ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧p ವಿಶಾಲಾಕ್ಷಿ ಮುರಲಿ ಈಗಾಗಲೇ ಅಸಾಧ್ಯ ತುಂಟನಾಗಿದಾನೆ, ನಿನ್ನ ಹೆಂಡತಿ ಯಾರೋ ?ಎಂದರೆ, 'ರೂಪಾ' ಎನ್ನುತ್ತಾನೆ, ನಿನಗೆ ಏನು ಬೇಕೋ ? ಎಂದರೆ, 'ರೂಪಾಯಿ' ಅಂತ ಹೇಳುತ್ತಾನೆ, ಯಾರು ಕೊಡ್ತಾರೋ ? ಎಂದರೆ,-ಮೈನಾ ಮಾಮಿ.” ಅಂತೆ!...ನಾನೇ ಜಗತ್ತು, ಈ ಜಗತ್ತು ಇರುವುದೇ ನನಗೋಸ್ಕರ' ಎಂದು ಹಿಂದೆ ನಿನ್ನ ಈ ನರ್ಮದಾ ತಿಳಿದಿದ್ದ ಇಲ್ಲವೆ ? ಈಗ, 'ಈ ತಂದೆ ಮಗ ಇಬ್ಬರೇ ನನ್ನ ಜಗತ್ತು, ನಾನು ಇರುವುದೇ ಇವರಿಗೋಸ್ಕರ' ಎಂದು ನರ್ಮದಾ ನಂಬಿದಾಳೆ, ಆ ನಂಬಿಕೆಯಂತೆ ನಡೆಯುತ್ತಿದ್ದಾಳೆ. ಊರಿಗೊಮ್ಮೆ ಬಾ ಮೈನಾ, ನಾವೆಲ್ಲರೂ ಸ್ವಲ್ಪದಿನ ಜತೆಯಾಗಿ ಕಾಲ ಕಳೆಯಬೇಕು, ಉತ್ತರದ ಹಾದಿ ನೋಡುತ್ತಿದ್ದೇನೆ. ಇಗೋ ನಿನಗೂ ನಿನ್ನ ಪುಟಾಣಿಗಳಿಗೂ-ನೀನು ಆಕ್ಷೇಪಿಸುವುದಿಲ್ಲವಾದರೆ [ಇಲ್ಲ ಎಂದು ಬಲ್ಲೆ) ನಿನ್ನ ಮೇಜರ್ ಸಾಹೇಬರಿಗೂ-ನಮ್ಮಿಬ್ಬರ ಒಲವು. - ಇತಿ, ನರ್ಮದಾ. ಕಾಗದ ಮುಗಿಸಿದ ನರ್ಮದೆಗೆ, ಹತ್ತು ಕಡೆಗಳಿಂದಲೂ ಒಲವಿನ ತೊರೆಗಳೇ ತನ್ನೆಡೆಗೆ ಹರಿದು ಬಂದಂತೆ ಭಾಸವಾಯಿತು. ಮುರಲಿಯನ್ನೆತ್ತಿಕೊಂಡು ಮುದ್ದಿಡುತ್ತ, ಮನೆಯ ಮುಂದಿನ ಹೂದೋಟ ದಲ್ಲಿ ಅವಳು ಅಡ್ಡಾಡಿದಳು.

  • ಮುಚ್ಚಂಜೆಯಾಗುವ ಹೊತ್ತಿಗೆ, ಕರಿಮೋಡಗಳು ದಟ್ಟನೆ ಕವಿದುವು. ಮಳೆಯ ಸೂಚನೆಯಲ್ಲಿ, ಕತ್ತಲಾಗುತ್ತಿರಬೇಕು ಎಂದು ನರ್ಮದಾ ಭಾವಿಸಿದಳು. ಆದರೆ, ಕೆಲನಿಮಿಷಗಳಲ್ಲೇ ಹನಿ ಬೀಳತೊಡಗಿತು.

ಶ್ರೀಕಾಂತ, ಧೋಧೋ ಎಂದು ಸರಿಯುತ್ತಿದ್ದ ಮಳೆಯಲ್ಲಿ, ನಿಧಾನವಾಗಿ ಕಾರು ನಡೆಸಿಕೊಂಡು, ಮನೆಗೆ ಬಂದ. ತುತ್ತು ಬಿಸಿಊಟ, ಹಾಸಿಗೆಯಮೇಲೆ ಬೆಚ್ಚನೆಯ ಹೊದಿಕೆಯೊಳಗೆ ಶಯನ-ಅತ್ಯಂತ ಸುಖಕರವಾಗಿ ಅವನಿಗೆ ಕಂಡವು.” ಆತ ಮಲಗಿದ್ದ ಕಡೆಗೇ ನರ್ಮದಾ, ಮೈನಾವತಿಗೆ ತಾನು ಬರೆದಿದ್ದ ಕಾಗದವನ್ನು ತಂದು ತೋರಿಸಿದಳು. - ಶ್ರೀಕಾಂತ ಅದನ್ನೋದಿ, ಮುಗುಳುನಕ್ಕು, ಹಿಂದಿರುಗಿಸಿದ 2 LIO..

  1. - *.

- - .. .. 1 -: iಭ2.i.i pukki.........LLautಳAdWEN ಮbಪಟಿ +- بسته