ಪುಟ:ರಾಣಾ ರಾಜಾಸಿಂಹ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಜಯಸಿಂಹನ ಕೌಶಲ ರ್೯ ಜನರು ಬಂದುಬಂದು ಹೋಗುತ್ತಿದ್ದರು ಜಯಸಿಂಹನು ದೂರದಿಂದ ಇದೆಲ್ಲವನ್ನು ನೋಡಿ ಸ್ವಲ್ಪ ವಿಚಾರಮಾಡಿ ಅಲ್ಲಿಗೆ ಬಂದನು ಅಂಗಡಿ ಯಲ್ಲಿ ಎಲೆ ಅಡಿಕೆಗಳನ್ನು ತಕ್ಕೊಂಡು ಅದಕ್ಕೆ ತೋರುವ ಬೆಲೆಗೆ ಇನ್ನ ಡಿಯಾಗಿ ಕೊಟ್ಟನು ಎಲೆಯನ್ನು ತಿನ್ನುತ್ತ ತಿನ್ನುತ್ತ ಅವಳ ಉಡಿಗೆ ತೂಡಿಗೆಗಳನ್ನೂ ಅವಳ ಸೌಂದರ್ಯವನ್ನೂ ವರ್ಣಿಸಲಾರಂಭಿಸಿದನು ಮಾತಾಡುತ್ತ ಮಾತಾಡುತ್ತ ನಿಮಗೂಂದು ವಿಶೇಷ ಸಂಗತಿಯನ್ನು ಹೇಳು ವದಿದೆ ಎಂದು ಅವಳ ನಮಾನಕ್ಕೆ ಹೋಗಿ ಕುಳಿತನು. ಆಮೇಲೆ ** ಬಾಸಾಹೇಬರೆ, ತಮ್ಮ ಚಾತುರ್ಯವು ಅವರ್ಣನೀಯವಾದದ್ದು ನಾನು ನಿಮ್ಮಂಧ ಒಬ್ಬ ಜಾಣಳನ್ನು ಶೋಧಮಾಡುತ್ತಿದ್ದೆನು ನನ ಗೊಬ್ಬ ವೈರಿಯಿರುವನು, ಆತನನ್ನು ಫಜೀತಿಮಾಡಬೇಕಂಬ ಅಪೇಕ್ಷೆ ಯದ ತಮ್ಮ ಸಹಾಯವು ಬೇಕಾಗಿದ ಏನುಮಾಡಬೇಕೆಂಬುದನ್ನು ತಮಗೆ ಹೇಳುತ್ತೇನೆ ನನ್ನ ಕೆಲಸವಾದನಂತರ ನಿಮಗೂಂದು ಮೊಹರು ಕೊಡುತ್ತೇನೆ ?

  • ನಾನು ಮಾಡುವುದನ್ನು ಮೊದಲು ತಿಳಿಸು "

ಈ ಪ್ರಶ್ನೆಗೆ ಜಯಸಿಂಹನು ಸರಿಯಾಗಿ ತಿಳಿಸಿಕೊಟ್ಟನು ಎಲೆ ಮಾರುವವಳಿಗ ಆನಂದವೆನಿಸಿತು ಒಗೆಯನ್ನು ಕೊಟ್ಟಳು “ ನಿನ್ನ ಮೊಹರು ಬೇಡ, ಈ ಯುಕ್ತಿಯಿಂದ ನನಗೂ ಕ್ಷಣಹೊತ್ತು ವಿನೋದ ದೆಸಿಸುವದು ?? • ಎಲೆ ಗಾರ್ತಿಯ ಅನುಮತಿ ದೊರೆದಮೇಲೆ ಜಯಸಿಂಹನು 'ದುಹಮ್ಮದಖಾನನ ಹೆಸರಿನಿಂದ ಒಂದು ಪತ್ರವನ್ನು ಬರೆದನು ಅದ (ರಲ್ಲಿ CC ನಾನು ನಿಮ್ಮ ಮುಖವನ್ನು ಕಂಡು ಮೋಹಗೊಂಡಿರುತ್ತೇನೆ. ಬೆಳಿಗ್ಗೆ ತಾವು ಹೋಗುವವರು, ಈಹೊತ್ತು ರಾತ್ರಿ ೯ ಘಂಟೆಗೆ ನಮ್ಮ ಮನೆಯವರೆಗೆ ಬಂದು ತಮ್ಮ ದರ್ಶನಾಮೃತದಿಂದ ಈ ದಾಸಿಯನ್ನು ತಣಿಸಬೇಕು ನೀವು ಬಂದರೆ ನನಗೆ ಸ್ವಲ್ಪ ಸಮಾಧಾನವೆನಿಸುವುದು, ?