ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಬಾಲಿಕಯಮೇಲಿನ ಅತ್ಯಾಚಾರ ಯುಕ್ತಿಯು ದೊರೆಯಿತು ಆಸ್ಥಳದಿಂದ ಸ್ವಲ್ಪ ಅಂತರದಮೇಲೆ ದೊಡ್ಡ ದೊಂದು ಆಲದಮರವಿತ್ತು, ಅಲ್ಲಿಯವರೆಗೆ ಅವರಿಬ್ಬರು ತಮ್ಮ ಕತ್ತಿಯನ್ನು ತಿರುವುತ್ತ ಹೋದರು, ಮೊಗಲರು “ ಯಾರೊ? ಯಾರೊ? ” ಎಂದು ಒದರಾಡುತ್ತ ಅವರ ಹಿಂದಿಂದೆ ಬಂದರು. ಅವರಿಬ್ಬರು ಈಶ್ವರನನ್ನು ಸ್ಕರಿಸುತ್ತ ಅವರ ಕತ್ತಿಯ ಹೊಡತವನ್ನು ತಪ್ಪಿಸುತ್ತ ಅಲ್ಲಿಗೆ ಬಂದರು. ಈಗ ಮಾತ್ರ ಹೊಡೆದಾಟವು ಬಲವತ್ತರಿವಾಯಿತು, ಎಷೇಜನರಿಗೆ ಗಾಯಗಳಾದವೂ ಒಂದೇ ಸವನೆ ರಕ್ತವು ಪ್ರವಾಹಗೊಂಡಿತು ಅಂಧದ ರಲ್ಲಿ ಇಷ್ಟು ಜನ ಮುಸಲ್ಮಾನರೊಡನೆ ಅವರಿಬ್ಬರೇ ಕೇವಲ ತನ್ನ ಸಂರಕ್ಷ ಣೆಯ ದೆಶೆಯಿಂದ ಹೊಡೆದಾಡುವುದನ್ನು ನೋಡಿ ಏನಾದರೂ ಹೆಚ್ಚು ಕಡಿಮೆಯಾದರೆ ಎಲ್ಲಿ ದೋಷವು ತನ್ನ ಪಾಲಿಗೆ ಬರುವದೆಂದು ಆ ಯುವ ತಿಯು ಕ್ಷಣ ಮಾತ್ರ ಹೆದರಿದಳು ಆದರೆ ಆ ಹೆದರಿಕೆಯು ಸ್ವಲ್ಪ ಹೊತ್ತಿನಲ್ಲಿಯೇ ಅಡಗಿಹೋಯಿತು ಅವರ ಶೌರ್ಯವನ್ನು ನೋಡಿ ಬಹಳ ಆನಂದವೆನಿಸಿತು ಅವರೊಳಗೂ ಹುಸೇನಖಾನನ ಎದೆಯಲ್ಲಿ ಕರಾರಿಯನ್ನು ತಿವಿದ ವೀರನ ಪ್ರತಾಪವನ್ನು ಕಂಡು ಆಶ್ಚರ್ಯಚಕಿತ ಳಾದಳು, “ ಈಶ್ವರಾ ! ಈ ನನ್ನ ರಕ್ಷಣಕರ್ತನನ್ನು ಸುರಕ್ಷಿತವಾಗಿ ರಿಸು” ಎಂದು ಮನಸ್ಸಿನಲ್ಲಿ ಸಹಸ್ರಾವರ್ತಿ ಜಗದೀಶ್ವರನನ್ನು ಪ್ರಾರ್ಥಿ ಸಿದಳು, ಇಷ್ಟರಲ್ಲಿ “ ಪಕಡೆ, ಪಕಡೂ ” ಎಂದು ಒದರುತ್ತ ಹಿಂದಿ ನಿಂದ ಶಿಪಾಯಿಗಳದೊಂದು ಸಮುದಾಯವು ಬಂತು, ಆಮೇಲೆ ಕಂಡ ಕಂಡದಾರಿಯಿಂದ ಎಲ್ಲರೂ ಓಡಿಹೋದರು, ಅದೇ ಸಂಧಿಯಲ್ಲಿ ಆ ತರು ಣಿಯು ತನ್ನ ಸಂರಕ್ಷಕರನ್ನು ದೇವಾಲಯದೊಳಗಿನದೊಂದು ಗುಪ್ತ ಭಾಗಕ್ಕೆ ಬೇಗನೆ ಕರೆದೊಯ್ದಳು ಅಲ್ಲಿ ವಿಶ್ರಾಂತಿಗೋಸ್ಕರ ಸ್ವಲ್ಪ ಹೊತ್ತು ಕೂತುಕೊಳ್ಳಿರೆಂದು ಅವರನ್ನು ಬೇಡಿಕೊಂಡಳು | ಇತ್ತ ಶಿಪಾಯಿಗಳು ಮರಣಾವಸ್ಥೆಯಲ್ಲಿರುವ ಹುಸೇನಖಾನನಿಗೆ ಪಟ್ಟಿ ಮೊದಲಾದುವುಗಳನ್ನು ಕಟ್ಟಿದರು. ಎಲ್ಲ ಕಡೆಯಲ್ಲಿಯೂ ಹುಡುಕಿ ನೋಡಿದರು, ಆದರೆ ಯಾರೂ ಕೈಗೆ ಶಿಗಲಿಲ್ಲ. ಕಡೆಗೆ ಹುಸೇನ ನನ್ನು ಹಕೀಮನ ಕಡೆಗೆ ಕಳಿಸಿದರು.