೯೩ಚತುರ್ಥಾoಕಂ.
ಯಶೋದೆ:- ಶ್ರೀರಾಮನು ಪಿತೃವಾಕ್ಯ ಪರಿಪಾಲನಾರ್ಥವಾಗಿ,
ತನ್ನ ಪತ್ನಿಯಾದ ಸೀತಾದೇವಿಯೊಂದಿಗೂ, ತಮ್ಮನಾದ ಲಕ್ಷ್ಮಣ
ನೊಂದಿಗೂ ಕಾಡಿಗೆ ತೆರಳಿದನು.
ಕೃಷ್ಣ:- ಆ ಮೇಲೆ !
ಯಶೋದೆ:- ಆಮೇಲೆ ಸೀತಾ ರಾಮ ಲಕ್ಷ್ಮಣರು ಪಂಚವಟಿ
ಯೆಂಬ ಸ್ಥಳದಲ್ಲಿ ವಾಸಮಾಡುತ್ತಿದ್ದರು.
ಕೃಷ್ಣ:- ಆಮೇಲೆ !
ಯಶೋದೆ:- ಆಗ ರಾವಣನೆಂಬ ರಾಕ್ಷಸನು ಸೀತೆಯನ್ನು
ಅಪಹರಿಸಿಕೊಂಡು ಹೋದನು.
( ಈ ಮಾತು ಹೇಳುತ್ತಲೇ ಉಯ್ಯಾಲೆಯಲ್ಲಿ ಮಲಗಿದ್ದ ಕೃಷ್ಣನು
ಪ್ರತಾಪದಿಂದ) ಲಕ್ಷ್ಮಣಾ ! ಎಲ್ಲಿರುವೆ ? ಕೋದಂಡವನ್ನಿಲ್ಲಿತಾ !
ದುರಾತ್ಮನಾದ ರಾವಣನನ್ನು ಸಂಹರಿಸಿ ಸೀತೆಯನ್ನು ತರುವೆನು!
[ಎಂದು ಮೇಲಕ್ಕೇಳುವನು]
ಉದ್ದವ:-
ರಾಗ - ಮೋಹನ - ಏಕತಾಳ,
ನಂದ ತನಯ ಸುಂದರಾಂಗ ಸಿಂಧು ಗಭೀರಾ ||ಪ||
ರಾಮನಲ್ಲ ನೀನೀಗ ಕೃಷ್ಣನಯ್ಯ ಶಾಂತನಾಗು || ನಂದ||ಅ-ಪ|| ಪರಿಕಿಸು ದ್ವಾಪರ ಯುಗವಿದು ಕರುಣಾಕರ ಪರಮಪುರುಷ| ವರ ಗೋಕುಲವಿ
ದುಲಾಲಿಸು | ಸಿರಿವರ !ಶಿವರಾಮನುತಾ ||ನಂದ||
ಪರಮಾತ್ಮನೇ ! ನಿನ್ನ ಮಾಯಾಜಾಲವನ್ನು ತಿಳಿಯಲು ಯಾರು
ಸಮರ್ಥರು? ಗರುಡ, ಗಂಧರ್ವ, ಕಿನ್ನರ, ಕಿಂಪುರುಷ, ಯಕ್ಷ, ರಾಕ್ಷಸ,
ನಾಗನಭೆಶ್ವರ, ವೈಮಾನಿಕ, ವೈತಾಳಿಕಾದಿಗಳಲ್ಲಿಯೂ, ನರ ಸುರಾದಿ
ಗಳೆಲ್ಲರಲ್ಲಿಯೂ ಸಮಸ್ತ ಭೂತಕೋಟಿಯಲ್ಲಿಯೂ, ಸ್ಥಾವರ ಜಂಗ
ಮಾತ್ಮಕವಾದ ಸಮಸ್ತ ಪ್ರಪಂಚದಲ್ಲಿಯೂ ವ್ಯಾಪಿಸಿರುವ ನಿನ್ನ ಮ
ಹಿಮೆಯನ್ನರಿಯದೆ, ಮನುಷ್ಯರು ವ್ಯರ್ಥ ಕಾಲಕ್ಷೇಪದಿಂದ ಪ್ರಮತ್ತ
ರಾಗಿರುವರು.
ಸೀ|| ಧಗ ಧಗಾಯತವಾದ ದಾರುಣ ಸೂರ್ಯನ | ಕಿರಣೋಷ್ಣ ಮೂಲದ ಕೀಲು ನೀನೆ|
ಸದಮಲ ಕಾಂತಿಯಿಂ ಸರಿದು ಪ್ರಕಾಶಿಪ | ಚಂದ್ ರಕಿರಣಗಳ ಸಮಿತಿ ನೀನೆ|
ಘನ ಸುಗಂಧವನೀವ ವನಪುಷ್ಪ ಸಮಿತಿಯೊಳ್ ಮಧುರವಾಗಿ ಹದಿವ್ಯ ಮಧು
ಪುಟ:ಶ್ರೀ ಕೃಷ್ಣ ಲೀಲೆ.djvu/೧೦೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ