ಪುಟ:ರಾಣಾ ರಾಜಾಸಿಂಹ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಜಯಸಿಂಹನ ಕೌಶಲ್ಯ ೧೦೧ ನಾನು ತಮ್ಮ ಕುದುರೆಯನ್ನು ಹಿಡಿದಿರುತ್ತೇನ ತಾವು ಒಳಗೆ ಹೋಗ ಬಹುದು ? ವಾನಸಾಹೇಬರು ಸೋಪಾನಗಳನ್ನೇರಿದರು ಆಗ್ಗೆ ಜಯಸಿಂ ಹನು *“ವಾನಸಾಹೇಬರೆ, ಸ್ತ್ರೀಸಮಾಗಮಕ್ಕೆ ಹೋಗುವ ಸಮಯದಲ್ಲಿ ಆಯುಧಗಳು ಶೋಭಾವಹವಲ್ಲ , ಅವುಗಳನ್ನು ಇಲ್ಲಿ ಕೊಡಿರಿ ! ಖಾನಸಾಹೇಬರು ಬೇರೆ ಮಾತಿಲ್ಲದೆ ಯಾವತ್ತು ಆಯುಧಗಳನ್ನು ತೆಗೆದು ಜಯಸಿಂಹನಿಗೆ ಕೊಟ್ಟರು ಖಾನಸಾಹೇಬರು ಉಪ್ಪರಿಗೆಯ ಮೇಲೆ ಹೋದಕೂಡಲೆ ಪಲಂ ಗದಮೇಲೆ ರೂವಸಂಪನ್ನೆ ಯಾದೊಬ್ಬ ಯುವತಿಯು ಕಂಡುಬಂದಳು ಖಾನನು ಬಾಗಿಲ ಹೊರಗೆ ಜೋಡು ಮೊದಲಾದವುಗಳನ್ನು ತೆಗೆದು ಒಳಗೆ ತಿವಾಸಿಯ ಮೇಲೆ ಕುಳಿತುಕೊಂಡನು. ತರುಣಿಯು ಪಲಂಗದ ಮೇಲಿಂದಿಳಿದುಬಂದು ಯೋಗಕ್ಷೇಮವನ್ನು ವಿಚಾರಿಸತೊಡಗಿದಳು. ಆ ಮಾತು ಈ ಮಾತು ಹೇಳಿ ಸ್ವಲ್ಪಹೊತ್ತಿನಲ್ಲಿ ಖಾನಸಾಹೇಬರನ್ನ ಮೋಹಗೊಳಿಸಿ ಮರುಳುಮಾಡಿದಳು ಮಿಯಾ ಸಾಹೇಬರು ಶಕೆಯಾ ಗುವುದೆಂದು ಅರಿವೆಗಳನ್ನು ತೆಗೆದಿಟ್ಟರು ಇಷ್ಟರಲ್ಲಿ ಯಾರೊ ಬಾಗಿಲ ಮೇಲೆ ಬಡಿದ ಸಪ್ಪಳವು ಕೇಳಿಬಂತು ಕೂಡಲೆ ಎಲೆಗಾರ್ತಿಯು •ಯಾರವರು” ಎಂದಳ, ಅದಕ್ಕೆ ““ನಾನು ಬಾಗಿಲತೆಗೆ,” ಎಂದುತ್ತರ ಬಂತು. ಅದನ್ನು ಕೇಳಿ ಎಲೆಗಾರ್ತಿಯು ಗಾಬರಿಯಾದಳು “ಆ ಮುದಿ ಗೂಬೆ ಬಂತು, ಏನುಮಾಡಬೇಕು ? ಖಾನಸಾಹೇಬರೇ, ನನ್ನ ಪರಿಣಾ ಮವು ನೆಟ್ಟಗಾಗುವಂತಿಲ್ಲ, ಅದು ಹಾಳಾಗಿ ಹೋಗುವವರೆಗೆ ತಾವು ದಯಮಾಡಿ ಈ ಪಲಂಗದಕೆಳಗ ಸ್ವಲ್ಪ ಕೂತುಕೊಳ್ಳಿರಿ, ಈಗ ಮತ್ತೆ ಅವನನ್ನು ಹೊರಕ್ಕೆ ತಳ್ಳುವೆನು ಆಮೇಲೆ ನಾವು ಸುಖವಾಗಿ, ....” ಈ ಮಾತು ಮುಗಿಯುವುದರೊಳಗಾಗಿ ಸಾಹೇಬರು ಮೆಲ್ಲನೆ ಪಲಂಗದ ಬುಡದಲ್ಲಿ ಓತುಕೊಂಡರು ಎಲೆಗಾರ್ತಿಯು ಸ್ಮಿತಹಾಸ್ಯದಿಂದ ಬಾಗಿ ಲವನ್ನು ತೆರೆದಳು, ಹೊರಗೆ ತನ್ನ ಗಂಡನ ಹೆಸರಿನಿಂದ ನಿಂತಿದ್ದ ಜಯಸಿಂ