ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 ಕಥಾಸಂಗ್ರಹ-೪ ನೆಯ ಭಾಗ ಜಟಾಯುವಿನ ಪ್ರೇತಕೃತ್ಯಗಳನ್ನು ನೆರವೇರಿಸಿ ಪಂಪಾಸರಸ್ಸಿನ ಬಳಿಗೆ ಬಂದು ಸುಗ್ರೀ ವನೊಡನೆ ಸಖ್ಯವನ್ನು ಬೆಳಿಸಿ ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ಕಿಮ್ಮಿಂಧಾರಾ ಜ್ಯಾಭಿಷೇಕವನ್ನು ಮಾಡಿಸಿದನು. ಅನಂತರದಲ್ಲಿ ನಿನ್ನನ್ನು ಹುಡುಕುವುದಕ್ಕೋಸ್ಕರ ಚತುರ್ದಿಕ್ಕುಗಳಿಗೂ ಕಪಿವೀರರನ್ನು ಕಳುಹಿಸಲು; ಆಗ ನಾನು ಅ೦ಗದ ಜಾಂಬವೆ ದಿಗಳೊಡನೆ ದಕ್ಷಿಣದಿಕ್ಕಿಗೆ ಬಂದು ಅವರ ಅಪ್ಪಣೆಯ ಮೇರೆಗೆ ಕಡಲನ್ನು ದಾಟಿ ಈ ಲಂಕೆಯನ್ನು ಹೊಕ್ಕು ಖಳೇಂದ್ರಾದಿ ಸಮಸ್ತ ರಾಕ್ಷಸರ ಮನೆಗಳಲ್ಲೂ ನಿನ್ನನ್ನು ಹುಡುಕಿ ಅಲ್ಲೆಲ್ಲೂ ಕಾಣದೆ ವ್ಯಸನದಿಂದ ವಿಮಾನಾರೂಢನಾಗಿ ಕುಳಿತಿರುವ ಸಮ ಯ ದಲ್ಲಿ ಚಂದ್ರೋದಯವಾಗಲು ; ಈ ರಮ್ಯವಾದ ಅಶೋಕವನವನ್ನು ಕಂಡು ಬಂದು ನೀನು ಕುಳಿತಿರುವ ಈ ಶಿಂಶುಪವೃಕ್ಷವನ್ನೇರಿ ರಾಕ್ಷಸನು ನಿನ್ನ ಬಳಿಗೆ ಬಂದು ನಡಿಸಿದ ವೃತ್ತಾಂತವನ್ನೆಲ್ಲಾ ನೋಡಿ ತಿಳಿದು ಅನಂತರ ತ್ರಿಜಟೆಯು ಹೇಳಿದ ಸ್ವಪ್ನದ ಸಂಗತಿಯನ್ನೂ ಕೇಳಿದೆನು ಎಂದು ಹೇಳಿ ಆ ಮೇಲೆ ಆಂಜನೇಯನು ಮರದಿಂದ ಕೆಳ ಗಿಳಿದು ಸೀತೆಯ ಸವಿಾಪಕ್ಕೆ ಬರುತ್ತಿರಲು ; ಆಕೆಯು ಹೆದರಿಕೆಯಿಂದ ಹಿಂದಕ್ಕೆ ಸರಿ ಯುತ್ತಿರಲು ; ಆಗ ಹನುಮಂತನು--ಎಲೈ ತಾಯಿಯೇ, ಅಂಜಬೇಡ ! ನಾನು ರಾಕ್ಷಸನಲ್ಲ ಎಂದು ಹೇಳಲು; ಸೀತೆಯು.ಎಲೈ ವಾನರಶ್ರೇಷ್ಟನೇ, ನೀನು ಕಪಿ ಯು, ಶ್ರೀರಾಮನು ದೊರೆಯು, ನಿಮ್ಮಿಬ್ಬರಿಗೂ ಸ್ವಾಮಿಜ್ಝತ್ಯತ್ವವು ಹೇಗೆ ಸಂಭವಿ ಸಿತು ? ನಿಮಗೆ ಸಮುದ್ರವನ್ನು ದಾಟುವ ಶಕ್ತಿಯುಂಟೇ ? ನಿನ್ನ ಕಪಟವಚನಗಳಿಗೆ ಭಯಪಡುತ್ತೇನೆ ಎಂದು ನುಡಿಯಲು ; ಆಂಜನೇಯನು-- ಎಲೈ ಲೋಕಮಾತೃ ವೇ, ಶ್ರೀರಾಮನ ಪಾದಸೇವಕನಾದ ನನಗೆ ಈ ಸಮುದ್ರವನ್ನು ದಾಟುವುದು ಎಷ್ಟರ ಕೆಲಸ ? ಹಾಗಾದರೆ ನೋಡು ಎಂದು ತ್ರಿವಿಕ್ರಮನ ರೂಪಿಗೆ ಇಮ್ಮಡಿಯಾದ ಘೋ ರಾಕಾರವನ್ನು ಧರಿಸಿ ನಿಲ್ಲಲು ; ಸೀತೆಯು ಆ ಅತ್ಯದ್ಭುತಾಕಾರವನ್ನು ನೋಡಲಂಜಿ ಕಣ್ಣು ಮುಚ್ಚಿಕೊಳ್ಳಲು ; ಆ ಮೇಲೆ ಆಂಜನೇಯನು ಆ ರೂಪವನ್ನ ಡಗಿಸಿ ಪೂರ್ವದ ರೂಪವನ್ನು ಧರಿಸಿಕೊಳ್ಳಲು ; ಸೀತೆಯ ಇನ್ನೂ ಅನುಮಾನಿಸುತ್ತಿರಲು ; ಆಗ ಮಾರುತಿಯು-ಎಲೈ ತಾಯಿಯೇ, ಅರಣ್ಯದಲ್ಲಿ ನೀನೂ ಶ್ರೀರಾಮನೂ ನಡಿಸಿದ ಕೆಲವು ಕಾರ್ಯಗಳನ್ನು ಗುರುತಿಗಾಗಿ ಹೇಳುತ್ತೇನೆ ಕೇಳು. ಒಂದು ದಿನ ನೀನೂ ರಾಮನೂ ಚಿತ್ರ ಕೂಟದಲ್ಲಿ ಸ್ನಾನಮಾಡುವಾಗ ಆಶ್ಚರ್ಯವಿಧದಿಂದ ಕೊಳದ ನೀರನ್ನು ಕಲಕಿದಿರಂತೆ, ಇದು ನಿಜವೋ ಸುಳ್ಳೋ ? ಮಾನವತಿಯಾದ ನಿನ ಗೆರಡು ಒಗೆದ ಕಾಕಾಸುರನನ್ನು ಶ್ರೀರಾಮನು ದಯದಿಂದ ಸಲಹಿದನಂತೆ, ಮತ್ತು ನೀನು ಮಾಯಾಮೃಗವನ್ನು ಅಪೇಕ್ಷಿಸಿದಿಯಂತೆ, ಇದೆಲ್ಲಾ ನಿಶ್ಚಯವೋ ಸುಳ್ಳೋ? ಎಂದು ಹೇಳಲು ; ಸೀತೆಯು ಫಳಫಳನೆ ಕಣ್ಣೀರನ್ನು ಸುರಿಸುತ್ತ-ಹಾ, ರಾಮಾ ! ಹೃದಯಾರಾಮ ! ಎಂದು ಬಿದ್ದು ಹೊರಳಿದವಳಾಗಿ-ಎಲೈ ಹನುಮಂತನೇ, ನೀನು ಇದುವರೆಗೂ ಹೇಳಿದ ಗುರುತುಗಳೆಲ್ಲಾ ಯಥಾರ್ಥವಾದುವುಗಳೇ, ನನಗೆ ದುಃಖಬ ರುತ್ತದೆ. ಇನ್ನು ಹೇಳಬೇಡ ಎನ್ನಲು ; ಆಂಜನೇಯನು ಆಕೆಯ ಕೈಕಾಲುಮೊಗ ಗಳಲ್ಲಿರುವ ಗುರುತುಗಳನ್ನು ಹೇಳಿ ಅನಂತರ ರಾಮನಾಮಮುದ್ರಿತವಾದ ಉಂಗುರ