ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೫ಚತುರ್ಥಾಂಕಂ

    ಆಮ್ಮಾ ಲಾಲಿಸಮ್ಮಾ ಇದು ರಮ್ಯವಾಗಿ ಶೋಭಿಪುದು| ಸುಮ್ಮನೆ ನೀನೋಡುತಲಿ
ರಮ್ಮಾ ಇದನಡಿಸುವೆ || ನಮ್ಮಾ ||ಅ-ಪ||
    ಅಮ್ಮಾ! ಈ ಬಂಡಿಯು ಎಷ್ಟು ಚೆನ್ನಾಗಿರುವುದು ನೋಡಮ್ಮ!
ನಾನಿದರಲ್ಲಿ ಕುಳಿತು ಸವಾರಿ ಮಾಡುವೆನಮ್ಮ.

ಯಶೋದೆ:- ರಾಗ - ಮೋಹನ - ಆದಿ.

   ಬೆಡಾ ಬೇಡ ಮೋಸವಿದು ಬೇಡಾ ಬೇಡವೋ ಕೃಷ್ಣ ಬೇಡಾ ಬೇಡ||ಪ||
   ಎತ್ತು ಕುದುರೆಯಿಲ್ಲದೆ ! ಎತ್ತಿಂದಲೊ ಬಂದಿಹುದು | ಚಿತ್ರವಿದು ಬೇಡ
   ಕೃಷ್ಣ ! ಮತ್ತೊಂದನು ಕೊಡಿಸುವೆ || ಬೇಡ | ಅ- ಪ ||

ಕೃಷ್ಣಾ ! ಇದು ವಿಚಿತ್ರವಾದ ಬಂಡಿಯು, ಎತ್ತು, ಕುದುರೆ,
ಮುಂತಾದ ಯಾವುದೊಂದು ಸಾಧನವೂ ಇಲ್ಲದೆ, ತಾನಾಗಿಯೇ ಬಂ
ದಿರುವುದು. ಇದರಲ್ಲೇನೋ ಮೋಸವಿರಬಹುದು. ಇಲ್ಲವಾದರೆ ಲೋ
ಕದಲ್ಲಿ ಬಂಡಿಗಳು ತಾವಾಗಿಯೇ ನಡೆದುಬರುವುದುಂಟೆ ? ನಿನಗೆ ಬೇಕಾ
ದರೆ, ಇದಕ್ಕಿಂತಲೂ ಚನ್ನಾಗಿರುವ ಮತ್ತೊಂದು ಬಂಡಿಯನ್ನು ತರಿಸಿ
ಕೊಡುವೆನು. ಇದು ಬೇಡ. ಸುಮ್ಮನಿರು.

ಕೃಷ್ಣ:- ಅಮ್ಮಾ ! ಇದೇಕೆ ಹೀಗೆ ಹೇಳುವೆ ? ಎತ್ತುಗಳನ್ನೂ
ಕುದುರೆಗಳನ್ನೂ ಕಟ್ಟದಿದ್ದರೆ ಬಂಡಿಗಳು ನಡೆಯುವುದಿಲ್ಲವೇನು ?
ಎತ್ತು ಕುದುರೆ ಮುಂತಾದ ಜಂತುಗಳನ್ನು ಕಟ್ಟಿ ಆ ಬಡಪ್ರಾಣಿಗಳನ್ನು
ಹಿಂಸೆಪಡಿಸುವುದಕ್ಕಿಂತಲೂ, ತಾವಾಗಿಯೇ ನಡೆಯತಕ್ಕ ಬಂಡಿಗಳ
ಮೇಲೆ ಸವಾರಿ ಮಾಡುವುದು ಪುಣ್ಯವಲ್ಲವೇನಮ್ಮ ! ಅಮ್ಮಾ ! ಭೂಮಿ
ಯ ಮೇಲೆ ನಡಿಸತಕ್ಕ ಬಂಡಿಗಳಿಗೇನೋ ಎತ್ತುಗಳನ್ನೂ ಕುದುರೆಗಳ
ನ್ನೂ ಕಟ್ಟಬಹುದು ! ಅಂತರಿಕ್ಷದಲ್ಲಿ ನಡಿಸತಕ್ಕ ಬಂಡಿಗಳಿಗೆ ಯಾವುದ
ನ್ನು ಕಟ್ಟಲಾಗುವುದಮ್ಮಾ!

ಯಶೋದೆ:- ಕೃಷ್ಣಾ! ನಿನ್ನ ಮಾತುಗಳೊಂದೂ ನನಗರ್ಥವಾ
ಗುವುದಿಲ್ಲವು. ಎತ್ತು ಕುದುರೆ ಮುಂತಾದ ಏನನ್ನೂ ಕಟ್ಟದೆ ತಾವಾ
ಗಿಯೇ ನಡೆಯುವುದಾಶ್ಚರ್ಯವಲ್ಲವೇ ಕೃಷ್ಣಾ?

ಶ್ರೀಕೃಷ್ಣ:- ಇದರಲ್ಲಿ ಆಶ್ಚರ್ಯವೇನಿರುವುದಮ್ಮಾ ! ಇದೇ ಆಶ್ಚ
ರ್ಯವಾಗುವ ಪಕ್ಷಕ್ಕೆ ಈಗ ನಾವೆಲ್ಲರೂ, ಬೇಕಾದ ಹಾಗೆ ಓಡಾಡುತ್ತಿರು