ಪುಟ:ಹನುಮದ್ದ್ರಾಮಾಯಣಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ವಾಸ. 81 ದನುಜನ ಪುರಮಂ ಪುಗುವೊಡೆ | ವನಜಭವಾದ್ಯರ್ಗೆ ಸಾಧ್ಯಮಾಂ ನೀನೇಂ || ಘನಮನಗೆನುತಂ ದಾನವಿ | ಕಿನಿಸಿಂದೊದೆಯ ಹನುಮನವಳಂ ಪೊಯ್ದಂ || ೩೦ || ಹನುಮನ ಹಸ್ಯಸ್ಪರ್ಶo | ತನಗಾಗಲ್ ಸ್ಮರಿಸಿಕೊಳುತೆ ಲಂಕಿನಿಯೆಂದಳ್ || ಚಿನುಮಯ ಕೇಳಬ್ಬಜನೀ || ದನುಪುರಮಂ ಕಾವುದೆಂದು ಕಳಿಪಿದನೆನ್ನಂ 1 ೩೧ | ಖಗಪತಿಗಮನಂ ತೇತಾ || ಯುಗದೊಳಗವತರಿಪನವನ ಸತಿಯಂ ಲಂಕಾ | ನಗರಕೆ ದೈತ್ಯಂ ತರಲಂ || ದಿಗೆ ಮಾರುತಸೂನು ಬರ್ಸನವಳಂ ಹುಡುಕಲ್ || ೩೨ || ಆತಗೆ ಪಧಮಂ ತೋರುತ || ವಿಾ ತಾಣಕೆ ನಡೆವುದೆಂದು ವಿಧಿ ಸೇರ್ಪo || ವಾತಟ ನಿನಗಿಂದಪುದು | ಸೀತಾದರ್ಶನಮದೆಂದುಮಜನಂ ಸಾರ್ದ್ಬಳ್ || ೩೩ || ಅಚ್ಚರಿವಟ್ಟಿನಿಲಸುತಂ | ಚೆಚ್ಚರದಿಂ ದ್ವಾರಪಾಲರ ಸದೆದುಂ ಮೇ || ಸಚ್ಚರಿತರತ್ನರುಚಿಯಂ || ಮೆಚ್ಚುಗೆ ನಡೆತರುತುಮಿರ್ನ್ಸನಾ ಪುನದೊಳ್ || ೩೪ | ಇರ್ಕೆಲದ ಕೇರಿಕೇರಿಗ || ಟಿರ್ಕೆಗಳಂ ಸೂಕ್ಷ್ಮರೂಪದಿಂದಂ ಪುಗುತಂ || ರಕ್ಕಸಪೊಳಲಿದು ಸುರರ ಪು || ರಕ್ಕಂ ಮಿಗಿಲೆಂದು ನೋಡಿದಂ ಹನುಮಂತ | ೩೫ | ಪ್ರಾಕಾರಗಳಂ ಕಳಿಕಳಿ | ದಾ ಕೇರಿಯೊಳಿರ್ಪ ರತ್ನಸೌಧಂಗಳೊಳಂ || ಮಾಕಾಮಿನಿಯಂ ಕಾಣದೆ | ಬಾಕುಳಮನನಾಗಿ ನಗರವೀಧಿಗೆ ನಡೆದಂ 11 ೩೬ | ಪದಜಾತರ ಮಂದಿರಗಳ | ಸುದತಿಯರೊಳ್ ನೃತ್ಯಗೀತವಾದ್ಯಾದಿ ಕಲಾ ||