಕಿದನು “ದೊಹಾಯಿ, ಬಾದ ಶಹ ಸಲಾಮತಹೆ, ದೊಹಾಯಿ, ದೊಹಾಯಿ, ಹ್ಯಾ ಕಾಫ ..” ಆ ಹುಸೇನಖಾನನ ಈ ಧ್ವನಿಯನ್ನು ಕೇಳಿದ ಕೂಡಲೆ ಈವರೆಗೆ ನಿರ್ಮಾನುಷವಾದ ಬೀದಿಯು ಮುಸಲ್ಮಾನರಿಂದಲೂ ಮೊಗಲರಿಂದಲೂ ತುಂಬಿಹೋಯಿತು. ಪ್ರತಿಯೊಬ್ಬನು ಕೈಯಲ್ಲಿ ಕತ್ತಿ ಕರಾರಿ ಕೋಲು ಮೊದಲಾದ ಕೈಗೆಸಿಕ್ಕ ಆಯುಧಗಳನ್ನು ತಕ್ಕೊಂಡು ಬಂದರು, ಹುಸೇ ನಖಾನನ ರಕ್ತಸ್ರಾವವನ್ನೂ ಆ ನಿರಾಶ್ರಿತ ತರುಣಿಯ ಸಂರಕ್ಷಣೆಗೋ ಸುಗ ಬಂದವರಿಬ್ಬರನ್ನೂ ನೋಡಿದರು, ಅವರಿಬ್ಬರ ಕೈಯಲ್ಲಿ ಒರೆಗಳೆದ ಕತ್ತಿಗಳಿದ್ದುದರಿಂದ ಅವರ ಮೈಮೇಲೆ ಹೋಗಲಿಕ್ಕೆ ಯಾರಿಗೂ ಧೈರ್ಯ ವಾಗಲೊಲ್ಲದು ದೂರನಿಂತು ಬಯ್ಯುವುದಕ್ಕೆ ಆರಂಭಿಸಿದರು ಮುಸ ಲಾನರ ಸಂಖ್ಯೆಯು ಬೆಳೆಯುತ್ತ ನಡೆಯಿತು, ಅದರಿಂದ ಆ ತರುಣಿಯ ಸಂರಕ್ಷಣೆಯನ್ನು ಹ್ಯಾಗ ಮಾಡಬೇಕೆಂಬ ಘನವಾದ ಚಿಂತೆಯು ಅವ ರಲ್ಲಿ ಮನೆಮಾಡಿಕೊಂಡಿತು, ಆದರೆ ಆಕ್ಷಣದಲ್ಲಿಯೇ ಅವರಿಗೊಂದು
ಪುಟ:ರಾಣಾ ರಾಜಾಸಿಂಹ.djvu/೮೦
ಗೋಚರ