ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

209 ರಾಮನ ಪಟ್ಟಾಭಿಷೇಕವು ಚಂದ್ರನು ತಮ್ಮನಾದ ಲಕ್ಷ್ಮಣನನ್ನು ನೋಡಿ-ಎಲೈ ಪ್ರಿಯ ಸಹೋದರನೇ, ನೀನು ಹದಿನಾಲ್ಕು ಸಂವತ್ಸರಗಳಿಂದಲೂ ನನ್ನೊಡನೆ ಕಾಡಿನಲ್ಲಿ ಮಹಾಕಷ್ಟವನ್ನು ಅನು ಭವಿಸಿದವನಾದಿ. ಈಗ ಯೌವರಾಜ್ಯವನ್ನು ವಹಿಸಿ ನನ್ನೊಡನೆ ಸುಖದಿಂದಿರುವವನಾಗು ಎಂದು ಎಷ್ಟು ವಿಧದಲ್ಲಿ ಒಡಂಬಡಿಸಿದಾಗ ಲಕ್ಷ್ಮಣನು ಒಪ್ಪದೆ- ಎಲೈ ಶ್ರೀರಾ ಮಚ೦ದ್ರನೇ, ಮಹಾತ್ಮನಾದ ನಿನ್ನ ಪಾದಗಳನ್ನು ಸೇವಿಸಿಕೊಂಡಿರುವುದೇ ನನಗೆ ಸ್ವರ್ಗಪದವಿಯು ಎಂದು ಹೇಳಲು; ಅನಂತರದಲ್ಲಿ ಶ್ರೀರಾಮನು ಭರತನಿಗೆ ಯುವರಾ ಜ್ಯಾಭಿಷೇಕವನ್ನು ಮಾಡಿಸಿ ಸುಗ್ರೀವಾಂಗದಾಂಜನೇಯಾದಿ ಕಪಿನಾಯಕರಿಗೂ ವಿಭೀ ಷಣಾದಿ ರಾಕ ಸರಿಗೂ ಅವರವರ ಮನಸ್ಸಿನ ಕೋರಿಕೆಗಳನ್ನು ನೆರವೇರಿಸಿಕೊಟ್ಟು ಸಂತೋಷವನ್ನು ಂಟು ಮಾಡಿ ಕಳುಹಿಸಿಕೊಟ್ಟು ತಾನು ತಮ್ಮಂದಿರೊಡನೆ ಕೂಡಿ ಧರ್ಮ ದಿಂದ ಕೋಸಲರಾಜ್ಯ ಪರಿಪಾಲನೆಯನ್ನು ಮಾಡುತ್ತಿದ್ದನು. ಲೋಕಾನಂದಕರನಾದ ಶ್ರೀರಾಮಚಂದ್ರನು ಈ ರೀತಿಯಾಗಿ ಧರ್ಮಮಾರ್ಗ ವನ್ನು ಅತಿಕ್ರಮಿಸದೆ ರಾಜ್ಯ ಪರಿಪಾಲನೆಯನ್ನು ಮಾಡುತ್ತಿದ್ದ ಕಾಲದಲ್ಲಿ ಆತನ ದೇಶ ದಲ್ಲಿ ಸ್ವಲ್ಪವಾದರೂ ಕಾಲಕ್ರಮವನ್ನು ಅತಿಕ್ರಮಿಸದೆ ಮುಗಿಲುಗಳು ಸಮೃದ್ಧಿ ಯಾಗಿ ಮಳೆಗಳನ್ನು ಕರೆಯುತ್ತಿದ್ದುವು, ಭೂಮಿಯೆಲ್ಲವೂ ಸಕಲ ವಿಧವಾದ ಬೆಳೆಗೆ ಳಿಂದ ಕೂಡಿ ಲೋಕಾನಂದದಾಯಕವಾಗಿದ್ದಿತು. ಧನಿಕರೆಲ್ಲರೂ ದರಿದ್ರರಿಗೆ ಸಹಾ ಯವನ್ನು ಮಾಡುತ್ತ ಅವರ ದಾರಿದ್ರವನ್ನು ನಿರ್ಮೂಲನಂಗೆಯ್ಯುತ್ತಿದ್ದರು. ರಾಮನ ರಾಜ್ಯದಲ್ಲಿ ಸರ್ವರೂ ನೆರೆಯವರ ಮಹದೈಶ್ವರ್ಯವನ್ನು ನೋಡಿ ಪರಮಸಂತೋ ಷದಿಂದ ಹಿಗ್ಗುತ್ತಿದ್ದರೇ ಹೊರತು ಅಸೂಯೆಯಿಂದ ಕೂಡಿದವರು ಒಬ್ಬರಾದರೂ ಇರಲಿಲ್ಲ, ಸಮಸ್ತರೂ ವಯಃಪೂರ್ತಿಯಿಂದ ಮೃತಿಯನ್ನು ಹೊಂದುತ್ತಿದ್ದರೇ ಹೊರತು ಅಕಾಲಮರಣವೆಂಬು ದು ದಶರಥನಂದನನ ಪ್ರಜೆಗಳಲ್ಲಿ ನಿರ್ನಾಮವಾಗಿ ದ್ವಿತು, ಉಂಡಮನೆಗೆರಡು ಬಗೆವವರೂ ಕೊಂಡ ಸಾಲಗಳನ್ನು ಹರಿಸದವರೂ ಮೋಸ ದಿಂದ ಜೀವಿಸುವವರೂ ಕಳ್ಳತನದಿಂದ ಪರರ ದ್ರವ್ಯಗಳನ್ನು ಅಳಿಹರಿಸುವವರೂ ಇಲ್ಲದ ದೋಷಗಳನ್ನು ಹೇಳುವವರೂ ಕೋಸಲರಾಜ್ಯವನ್ನು ಇಟ್ಟಿಣಿಕಿ ನೋಡಲಮ್ಮ ರು. ಚಾಡಿಕಾರರೂ ದುಷ್ಟರೂ ನಿಂದಕರೂ ಈ ಮೊದಲಾದ ದುರ್ಜನರು ಸುಳಿವಿಲ್ಲದೆ ಹೋದರು, ಸುಳ್ಳಾಡುವವರ ಹೆಸರೇ ಇಲ್ಲವು ವಂಚಕರ ವರ್ತಮಾನವೇ ಇಲ್ಲ ವು. ಶ್ರೀರಾಮಚಂದ್ರನ ರಾಜ್ಯದಲ್ಲಿ ಯಾರಿಗಾದರೂ ಆಧಿವ್ಯಾಧಿಗಳುಂಟಾದರೆ ಸರ್ವರೂ ತಮ್ಮ ತಮ್ಮ ಶಕ್ತಿಯನ್ನು ಅತಿಕ್ರಮಿಸಿ ಸಹಾಯ ಮಾಡುವವರಾಗಿಯ ಪರಸ್ಪರ ಪ್ರೀತಿಯುಳ್ಳವರಾಗಿಯೂ ಸಂತೋಷದಿಂದ ಬಾಳುತ್ತಿದ್ದರು. ಈ ಪ್ರಕಾರವಾಗಿ ಶ್ರೀರಾಮಚಂದ್ರನು ಚಂದ್ರನಂತೆ ಸರ್ವರಿಗೂ ಆಹ್ವಾದವನ್ನುಂಟುಮಾಡುವವನಾಗಿ ಪ್ರಜಾಪರಿವಾರಗಳನ್ನು ತನ್ನ ಮಕ್ಕಳನ್ನೋಪಾದಿಯಲ್ಲಿ ಕಾಪಾಡುತ್ತ ವೃದ್ದ ರನ್ನು ಸನ್ಮಾನಿಸುತ್ತ ವಿದ್ವಾಂಸರನ್ನು ಪೂಜಿಸುತ್ತ ಮುನಿಜನರನ್ನು ವಂದಿಸುತ್ತ ವಿರೋಧಿಗ ಳನ್ನು ಕೊಲ್ಲುತ್ತ ಪಾಪಕೃತ್ಯಗಳನ್ನು ನಿರ್ಮೂಲನಂಗೆಯು ಪರನಾರಿಯರನ್ನು ಸಹೋದರಿಯರಂತೆ ಕಾಣುತ್ತ ಸರ್ವೋತ್ಕೃಷ್ಟನಾಗಿದ್ದನು. 14