ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ಮೈರಾವಣನ ಕಾಳಗ ಕೊಲುವೆ ಮೈರಾವಣನ ಬಲವನು, || ನೆಲದೊಳೊಜೆಸುವೆ, ನಿನ್ನ ತನಯಂ || ಗೊಲಿದು ಪಟ್ಟವ ಕಟ್ಟಿ ತನ್ನೊ ಡೆಯರನು ಕೊಂಡುಯ್ಕೆ || ಲನೆ ನೋಡೆಂದೆನಲು ಮಾನಿನಿ | ಮೆಲುನಗೆಯೊಳಣಕಿಸುತ ನುಡಿದಳು | ಕೊಲುವರಿದ ಕೇಳಿದರೆ ದನುಜರು ಹೋಗು ಹೋಗೆನಲು ||೮|| ನೊರಜಿನೆಹಿಕೆಯ ಗಾಯದಲಿ ಕುಲ | ಗಿರಿಗಳೋಡುವುವೇ, ದಿನೇಶನ | ಕಿಕುಸೊಡರು ನುಂಗುವುದೆ, ಶರಧಿಯನಿಕವೆ ದಾಂಟುವುದೇ|| ತರುಚರನೆ ಮೈರಾವಣನ ನೀ || ನೋಡಸಿ ನಿಲಿಸುವೆ ನೀಲಮೇಘನ | ಹರಿಸವಾಯಿತು ತನಗೆನುತ ಗಹಗಹಿಸಿದಳು ದನುಜೆ ||೯|| ಎಣಿಸನವ ಶಂಕರನ, ಶಕ್ರನ || ನೆಣಿಕೆಮಾಡನು, ಹರಿಯ ಮತ್ತೇ | ನಣಕಿಸುವನವನಜಮುಖಾಖಿಲಲೋಕಪಾಲಕರ || ಒಣಗರೆಂಬನು ಮನುಜರನು ನೀ || ತೃಣವವಗೆ ಹುಲುಕಸಿಯೆ ಹೋಗೆನೆ | ವನಿತೆಯಂಜದಿರೆನುತ ನಿಜವನು ತೋಡಿ ದನು ಹನುಮ ||೧೦|| ಒಡನೆ ಬಳೆದನು ಹನುಮ ಕಲ್ಪದ | ಕಡೆಯ ರುದ್ರನೊ ಬಲಿಯ ಬಂಧಿಸಿ | ಪೊಡವಿಯಳೆದ ತ್ರಿವಿಕ್ರಮನೊ ಅತಮಾರುತಿಯೋ | ನಡುಗಿದಳು ದೋರ್ದಂಡಿ ಕಂಗಳ | ನಿಡಿಕಿದು ಭಯದಿಂದ ಪವನಜ | ನಡಿಗೆಗೆ ಹನುಮಂತ ಮುನ್ನಿನ ರೂಹ ಕೈಕೊಂಡ ||೧೧|| ಮಂಗಳಾತ್ಮಕರಾರು ಪೇಜ್‌ ಕಪಿ | ಪುಂಗವನು ನೀನಾರೆನಲು ದನು || ಜಾಂಗನೆಗೆ ವಿವರಿಸಿದನಾಖಳೆ ಕೇಳು ಪದಕೆಗಿ ||