ಪುಟ:ಪ್ರಬಂಧಮಂಜರಿ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨L ಪ್ರಬಂಧಮಂಜರಿ ಎರಡನೆಯ ಭಾಗ, ಮಾತ್ರ ಮುಂದಕ್ಕೆ ತರಲಿಲ್ಲ. 16ನೆಯ ಶತಮಾನದಿಂದೀಚೆಗೆ ಅನೇಕ ಶಾಸ್ತ್ರಗಳೂ ಅಭಿವೃದ್ಧಿಗೆಬಂದಿವೆ. ಖಿಲವಾಗಿದ್ದ ಹಳೆಯ ಶಾಸ್ತ್ರಗಳು ಜೀರ್ಣೋದ್ವಾರಮಾಡಲ್ಪಟ್ಟು ವಲ್ಲದೆ, ಅನೇಕ ಹೊಸ ಶಾಸ್ತ್ರಗಳು ಹೊರಪಟ್ಟಿವೆ. ಈಗ ಯೂರೋಪಿನಲ್ಲಿ ಅಚ್ಚು ಹಾಕಿರುವ ಪುಸ್ತಕಗಳನ್ನೆಲ್ಲಾ ಒಟ್ಟುಗೂಡಿದರೆ, ಪ್ರಪಂಚದಲ್ಲೆಲ್ಲ ಅತ್ಯಂತ ವಿಶಾಲವಾದ ಕಟ್ಟಡವನ್ನೂ ಹಿಡಿಸುವುದಿಲ್ಲವಂತೆ. ಇದರಿಂದಅಚ್ಚು ಹಾಕುವುದು ಮೊದಲಾದಂದಿನಿಂದ ಎಷ್ಟು ವಿಷಯಗಳು ಪ್ರಕಟಿಸಲ್ಪಟ್ಟು ಜ್ಞಾನಾಭಿವೃದ್ಧಿಗೆ ಕಾರಣವಾಗಿದೆಯೊ ಊಹಿಸಬಹುದು. ಅಚ್ಚು ಹಾಕುವುದರ ಪ್ರಯೋಜನಗಳನ್ನು ಯೂರೋಪಿನವರೇ ಅನು. ಭವಿಸುತ್ತಿಲ್ಲ. ಅವರು ಹೊಕ್ಕ ಸೀಮೆಗಳಲ್ಲೆಲ್ಲ ಇದರ ಉಪಯೋಗಗಳುಂಟಾಗಿವೆ. ಹಿಂದೂದೇಶಕ್ಕೆ ಅಚ್ಚು ಹಾಕುವುದು ಬಂದು ಐವತ್ತು ವರ್ಷಗಳಾಗಿದ್ದರೂ, ನಮಗೆಲ್ಲ ಬಲು ಉಪಕಾರವಾಗಿದೆ. ಪೂರ್ವದಲ್ಲಿ ಎಕ್ಕದೆಲೆ, ಓಲೆಗರಿ ಮುಂತಾದವುಗಳಮೇಲೆ ಬರೆಯಬೇಕಾಗಿದ್ದುದರಿಂದ ಒಂದು ಪುಸ್ತ ಕವಾಗಬೇಕಾಗಿದ್ದ ರೂ, ವರ್ಷಾಂತರಗಳು ಶ್ರಮಪಟ್ಟರೂ ಮುಗಿಯುತ್ತಿರಲಿಲ್ಲ. ಹೀಗೆ ಕಷ್ಟ ಪಟ್ಟು ಬರೆಯುತ್ತಿದ್ದುದರಿಂದ, ಪುಸ್ತಕಗಳನ್ನು ಜನರು ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಭಾವಿಸಿ,ಎರವಲು ಕೊಡುವುದೂ ಕಷ್ಟವಾಗಿದ್ದಿತು. ಎಲ್ಲಿಯೂ ಕೆಲವು ವೈದಿಕ ಬ್ರಾಹ್ಮಣರು ಮಾತ್ರ ಗ್ರಂಥಗಳನ್ನು ಶ್ರಮಪಟ್ಟು ಬರೆದೋದಿ ಬುದ್ದಿವಂತರಾಗಿದ್ದರು. ಅಚ್ಚು ಹಾಕುವುದು ಬಂದ ಮೇಲೆ ಖಿಲವಾಗಿದ್ದ ಪ್ರಾಚೀನ ಗ್ರಂಥಗಳು ಮುದ್ರಿಸಿ ಉಜೀವಿಸಲ್ಪಟ್ಟು, ಎಲ್ಲಾ ಜಾತಿಯವರೂ ಓದಿ ವಿದ್ಯಾವಂತರಾಗಲವಕಾಶವಾಯಿತು. ಲೋಕದಲ್ಲಿ ಛಾಪಿಸುತ್ತಿರುವ ಕೋಟ್ಯಂತರ ಪುಸ್ತಕಗಳೊಡನೆ ಪ್ರತಿದಿನವೂ ಹೊರಡುವ ಲಕ್ಷಾಂತರ ವೃತ್ತಾಂತಪತ್ರಿಕೆಗಳನ್ನು ಕೂಡಿಸಿದರೆ, ಲೋಕದಲ್ಲೆಲ್ಲ ಜ್ಞಾನವನ್ನು ಹರಡುವುದಕ್ಕೆ ಅಚ್ಚು ಹಾಕುವುದು ಎಷ್ಟು ಸಾಧಕವಾಗಿದೆಯೆಂಬುದು ವ್ಯಕ್ತವಾಗಿ ಗೊತ್ತಾಗದಿರಲಾಗದು. 41. ಪರೀಕ್ಷೆಗಳು. ಕಾಲೇಜುಗಳಲ್ಲಿಯ ಸ್ಕೂಲುಗಳಲ್ಲಿಯೂ ಚೆನ್ನಾಗಿ ಓದುವ ವಿದ್ಯಾರ್ಥಿ- ಗಳನ್ನಾರಿಸಿಕೊಂಡು, ಅವರಿಗೆ ಬಹುಮಾನಗಳನ್ನೂ ವೇತನಗಳನ್ನೂ ಕೊಟ್ಟು