೯೧ಚತುರ್ಥಾಂಕಂ
ಗೋಪಿಯರು - ರಾಗ- ಆನಂದಭೈರವಿ- ಆದಿ.
ಜೋಜೋ ಜೋ ಕೃಷ್ಣ ! ಗೋಪಾಲಕೃಷ್ಣ ||ಪ||
ಜೋಜೋ ಯದುಕುಲ ಬಾಲಾ | ಜೋಜೋ ಜೋ ಕೃಷ್ಣ ||ಆ-ಪ||
ನವ ಮೋಹನಾಂಗ, ಶುಭಾಂಗಾ | ಯಶೋದಾ ಕಂದಾ| ಆನಂದಾ| ಸುರುಚಿ
ರ ಬಾಲಾ | ಸುಂದರಫಾಲಾ| ಕರುಣಾಕರ ಶಿವರಾಮ ವಿಲೋಲಾ ||ಜೋ ಜೋ||
ಯಶೋದಮ್ಮಾ! ಈ ಬಾಲಕನು ನಿದ್ರೆಮಾಡುವ ಹಾಗೂ ಕಾಣ
ಲಿಲ್ಲ. ಎದ್ದಿರುವ ಹಾಗೂ ಕಾಣಲಿಲ್ಲ. ಒಮ್ಮೆ ಕಣ್ಣುಮುಚ್ಚಿ ನಿದ್ರಿ
ಸುವಂತೆ ಕಾಣುವನು. ಮತ್ತೊಮ್ಮೆ ಕಣ್ಣು ಬಿಚ್ಚಿ ಎದ್ದಿರುವಂತೆ
ಕಾಣುವನು. ಇವನ ಲೀಲೆಗಳು ಅತಿ ವಿಚಿತ್ರವಾಗಿರುವುವು!
ಯಶೋದೆ:- ಕೃಷ್ಣಾ ! ನಿನಗೊಂದು ಕಥೆಯನ್ನು ಹೇಳುವೆ
ನು. ಅದನ್ನು ಕೇಳುತಲಾದರೂ ನಿದ್ರಿಸುವೆಯಾ?
ಕೃಷ್ಣ:- ಅಮ್ಮಾ! ಅದೆಂಥಾ ಕಥೆಯಮ್ಮ!
ಯಶೋದೆ:- ನೋಡಿದೆಯಾ ನಿನ್ನ ಹರಟೆ ! ಕಥೆ ಹೇಳುವೆ
ನೆಂದರೆ ಸುಮ್ಮನೆ ಕೇಳಬೇಕು. ಮಾತುಮಾತಿಗೂ ಪ್ರಶ್ನೆಮಾಡ
ಬಾರದು.
ಕೃಷ:- ಅಮ್ಮಾ ! ನೀನೇ ಹೇಳು. ನಾನು ಕೇಳುವ ಕಥೆಯ
ಸಾರಾಂಶವು ನನಗೆ ತಿಳಿಯಬೇಕಿಲ್ಲವಮ್ಮ! ವಿವರವಾಗಿ ಕೇಳುವುದ
ರಲ್ಲಿ ತಪ್ಪೇನಮ್ಮ? ಹಿರಿಯರು ಹೇಳತಕ್ಕ ವಿಷಯಗಳನ್ನು ಚನ್ನಾಗಿ
ಕೇಳಿ ಅರ್ಥ ಮಾಡಿಕೊಳ್ಳಬೇಕು. ಅರ್ಥವಾಗದ ವಿಷಯಗಳನ್ನು ಅವ
ರಿಂದಲೇ ಪುನಃ ಕೇಳಿ ತಿಳಿದುಕೊಳ್ಳಬೇಕು. ಹಾಗಲ್ಲದೆ, ಹೇಳುವ
ತನಕ ಸುಮ್ಮನೆ ತಲೆಯಾಡಿಸುತ್ತಿದ್ದು, ಹೇಳಿದ ವಿಷಯಗಳಲ್ಲಿ ಒಂದ
ನ್ನಾದರೂ ಗ್ರಹಿಸದಿರುವುದು ಧರ್ಮವೇನಮ್ಮ? ಅಂಥವರು ಅವಿವೇಕಿಗ
ಳೆನಿಸುವರಲ್ಲವೇನಮ್ಮ?
ಯಶೋದೆ:-ಕೃಷ್ಣ! ನಾನು ನಿನಗೆ ಕಥೆ ಹೇಳುವೆನೆಂದರೆ,
ನೀನೇ ನನಗೆ ಕಥೆ ಹೇಳಲಾರಂಭಿಸಿರುವೆಯಲ್ಲಾ ! ಇಷ್ಟೊಂದು ಮಾ
ತುಗಳನ್ನೆಲ್ಲಿ ಕಲಿತೆಯೋ ಕೃಷ್ಣಾ !
ಪುಟ:ಶ್ರೀ ಕೃಷ್ಣ ಲೀಲೆ.djvu/೧೦೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ