ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ನೆಯ ಭಾಗ ದಶಾವತಾರಗಳು 1, THE FIRST OR RISH INCARNATION, ೧, ಮಾವತಾರದ ಕಥೆ. ಸರ್ವಾಂತರ್ಯಾಮಿಯಾದ ಶ್ರೀಮನ್ನಾರಾಯಣನು ಮಹಾಲಕ್ಷ್ಮಿಸಮೇ ತನಾಗಿ ಪರಮಪದದಲ್ಲಿ ನಿತೈಶ್ವರ್ಯವನ್ನು ಅನುಭವಿಸುತ್ತ ನಾನು ಬಹುಪ್ರಜೆ ಯಾಗುವೆನು ಎಂದು ಸಂಕಲ್ಪ ಮಾಡಿದುದಾಗಿ ವೇದಾಂತದಲ್ಲಿ ಹೇಳಿರುವ ಪ್ರಕಾರ ಸರ್ವಜಗತ್ತು ಗಳನ್ನೂ ನಿರ್ಮಿಸಿ ಬಹುರೂಪವಾಗಿ ನಿಜಾತುಲಲೀಲೈಶ್ವರ್ಯವನ್ನು ಅನು ಭವಿಸಬೇಕೆಂದು ಸಂಕಲ್ಪಿಸಿ ಚಿದಚಿತ್ತುಗಳೇ ಮೊದಲಾದ ತನ್ನಲ್ಲಿರುವ ಸೂಕ್ಷ್ಮತ ತ್ರಗಳಿಂದ ಸ್ಫೂಲಚಿದಚಿದಾದಿ ತತ್ವಮಯವಾಗಿ ತನ್ನ ನಾಭೀಕಮಲದಲ್ಲಿ ಚತುರ್ಮುಖ ಬ್ರಹ್ಮನನ್ನು ನಿರ್ಮಿಸಿ ಆತನನ್ನು ಕುರಿತು ಎಲೈ ಬ್ರಹ್ಮನೇ, ಕೃತತ್ರೇತಾದ್ವಾಪರ ಕಲಿಗಳೆಂಬ ಚತುರ್ಯುಗಗಳು ಸಾವಿರ ಸಾರಿ ಮರಳಿ ಬಂದರೆ ಆಗ ನಿನಗೆ ಒಂದು ಹಗಲಾಗುವುದು. ಆ ಹಗಲಿನಲ್ಲಿ ನೀನು ಹದಿನಾಲ್ಕು ಲೋಕಗಳನ್ನೂ ಸೃಜಿಸು. ಆ ಲೋಕಗಳು ನಿನ್ನ ಹಗಲಿನಲ್ಲಿ ಪ್ರಕಾಶಿಸುತ್ತ ಇರುವುವು. ಆ ರಾತ್ರಿಯಲ್ಲಿ ಹಗಲಿ ನಂತೆಯೇ ಚತುರ್ಯುಗಗಳು ಒಂದು ಸಾವಿರ ಸಾರಿ ಮರಳುವ ಪರ್ಯ೦ತರವೂ ನೀನು ನಿದ್ರೆಯಿಂದ ಕೂಡಿದ್ದು ಪುನಃ ಬೆಳಗಾದ ಕೂಡಲೆ ಸೃಷ್ಟಿಯನ್ನು ಮಾಡುತ್ತ ಇದೇ ರೀತಿಯಾದ ಕಾಲಪರಿಮಾಣದಿಂದ ಕೂಡಿದ ಶತಸಂವತ್ಸರಗಳ ಪರ್ಯ೦ತರವೂ ಬ್ರಹ್ಮಪಟ್ಟವನ್ನಾಳುತ್ತಿದ್ದು ನೂರು ಸಂವತ್ಸರಗಳ ಕಡೆಯಲ್ಲಿ ಮಹಾಪ್ರಳಯವು ಉಂಟಾಗುವುದು. ಆಗ ನೀನು ಯಥಾಪ್ರಕಾರವಾಗಿ ನನ್ನಲ್ಲಿ ಬಂದು ಸೇರುವವ ನಾಗು ಎಂದು ಅಪ್ಪಣೆಯನ್ನು ಕೊಟ್ಟನು. ಆ ಮಾತನ್ನು ಕೇಳಿ ಬ್ರಹ್ಮನು ಶ್ರೀಮನ್ನಾರಾಯಣನಿಗೆ ನಮಸ್ಕಾರವನ್ನು ಮಾಡಿ-ಎಲೈ ಸ್ವಾಮಿಯೇ, ಅಲ್ಪಜ್ಞನಾದ ನಾನು ಯಾವ ಶಕ್ತಿಯಿಂದ ಲೋಕಗ ಇನ್ನು ಸೃಷ್ಟಿಸಬಲ್ಲೆನು ಎಂದು ಬಿನ್ನಹವನ್ನು ಮಾಡಿಕೊಳ್ಳಲು ; ಆಗ ಮಹಾವಿ ಷ್ಣುವು ಯುಕ್ತವೆಂದು ಹೇಳಿ ಆತನಿಗೆ ಸಕಲ ವೇದಗಳನ್ನೂ ಸಕ್ರಮವಾಗಿ ಉಪದೇ ಶಿಸಿ ವೇದಪುಸ್ತಕಗಳನ್ನು ಕೊಟ್ಟು--ಈ ವೇದಗಳ ಬಲದಿಂದ ಲೋಕಗಳನ್ನು