ಪುಟ:ಶ್ರೀ ಕೃಷ್ಣ ಲೀಲೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪ಕೃಷ್ಣಲೀಲೆ.

  ಪು ನೀನೆ| ಸರ್ವಕಾಲಗಳಲ್ಲಿ ಸರ್ವಕಾರ್ಯಗಳಲ್ಲಿ ಸರ್ವತ್ರ ನೆಲೆದಿಹ ಸಾಕ್ಷಿ ನೀನೆ||
  ಗೀ|| ನಿಖಿಲ ವಸ್ತುಗಳಲ್ಲಿಯು ನಿಬಿಡವಾಗಿ | ಕಾಲ ದಿಗ್ದೇಶ ಬಂಧ ವಿರಹಿತನಾಗಿ|
  ದೀಪಿಸುತಲಿರ್ಪೆ ದೇವ ನೀ೦ದಿವ್ಯವಾಗಿ ಸಾಧು ರಕ್ಷಕ ಶ್ರೀಕೃಷ್ಟ ಸಾರ್ವಭೌಮ॥

ಕೃಷ್ಣಾ! ನೀನರಿಯದ ವಿಷಯವಾವುದೂ ಇಲ್ಲವಾದರೂ, ಹೆತ್ತ
ತಾಯಿಯ ಬಳಿಯಲ್ಲಿ ಮಕ್ಕಳು ತೊದಲು ಮಾತುಗಳನ್ನಾಡುವಂದದಿ
ನಿನ್ನ ಸನ್ನಿಧಿಯಲ್ಲಿ ನಾನು ವಿಜ್ಞಾಪಿಸುವೆನಷ್ಟೆ. ದೇವಾ ! ಈಗ
ತ್ರೇತಾಯುಗವಲ್ಲ, ದ್ವಾಪರಯುಗವು. ಇದು ರಾಮಾವತಾರವಲ್ಲ. ಕೃ
ಷ್ಣಾವತಾರವು. ಸರ್ವಜ್ಞನೇ! ನಿನ್ನ ಲೀಲಾ ವಿನೋದಗಳ ಮರ್ಮವನ್ನ
ರಿಯಲು ನಾನು ಶಕ್ತನಲ್ಲ. ಬಾಲ ಗೋಪಾಲ ಮೂರ್ತೀ! ಪ್ರಸನ್ನ
ನಾಗು!
    [ಎಂದು ಉದ್ದವನು ಸಾಷ್ಟಾಂಗವಾಗಿ ನಮಸ್ಕರಿಸುವನು.]

ಶ್ರೀಕೃಷ್ಣ:- ಉದ್ದವಾ ! ನಿನ್ನ ಮನೋಭಾವವು ನಿಷ್ಕಳಂಕ
ವಾದುದು. ಈ ನನ್ನ ಅವತಾರದಲ್ಲಿ ನಡೆಯಬೇಕಾದ ಕಾರ್ಯಗಳು
ಆನೇಕವಾಗಿರುವುವು. ಅವುಗಳಲ್ಲಿ ನಿನ್ನ ಮೂಲಕವಾಗಿ ನಡೆಯಬೇ
ಕಾದ ಪರಮ ಗೋಪ್ಯವಾದ ಕಾರ್ಯಗಳು ಕೆಲವಿರುವುವು. ಅವುಗಳನ್ನು
ಸಮಯೋಚಿತವಾಗಿ ನಿನಗೆ ತಿಳಿಸುವೆನು.

ಉದ್ದವ:- ಪರಮಾತ್ಮನೇ ನಿನ್ನ ಆಜ್ಞಾನುಸಾರವಾಗಿ ನಡೆಯಲು
ಬದ್ಧನಾಗಿಯೂ, ಸಿದ್ದನಾಗಿಯೂ ಇರುವೆನು.

ಯಶೋದೆ:- ಉದ್ದವಾ! ನಿಮ್ಮೀರ್ವರ ಸಂಭಾಷಣೆಯು ಬಹಳ
ಗಹನವಾಗಿರುವುದು. ಒಂದು ಮಾತಾದರೂ ನನಗೆ ಪೂರ್ತಿಯಾಗರ್ಥವಾ
ಗಲಿಲ್ಲ. ನೀವೀಗ ಮಾತನಾಡಿದ ವಿಷಯವೇನು?

   [ಎಂದು ಯಶೋದೆಯು ಪ್ರಶ್ನೆ ಮಾಡುತ್ತಿರುವಾಗ್ಗೆ, ಕಂಸನಿಂದ
ಕಳುಹಿಸಲ್ಪಟ್ಟ ಶಕಟಾಸುರನು ಒಂದು ವಿಚಿತ್ರವಾದ “ಬಂಡಿಯ ರೂಪ”
ವನ್ನು ಧರಿಸಿ ಪ್ರವೇಶಿಸುವನು.]

ಶ್ರೀಕೃಷ್ಣ:- ರಾಗ - ಮೋಹನ - ಆದಿ.
     ಅಮ್ಮಾ ನಾನೀ ಬಂಡಿಯೊಳು ಕೂಡುವೆನಮ್ಮ ! ಯಶೋದಮ್ಮಾ ನಾನೀ
ಬಂಡೀಯೊಳು ಕೂಡುವೆನಮ್ಮ ||ಪ||