ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 131 ಕುಡಿಯುವೆನೋ ? ಹಾ ! ಏನು ಮಾಡಲಿ ? ಎನ್ನುತ, ಮುಂಗಡೆಗೆ ನೋಡಲು ; ಅಷ್ಟರಲ್ಲಿ ರಾವಣನಪ್ಪಣೆಯಿಂದ ಸಿದ್ಧ ಮಾಡಿಟ್ಟಿದ್ದ ಅಂಬರವನ್ನು ತಿವಿಯುತ್ತಿರುವ ಮಾಂಸಗಳ ಒಟ್ಟಲುಗಳನ್ನೂ ಕುಲಗಿರಿಗಳನ್ನು ಹೋಲುತ್ತಿರುವ ರಕ್ಕೊದನಗಳ ರಾಶಿಗಳನ್ನೂ ಅವುಗಳ ಬಳಿಯಲ್ಲಿ ಕಿರುಗುಡ್ಡಗಳಂತೆ ಬಿದ್ದಿರುವ ಕಜ್ಜಾಯಗಳ ಬಣ ಬೆಗಳನ್ನೂ ತರಿದು ಕೆಡಹಿದ ಕುರಿಕೋಣಗಳ ಗುಂಪುಗಳೆಂಬ ಬೆಟ್ಟಗಳನ್ನೂ ಗರಿಗ ಳನ್ನು ಹರಿದು ತಂದು ಹಾಕಿದ ಹಕ್ಕಿಗಳ ರಾಶಿಗಳನ್ನೂ ಇರಿದು ಕೆಡಹಿದ ನಾನಾ ಮೃಗಗಳ ಗುಡ್ಡೆ ಗಳನ್ನೂ ಹುರಿದು ಒಗ್ಗರಣಿಸಿದ ಮೀನುಗಳ ಕುಪ್ಪೆಗಳನ್ನೂ ವಿವಿಧ ವಾದ ಗುಂಬಗಳಲ್ಲಿ ತುಂಬಲ್ಪಟ್ಟಿರುವ ಹಾಲ್ಗೊಸರ್ತುಪ್ಪ ಜೇನುತುಪ್ಪಗಳನ್ನೂ ಓಲೆ ತೆಂಗು ಮೊದಲಾದ ಫಲಾವಳಿಗಳನ್ನೂ ನೋಡಿ ಅವುಗಳನ್ನೆಲ್ಲಾ ಬಾಚಿ ಬಾಯ್ ಡಿಸಿ ತಿಂದು ಕುಡಿದು ಕ್ಷಣಕಾಲದಲ್ಲಿ ಮುಗಿಸಿಬಿಟ್ಟನು, ಅದರಿಂದ ಅವನಿಗೆ ಅರ್ಧಗ್ರಾಸ ವಾಯಿತು. ತಿರಿಗಿ ಅವನು ತನಗೆ ಹೊಟ್ಟೆ ತುಂಬಲಿಲ್ಲವೆಂದು ಕೂಗಿಕೊಳ್ಳುತ್ತಿರಲು; ರಾವಣನ ಮಂತ್ರಿಗಳು ಆ ವರೆಗೂ ಯುದ್ಧರಂಗದಲ್ಲಿ ಸುತ್ತು ಬಿದ್ದಿದ್ದ ಹೆಣಗಳನ್ನು ತರಿಸಿ ಅವನ ಮುಂದೊಟ್ಟಿಸಲು ; ಸುಲಿದ ಬಾಳೆ ಹಣ್ಣುಗಳನ್ನು ನುಂಗುವಂತೆ ಅವುಗಳ ನೈಲ್ಲಾ ನುಂಗಿ ಹಸಿವು ಅಡಗಲಿಲ್ಲವೆಂದು ಬೊಬ್ಬಿಡುತ್ತ ಹೊರಟು ಊರಿನ ಜನರ ನ್ನೆಲ್ಲಾ ತಿನ್ನುತ್ತ ಬರುತ್ತಿರಲು ; ಆಗ ಪಟ್ಟಣದಲ್ಲೆಲ್ಲಾ ಹಾಹಾಕಾರವುಂಟಾಯಿತು. ರಾವಣನದರ ಸಂಗತಿಯನ್ನು ಕೇಳಿ ಶೀಘ್ರವಾಗಿ ಶುಕ್ರಾಚಾರ್ಯನನ್ನು ಕರಿಸಿಕುಂಭಕರ್ಣನ ಹಸಿವಡಗುವಂತೆ ಮಾಡು ನಡೆ ಅಂದನು ಆತನು ಆ ಕ್ಷಣದಲ್ಲಿಯೇ ಬಂದು ಕುಂಭಕರ್ಣನಿಗೆ ಮಂತ್ರಸಿದ್ದವಾದ ಗುಳಿಗೆಯನ್ನು ಕೊಡಲು ; ಅವನದನ್ನು ತಿಂದು ಹಸಿವಡಗಿ ತೃಪ್ತನಾಗಿ ಧರನೆ ತೇಗಿದನು. ಅನಂತರದಲ್ಲಿ ಮಂತ್ರಿಗಳು ಸೇವ ಕರಿಂದ ಶ್ರೀಗಂಧತೈಲದ ಕೊಪ್ಪರಿಕೆಗಳನ್ನು ತರಿಸಿ ಅವನ ಮೈಗೆಲ್ಲಾ ಲೇಪನಗೊಳಿಸಿ ಅಡಕೆಗಳನ್ನು ತಂದು ಅವನ ಮುಂದೆ ರಾಶಿ ರಾಶಿಯಾಗಿ ಸುರಿದು, ಬಿಳಿಯ ವೀಳಯ ದೆಲೆಗಳ ಪಿಂಡಿಗಳ ಮಧ್ಯದಲ್ಲಿ ಸುಣ್ಣದ ಮುದ್ದೆಗಳನ್ನಿಟ್ಟು ತಂದವನ ಮುಂದಿರಿಸಿ ದರು. ಅವನು ಅವುಗಳನ್ನೆಲ್ಲಾ ತೆಗೆದು ಬಾಯಿಯಲ್ಲಿ ಹಾಕಿಕೊಂಡು ಅಗಿದು ನುಂಗಿ ಸ್ವಸ್ಥತೆಯಿಂದ ಕುಳಿತನು. ಆ ಮೇಲೆ ಕುಂಭಕರ್ಣನು ನಡೆದು ಬರುವ ಅಂಜನಾದ್ರಿಯಂತೆ ಅಣ್ಣನಾದ ರಾವಣನ ಓಲಗದ ಚಾವಡಿಗೆ ಬಂದು ಆತನಿಂದ ಸನ್ಮಾನಿತನಾಗಿ ಸಿಂಹಾಸನಾರ್ಧ ದಲ್ಲಿ ಕುಳಿತು ಕೊಂಡು ರಾವಣನನ್ನು ನೋಡಿ-ಎಲೈ ಅಗ್ರ ಜನೇ, ಇದೇಕೆ ನಿನ್ನ ಮೊಗವು ಕಳೆಗುಂದಿರುವುದು ? ಈ ದುಮ್ಮಾನವು ಯಾರಿಂದುಂಟಾಯಿತು ? ನಿನ್ನ ಓಲಗದ ಚಾವಡಿಯು ಬಯಲಾಗಿರುವುದಕ್ಕೆ ನಿಮಿತ್ತವೇನು ? ವಿಭೀಷಣ ಮಹೋ ದರ ಪ್ರಹಸ್ತಾತಿಕಾಯ ದೇವಾಂತಕ ನರಾಂತಕಾದಿ ವೀರರೆಲ್ಲಾ ಎಲ್ಲಿ ಹೋದರು ? ರುದ್ರನು ನಿನ್ನ ನೆನಹಿಗೆ ಒದಗನೋ ? ಕಮಲಯೋನಿಯು ನಿನ್ನ ಅರಮನೆಯ ಬಾಗಿಲ ಲ್ಲಿ ರನೋ ? ವಾಯುವು ಪ್ರತಿನಿತ್ಯದಲ್ಲೂ ಬಂದು ನಿನ್ನ ಓಲಗದ ಚಾವಡಿಯ ಕಸಗ ಳನ್ನು ಗುಡಿಸನೋ ? ಅಗ್ನಿ ಯು ವಿಧೇಯತೆಯಿಂದ ಬಂದು ನಿನ್ನ ಪಾಕಶಾಲೆಯಲ್ಲಿ ವೆ