ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 203 ಹಿಡಿದು ನಡೆದನು. ಕೌಸಲ್ಯಾದಿ ಅಂತಃಪುರ ಪರಿವಾರಗಳ ಅಂದಣಗಳು ಅವೀರೆಯ ರೊಡನೆ ಸಾಲುಸಾಲಾಗಿ ಹೊರಟವು. ಆಗ ಚತುರಂಗಬಲವೂ ವಿವಿಧವಾದ ಊಳಿಗ ದವರೂ ಇವರೇ ಮೊದಲಾದ ಸಮಸ್ತ ಜನರೂ ತತ್ತತ್ವ ಮಾನುಸಾರವಾಗಿ ಹೊರಟು ಬರುತ್ತಿದ್ದರು. ಅತ್ತ ಮೊದಲೇ ಮಾರ್ಗಸಮಿಾಕರಣಾರ್ಥವಾಗಿ ನಿಯಮಿತರಾಗಿ ಹೋಗಿದ್ದ ಶಿಲ್ಪಕಾರರು ಆ ನಂದಿಗ್ರಾಮದಿಂದ ರಾಜಧಾನಿಯಾದ ಅಯೋಧ್ಯಾನಗರದ ಪರ್ಯ೦ ತರವೂ ಹಳ್ಳತಿಟ್ಟು ಗಳನ್ನು ಸಮಮಾಡಿ ದೊಡ್ಡ ದೊಡ್ಡ ಹಳ್ಳಗಳಿಗೂ ತೊರೆಗಳಿಗೂ ಬಲವಾದ ಸೇತುಗಳನ್ನು ಕಟ್ಟಿ ಮಾರ್ಗದಲ್ಲೆಲ್ಲಾ ಸಣ್ಣ ಸಣ್ಣ ಕಲ್ಲುಗಳನ್ನೂ ಮಣ್ಣ ನ್ಯೂ ಹಾಕಿ ಗಟ್ಟಿ ಸಿ ಅಣುಮಾತ್ರವೂ ವ್ಯತ್ಯಾಸವಿಲ್ಲದಂತೆ ಇರುವ ಗಂಧದ ಕಲ್ಲೊ ಎಂಬಂತೆ ಮಾಡಿದರು, ಮತ್ತು ನಂದಿಗ್ರಾಮದಿಂದ ಅಯೋಧ್ಯೆಯ ವರೆಗೂ ಮಹೋ ನೃತವಾದ ಚಪ್ಪರವನ್ನು ಹಾಕಿ ಮಾಂದಳಿರು ಬಾಳೆಗಂಬ ವಿವಿಧವಾದ ಕುಸುಮ ಗುಚ್ಛ ಬಾಳೆಗೊನೆ ಎಳೆನೀರು ಈ ಮೊದಲಾದ ಮಂಗಲವಸ್ತುಗಳಿಂದಲೂ ವಿಚಿತ್ರಾ ಬರಗಳಿಂದಲೂ ತೋರಣಧ್ವಜ ಸತಾಕೆಗಳಿಂದ ಅಲಂಕರಿಸಿ ನೋಡುವವರ ನೇತ್ರ ಗಳಿಗೂ ಯೋಚಿಸುವವರ ಮನಸ್ಸುಗಳಿಗೂ ಆಶ್ಚರ್ಯವನ್ನು ೦ಟು ಮಾಡುವಂತೆ ಮಾಡಿ ದರು, ಮತ್ತು ಅಲ್ಲಿಗಲ್ಲಿಗೆ ಎಳೆನೀರು ನೀರ್ಮಜಿಗೆ ಪಾನಕ ಫಲಾಹಾರದ್ರವ್ಯ ಗಂಧ ಪುಷ್ಪ ತಾಂಬೂಲ ಈ ಮೊದಲಾದುವುಗಳಿಂದ ಕೂಡಿ, ಲೋಕದಲ್ಲಿ ಸುಕೃತಿಗಳಾದ ವರು ಸ್ವರ್ಗಕ್ಕೆ ಹೋಗುವ ದಾರಿಯೊಂದಿದ್ದರೆ ಅದು ಇದೇ ಎಂಬುವಂತೆ ಪರಿರಂಜಿ ಸುವ ಅರವಟಿಗೆಗಳು ಏರ್ಪಡಿಸಲ್ಪಟ್ಟುವ, ಅಲ್ಲಿಗಲ್ಲಿಗೆ ಲತಾಮಂಟಪಗಳೂ ಸಮಸ್ಯಾ ಹಾರ ಸಾಮಗ್ರಿಗಳಿಂದ ಸಂಪೂರಿತವಾದ ಬೀಡಾರಗಳೂ ನಯವಾಗ ಗಾರೆಯಿಂದ ಮಾಡಲ್ಪಟ್ಟು ಕಾಳಂಜಿಗಳಿಂದ ತುಂಬಲ್ಪಟ್ಟ ನಿರ್ಮಲೋದಕಗಳಿಂದ ಕೂಡಿದ ಕೊಳ ಗಳೂ ರಾರಾಜಿಸಿದುವು. ಮತ್ತು ಶ್ರೀರಾಮನು ಮೊದಲು ಅಯೋಧ್ಯಾನಗರವನ್ನು ಬಿಟ್ಟು ಅರಣ್ಯಕ್ಕೆ ಹೋದಾರಭ್ಯ ರಾಜಧಾನಿಯಲ್ಲೂ ದೇಶದಲ್ಲೂ ಸರ್ವಜನರೂ ವ್ಯಸನಾಕ್ರಾಂತರಾಗಿದ್ದುದರಿಂದ ಕೆಲಕೆಲರು ಪೊಳಲು ಊರು ಹಳ್ಳಿ ಇವುಗಳನ್ನು ಬಿಟ್ಟು ಹೋಗಿ ಪರದೇಶವಾಸಿಗಳಾದುದರಿಂದ ಅವುಗಳೆಲ್ಲವೂ ಹಾಳುಬಿದ್ದು ಮನೆಗಳು ಮುರಿದು ಕಂಬ ಬೋದಿಗೆಗಳೆಲ್ಲಾ ಬಿಟ್ಟು ತೊಟ್ಟಿ ಪಡಸಾಲೆಗಳೆಲ್ಲಾ ಅಮಂಗಲಗಳಾಗಿ ಮಹೋನ್ನತವಾದ ಮಹಡಿಗಳೆಲ್ಲಾ ನೆಲಸಮನಾಗಿ ವಿಶೇಷವಾದ ಹಾಳು ಗೋಡೆಗಳೇ ಕಾಣಿಸುತ್ತ ಹೆಗ್ಗಣಗಳಿಗೂ ಇಲಿಗಳಿಗೂ ಆವಾಸಗಳಾಗಿ ಎಲ್ಲಿ ನೋಡಿದರೂ ಇಲಿಬಿಲ ಗಳೂ ಹುಲ್ಲುಗಿಡಗಳೂ ಕಾಣಿಸುತ್ತಿದ್ದುವು. ಆ ಸ್ಥಳಗಳಲ್ಲಿ ಮೊಲ ನ ತೋಳ ಮೊದಲಾದುವುಗಳು ಬಂದು ವಾಸಮಾಡುತ್ತಿದ್ದುವು. * ಎಲ್ಲಿ ನೋಡಿದರೂ ಗೆದ್ದಲು ಗಳೂ ಸೊಳ್ಳೆಗಳೂ ಜೇನ್ನೊಣಗಳೂ ಮೊರೆಯುತ್ತಿದ್ದುವು ಹಾಳುಮನೆಗಳಲ್ಲಿ ಮುಂಗಿಸಿಗಳು ಓಡಿಯಾಡುತ್ತಿದ್ದುವು. ಹಾವುಗಳು ಪೂತ್ಕರಿಸುತ್ತ ಇಲಿಬಿಲಗಳನ್ನು ಹೊಕ್ಕು ಹೊರಟು ತಿರುಗುತ್ತಿದ್ದುವು. ಈ ರೀತಿಯಾಗಿ ಇನ್ನೂ ವಿವಿಧವಾದ ವಿಕಾರ ಸ್ಥಿತಿಗಳನ್ನು ಹೊಂದಿ ನೋಡುವವರಿಗೆ ದುಃಖಾಶ್ಚರ್ಯಭೀತಿಭಾವಗಳನ್ನು ಹುಟ್ಟಿ ಆ