ತೃಪ್ತಿ, ೧೧೮ ಸ್ವಾರ್ಥಪರತೆಯು ಬಲು ನಿಂದ್ಯವಾದ ದುರ್ಗುಣವು; ಸ್ವಾರ್ಥಪರನು ಸ್ನೇಹಕ್ಕೆ ಅನರ್ಹನು, ಅವನೊಡನೆ ಮಾತನಾಡದೆ ದೂರ ತ್ಯಜಿಸಬೇಕು. ಅವನ ದುರ್ಗುಣಕ್ಕೆ ಔದಾಸೀನ್ಯವೇ ಮದ್ದು, ಇದರಿಂದ ಕ್ರಮೇಣ ಅವನು ತನ್ನ ತಪ್ಪನ್ನು ತಿದ್ದಿಕೊಳ್ಳಬಹುದೇ ಹೊರತು, ಬೇರೆ ಪ್ರತಿಕ್ರಿಯೆಯಿನ್ನಾವುದೂ ಕಾಣಲಿಲ್ಲ. ಕಾಕೊಪಿ ಜೀವತಿ ಚರಾತ್ತು ಬಲಿಂಚ ಭುಜ”ಎಂಬಂತೆ ಕಾಗೆ ಮೊದಲಾದ ಜಂತುಗಳೂ ಕೂಡ ತಮಗೆ ಬೇಕಾದ ತಿಂಡಿಯನ್ನು ಸಂಪಾದಿಸಿಕೊಂಡು ತಿಂದು ಬಹುಕಾಲ ಬದುಕಿರುವುವು. ಏನುಪಯೋಜನ ? ಇತರರಿಗೆ ಸಹಾಯಮಾಡುವ ಶಕ್ತಿ ಅವಕ್ಕುಂಟೆ? ಅಂಥ ಶಕ್ತಿಯೊಡಗೂಡಿದ ಮನುಷ್ಯನೂ ಸೋದರಪರಾಯಣನಾದರೆ, ಅವನಿಗೂ ಅಜ್ಞಾನಿಗಳಾದ ತಿರ್ಯಗ್ಧಂತುಗಳಿಗೂ ಏನೂ ಭೇದವಿರುವುದಿಲ್ಲ. 38, ತೃಪ್ತಿ. ತೃಪ್ತಿಯೆಂಬುದು ನಮ್ಮ ಮನಸ್ಸಭಾವವನ್ನನುಸರಿಸಿದೆಯೇ ಹೊರತು ನಮ್ಮಲ್ಲಿರುವ ವಸ್ತುಗಳ ಸಂಖ್ಯೆಯನ್ನಲ್ಲ. ನನ್ನ ಮಗ್ಗಲು ಮನೆಯವನಷ್ಟು ಐಶ್ವರ್ಯವು ನನಗಿದ್ದರೆ ಸಾಕು ಎಂದೊಬ್ಬನು ಹೇಳಬಹುದು. ಆದರೆ ಮಗ್ಗ ಮನೆಯವನ ಐಶ್ವರ್ಯ ಬಂದಾಗ, ಅವನಿಗಿಂತ ಭಾಗ್ಯವಂತನಾದ ಮತ್ತೊಬ್ಬನ ಮೇಲೆ ಕಣ್ಣು ಹಾಕುತ್ತಾನೆ. ( ಒಂದು ಬೆಳ್ಳಿಯ ಚಿಕ್ಕ ನಾಣ್ಯ ವನ್ನು ಕೊಟ್ಟರೆ ಉಪಾದಾನದವನು ತೃಪ್ತನಾಗುವನು; ಪಾರ್ಸಿ ದೇಶವೆಲ್ಲ ಸ್ವಾಧೀನವಾಗಿದ್ದರೂ,ದೊರೆ ಅತೃಪ್ತನಾಗಿದ್ದಾನೆ”ಎಂದೊಬ್ಬ ಪಾರ್ಸಿಕವಿ ಹೇಳಿರುವನು. ತಕ್ಕಮಟ್ಟಿಗೆ ನೆಮ್ಮದಿಯಾಗಿದ್ದರೂ, ಇರುವ ಸ್ಥಿತಿಗಿಂತ ಉತ್ತಮವಾದುದಕ್ಕೆ ಹಾರೈಸುವುದು ಅನೇಕರ ಸ್ವಭಾವವಾಗಿದೆ. ಇಂಥ ಅತೃಪ್ತಿಯಿಂದ ಮನಸ್ಸಿಗೆ ತುಂಬಾ ವ್ಯಥೆಯೂ, ಚಿಂತೆಯೂ, ಕಳವಳವೂ ಉಂಟಾಗುವುವು. ಇರುವಷ್ಟಕ್ಕೆ ಸಂತುಷ್ಟರಾಗಿರುವುದು ಪೇಚಾಟಗಳ ನೆಲ್ಲ ಅಡಗಿಸುವುದು; ಅಸಾಧಾರಣವಾದ ಆಶೆಯನ್ನು ನಾಶಮಾಡುವುದು; ನಮ್ಮ ಮಾತನ್ನು ಮನೋಹರವಾಗಿ ಮಾಡುವುದು; ನಮ್ಮ ಭಿಪ್ರಾಯ. ಗಳಿಗೆ ಸಂತತವಾದಶಾಂತಿಯನ್ನು ಕೊಡುವುದು."ಎಂದು ಅಡಿಸನ್ ಎಂಬ ಮಹಾಪಂಡಿತನು ಹೇಳಿರುವನು, ತೃಪ್ತನಾಗಿರುವವನೇ ನಿತ್ಯಸುಖಿಯಾಗಿ,
ಪುಟ:ಪ್ರಬಂಧಮಂಜರಿ.djvu/೧೩೭
ಗೋಚರ