86 ಹಮಮದ್ರಾಮಾಯಣ. ದಿನೊಳಿನನಸ್ತಮವೀಕ್ಷಿಸು | ತನಿಲಾತ್ಮಜನಿರ್ದನುಚ್ಚಶಾಖಾಗ್ರದೊಳಂ | \ ೨೨ | ಜನಿಸಿದ ಮಾತ್ರದೆ ತನ್ನಂ | ತಿನಲುದ್ಯೋಗಿಸಿದನೀತನೀ ಜವ್ವನದೊಳ್ || ತಿನದುಳಿಯನೆಂದು ದಿನಪಂ || ತನುವಂ ಮರೆಗೆಯ್ಯನೆಂಬೊಲಬ್ಬಿಯೊಳಿಳಿದಂ 1 ೨೩ | ಕುವಲಯಮಂ ಬಾಧಿಸಿ ಸ | ವಹಕ್ಕಪಕಾರಿಯೆನಿಸಿ ರಾಜಂಗೆ ವಿರೋ | ಧವನೆಸಗಿದ ದುಷ್ಟಂ ಬಾ | ಇವನೇ ತಾನೆಂಬೋಲಸ್ತಮಿಸಿದಂ ಸೂರ್ಯ | ೨೪ | ಪರಿದೋಡುವನಿನನಿವನಂ | ಕರದಿಂ ಪಿಡಿದೆಳೆವೆನೆಂದು ವಿಶ್ಲಾಕೃತಿಯಂ ! ಧರಿಸಿದ ರಾಹುವೊ ಎನಲಾ | ವರಿಸಿದುದು ಮಹಾಂಧಕಾರಮವನೀತಳಮಂ | ೨೫ || ಧರೆಯಿಂ ಮಾರ್ಪೊಳೆದಾಗಸ | ದೊರೆಯೋಳೋಭಿಸುವ ಮಲ್ಲಿಕಾಸುಮಚಯಮೋ || ನೆರೆ ಪುಷ್ಕರಕರಿ ಚೆಲ್ಲಿದ || ಶರಧಿಯ ಫೋನಗಳೊ ಎಂಬೊಲುಡುಗಣಮೆಸೆಗುಂ || ೨೬ || ಮರನಿಳಿದನಿಲಸುತಂ ಕಾ | ರಿರುಳೊಳ್ ಪೊರವಾಗಿಲೆಡೆಗೆ ಸೂಕ್ಷಾಕೃತಿಯಿಂ || ಬರೆವರೆ ಲಂಕಿನಿಯೆಂಬಳ್ | ತರಳಾ ನೀನಾರ್ಗೆಯೆಂದು ತಡೆದಳ್ ಕಪಿಯಂ | ೨೭ || ಇವಳೊಡನೆ ಕಲಹಮಂ ಗೆ ! ಯುವೊಡೀಗಳ್ಳಮಯಮಲ್ಲಮೆನ್ನು ತಮಾ ದಾ || ನವಿಯಂ ನೋಡುತ್ತೊಯ್ಯನೆ | ಪವನಸುತಂ ಪೇಳನವಳ ಬಗೆಯಂ ತಿಳಿದುಂ | | ೨೮ || ಜಲಫಲಗಳುಳ್ಳ ಧರಣಿ | ತಲದೊಳ್ಳಂಚರಿಪ ವೃತ್ತಿಯಾದುದರಿಂದೀ | ನೆಲಕಿದೊ ಬಂದೆ ಮಿರುಗುವ | ಪೊಳಲಂ ಮಿಗೆ ಕಂಡು ಪೋಪೆನೆಂದಂ ಹನುಮಂ | ೨೯ |
ಪುಟ:ಹನುಮದ್ದ್ರಾಮಾಯಣಂ.djvu/೯೪
ಗೋಚರ