ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೯೨ಕೃಷ್ಣಲೀಲೆ

ಕೃಷ್ಟ:-ಅಮ್ಮಾ ! ನಾನು ಶ್ರದ್ಧೆಯಿಂದ ಕೇಳುವೆನಮ್ಮ, ಕಥೆ
ಯನ್ನು ನೀನೇ ಹೇಳಮ್ಮ.

 ಶ್ಲೋ॥ ರಾಮೋ ನಾಮ ಬಭೂವ ಹುಂತದ ಬಲಾ ಸೀತೇತಿಹುಂತೌಪಿತು| ರ್ವಾಚಾ
       ಪಂಚವಟೀ ತಟೀ ವಿಹರತಸ್ತಾಮಾ ಹರದ್ರಾವಣಃ| ನಿದ್ರಾರ್ಥ೦ ಜನನೀ ಕಥಾ
       ಮಿತಿ ಹರೇರ್ಹು೦ಕಾರ ತಶ್ರುಣ್ವತಃ | ಸೌಮಿತ್ರೇಕ್ವ ಧನುರ್ಧನುರ್ಧನುರಿತಿವ್ಯ
       ಗ್ರಾಗಿರಃ ಪಾಂತುನಃ॥ (ಲೀಲಾ ಶುಕಃ)

ಯಶೋದೆ:-ಕೃಷ್ಣಾ ! ಪೂರ್ವಕಾಲದಲ್ಲಿ ಶ್ರೀರಾಮನೆಂಬ
ರಾಜನೊಬ್ಬನಿದ್ದನು.

ಕೃಷ್ಣ:- ಉ !
ಯಶೋದೆ:-ಆ ರಾಜನಿಗೆ ಸೀತೆಯೆಂಬ ಭಾರ್ಯೆ ಇದ್ದಳು.
ಕೃಷ್ಣ:- (ಸ್ಪಲ್ಪ ಗಟ್ಟಿಯಾಗಿ) ಊ !
ಯಶೋದೆ:- ಶ್ರೀರಾಮನ ತಂದೆಯ ಹೆಸರು ದಶರಥನು.
ಕೃಷ್ಣ:- ಉ!
ಯಶೋದೆ:- ಆತನಿಗೆ ಕೌಸಲ್ಯೆ, ಕೈಕೆ, ಸುಮಿತ್ರೆಯೆಂಬ
ಮೂರು ಮಂದಿ ಪತ್ನಿಯರು.
ಕೃಷ್ಣ- ಊ!
ಯಶೋದೆ:- ದಶರಥನು ರಾಕ್ಷಸರೊಂದಿಗೆ ಯುದ್ಧ ಮಾಡುವಾಗ
ಆತನ ಪತ್ನಿಯಾದ ಕೈಕಾದೇವಿಯು ಮಹಾ ದೈರ್ಯದಿಂದ ಪತಿಗೆ ತಾನೇ
ಸಾರಥಿಯಾಗಿ ರಥವನ್ನು ನಡಿಸಿದಳು. ಆದುದರಿಂದ ರಾಜನಿಗೆ ಜಯವುಂ
ಟಾಯಿತು. ಆತನು ತನ್ನ ಪತ್ನಿಗೆ ಎರಡು "ವರಗಳನ್ನು" ಕೊಟ್ಟನು.

ಕೃಷ್ಣ:- ಊ !
ಯಶೋದೆ:- ಆ ವರಗಳಲ್ಲಿ ಒಂದರಿಂದ ಕೌಸಲ್ಯಾ ಪುತ್ರನಾದ
ರಾಮನನ್ನು ಹದಿನಾಲ್ಕು ವರ್ಷಗಳು ಅರಣ್ಯವಾಸಕ್ಕೆ ಕಳುಹಿಸುವಂತೆ
ಯೂ, ಮತ್ತೊಂದರಿಂದ ತನ್ನ ಮಗನಾದ ಭರತನಿಗೆ ರಾಜ್ಯಾಭಿಷೇಕ
ಮಾಡಿಸುವಂತೆಯೂ ಕೋರಿದಳು.
ಕೃಷ್ಣ:- ಊ!