ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಕಥಾಸಂಗ್ರಹ-೪ ನೆಯ ಭಾಗ ಹೀರಿ ಕೆಡಹಿದುವು. ಸಿಂಹಗಳಾಗಿ ಬಂದು ಕೋರೆದಾಡೆಗಳಿಂದ ತಿವಿದು ಮಲಗಿಸಿ ದುವು. ಹಾವುಗಳಾಗಿ ಬಂದು ವಿವಿಧ ವಿಷಜ್ವಾಲೆಗಳಿಂದ ಸುಟ್ಟುರುಳಿಸಿದುವು. ಆ ಘೋರಸಂಹಾರಸಮಯ ದಲ್ಲಿ ಭಯದಿಂದ ಬಾರಿಸಲ್ಪಟ್ಟು ದೆಸೆಗೆಟ್ಟೋಡುತ್ತಿರುವ ಕವಿಬಲಾಂಬುಧಿಯನ್ನು ನೋಡಿ ನೀಲನು--ಎಲೈ ಕಪಿನಾಯಕರೇ, ಅಂಜಬೇಡಿರಿ. ಎಂದಾದರೂ ವಿನಾಶವಾಗಿಹೋಗುವ ಈ ಜಡದೇಹಗಳನ್ನು ಸ್ವಾಮಿ ಕಾರ್ ಕೊಪ್ಪಿಸಿ ಇಹಪರಗಳಲ್ಲಿ ಕೀರ್ತಿ ಸುಕೃತಗಳನ್ನು ಪಡೆದು ಧನ್ಯರಾಗುವದಕ್ಕೆ ಇದೇ ಸಮಯವು. ಓಡಿಹೋಗಬೇಡಿರಿ ಎಂದು ಕೂಗಿ ಹೇಳಲು ; ಆ ಮಾತನ್ನು ಕೇಳಿ ಸಮಸ್ತ ಕಪೀಶ್ವ ರರೂ ತಿರುಗಿ ಬಂದು ಗಿರಿತರುಗಳ ತಂಡದಿಂದ ಹಗೆಯನ್ನು ಮುಚ್ಚಿದರು. ಮತ್ತೆ ಅಮಿತವಿಕ್ರಮನಾದ ಇಂದ್ರಜಿತ್ತು ಕಪಿಕಟಕವ್ರ ಕವಿಸಿದ ಗಿರಿತರು ಚಾಲವನ್ನೆಲ್ಲಾ ಕ್ಷಣಮಾತ್ರದಲ್ಲಿ ಬೀಳಹೊಯ್ಯು ಮಾಯೆಯನ್ನವಲಂಬಿಸಿ ಟಗರಾಗಿ ಬಂದು ಕೆಲವರನ್ನು ತಾಗಿದನು. ಕಾರ್ಬೊಗೆಯಾಗಿ ಬಂದು ಕವಿದು ಕೆಲರನ್ನು ಕೊಂದನು. ಹರಿಯಾಗಿ ಬಂದು ಹೊಡಗಿಸಿದನು, ಸಮುದ್ರವಾಗಿ ಬಂದು ಕೆಲರನ್ನು ತೇಲಿಸಿ ಮುಳುಗಿಸಿದನು, ಕಾಲಭೈರವನಾಗಿ ಬಂದು ಕೆಲರನ್ನು ಮೆಟ್ಟಿ ಮೆದೆಗೆಡಹಿದನು, ಬಿಟ್ಟವಾಗಿ ಬಂದು ಬಿದ್ದು ಹೊರಳಿ ಕೆಲರನ್ನು ತೀರಿಸಿದನು. ಮಹಾವಿಷಜ್ವಾಲೆಯಾಗಿ ಒಂದು ಕೆಲರನ್ನು ಹೊಯ್ಯು ಬೆದನು. ಸಿಡಿಲಾಗಿ ಒಂದೆರಗಿ ಕೆಲರನ್ನು ಮಲಗಿಸಿದನು, ಬೆಂಕಿಯಾಗಿ ಬಂದುರುಬಿದನು. ಭೇರುಂಡ ನಾಗಿ ತುಂಡಿಸಿದನು. ಕಾಡಾನೆಯಾಗಿ ಸೀಳಿದನು, ರಕ್ಕಸಗುವರನ ಕಾಳೆತವನ್ನು ಒಣ್ಣಿಸುವವರಾರು ? ಈ ರೀತಿಯಾಗಿ ವಿವಿಧಾಕಾರಗಳನ್ನು ಹೊಂದಿ ಒಂದು ಕೊಟ್ಟಂತರ ಕಪಿಗಳನ್ನು ಕೊಲ್ಲುತ್ತಿರಲು ; ಆ ಮಾಯಾಸಮರದಲ್ಲಿ ನಿಲ್ಲಲಾರದೆ ರವಿತನು ಜನ ಒಡ್ಡು ಗಳೆಲ್ಲಾ ಒಡೆದುಹೋಗಿ ರಾಮನ ಮರೆಹೊಕ್ಕುವ, ಉಳಿದ ಮಾತುಗಳಿಂದೇನು ಫಲ ? ದ್ವಿತೀಯಸಂಹಾರುದ್ರನಂತಿರುವ ರಾವಣಿಯು ಹೊರಟು ಬಂದು ರಾಮನೆದುರಿನಲ್ಲಿ ನಿಂತು ಚಿನ್ನದ ಗರಿಗಳಿಂದ ಪ್ರಕಾಶಿಸುತ್ತಿರುವ ಹೊಸಮ ಸೆಯ ಸರಳುಗಳನ್ನು ಕಾರ್ಮುಗಿಲು ಮಳೆಗಳನ್ನು ಕರೆವಂತೆ ಕರೆದನು. ತತ್‌ಕ್ಷಣ ದಲ್ಲಿಯೇ ರಾಮನೂ ಧನುಸ್ಸನ್ನು ಝೇಂಕರಿಸಿ ಬಾಣವರ್ಷಗಳಿಂದ ಇಂದ್ರಜಿತ್ತನ್ನು ಕವಿಸಿ ಅನೇಕ ಕೋಟಿ ರಾಕ್ಷಸವೀರರನ್ನು ಕೊಂದು ಮಲಗಿಸಿದನು. ಅದನ್ನು ನೋಡಿ ಇಂದ್ರಜಿತ್ತು-ಈ ರಾಮನು ಸತ್ಯ ಯುದ್ಧದಲ್ಲಿ ಸೋಲುವುದಿಲ್ಲವೆಂದು ಯೋಚಿಸಿ ಮಾಯಾಶಕ್ತಿಯಿಂದ ಕಪಟಯುದ್ಧವನ್ನು ಮಾಡಲುಜ್ಜುಗಿಸಿ ಕಗ್ಗತ್ತಲೆಯನ್ನು ನಿರ್ಮಿಸಿ ಸೃತಿಮಾತ್ರದಲ್ಲಿ ಸಿದ್ದ ವಾದ ಬ್ರಹ್ಮದತ್ತ ರಥವನ್ನೇರಿ ಆಕಾಶಮಾರ್ಗಕ್ಕೆ ಹಾರಿ ಸರೋಜಸಂಭವಲಟ್ಟವಾದ ಕಾರ್ಮುಕವನ್ನು ಕೈಯಲ್ಲಿ ತೆಗೆದುಕೊಂಡು ಹೆದೆ ಯನ್ನು ಏರಿಸಿ ಝೇವಡೆಯಲು ; ಕಪಿಗಳ ತಂಡವ ಬೆದರಿ ನೆಗೆದು ಭೂಮಿಯಲ್ಲಿ ಬಿದ್ದಿತು. ಆಗ ಕೆಲಕಪಿವೀರರು ಬಿದ್ದು ಕೊಂಡೇ ಒದೆದಾಡಿದುವು. ಕೆಲವು ಮೈಮರೆ ತುವು, ಕೆಲವು ಬಾಲಗಳನ್ನು ಮುದುರಿಕೊಂಡು ಎದ್ದೋಡಿದುವು. ಕೆಲವು ಮೊಗ ಮಡಿಯಾಗಿ ಬಿದ್ದಿದ್ದುವು. ಕೆಲವು ಮೆಲ್ಲನೆ ತಮ್ಮ ಬಾಲಗಳನ್ನೆಳೆದು ಎದೆಯಲ್ಲಿ