ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತ್ತಾವತಾರದ ಕಥೆ 211 ಸೃಜಿಸು ಎಂದು ಅಪ್ಪಣೆಯನ್ನು ಕೊಟ್ಟು ತಾನು ಮೊದಲು ಉದಕವನ್ನು ನಿರ್ಮಿಸಿ ಅದರ ಮೇಲೆ ಬ್ರಹ್ಮಾಂಡವನ್ನು ಕಲ್ಪಿಸಿ ಅದರೊಳಗೆ ಆ ಬ್ರಹ್ಮನನ್ನು ಇಟ್ಟು ತಾನೂ ಲಕ್ಷ್ಮಿ ಸಮೇತನಾಗಿ ಆ ಬ್ರಹ್ಮಾಂಡವನ್ನು ಪ್ರವೇಶಿಸಿ ಕ್ಷೀರಸಮುದ್ರದ ಮಧ್ಯದಲ್ಲಿ ಶೇಷಶಾಯಿಯಾಗಿ ಯೋಗನಿದ್ರೆಯಿಂದ ಕೂಡಿರುತ್ತಿದ್ದನು. ಇತ್ತಲಾ ಕಮಲಸಂಭವನು ಶ್ರೀಮಾಹಾವಿಷ್ಣುವಿನ ಆಜ್ಞಾನುಸಾರವಾಗಿ ಭೂಲೋಕ ಭುವರ್ಲೋಕ ಸುವರ್ಲೋಕ ಮಹೋಲೋಕ ಜನೋಲೋಕ ತಪೋಲೋಕ ಸತ್ಯಲೋಕಗಳೆಂಬ ಏಳು ಲೋಕಗಳನ್ನು ಮೇಲುಗಡೆಯಲ್ಲೂ ಅತಲ ವಿತಲ ಸುತಲ ತಲಾತಲ ರಸಾತಲ ಮಹಾತಲ ಪಾತಾಳಗಳೆಂಬ ಏಳು ಲೋಕಗಳನ್ನು ಕೆಳಗಡೆ ಯಲ್ಲೂ ಈ ರೀತಿಯಾಗಿ ಹದಿನಾಲ್ಕು ಲೋಕಗಳನ್ನು ನಿರ್ಮಿಸಿ ಆ ಲೋಕಗಳಲ್ಲಿ ವೇದವಚನಾನುಸಾರವಾಗಿ ಸೈದಜ ಅಂಡಜ ಉದ್ವಿಜ ಜರಾಯುಜಗಳೆಂಬ ನಾಲ್ಕು ವಿಧಗಳಾದ ಸ್ಥಾವರ ಜಂಗಮಪ್ರಾಣಿಗಳನ್ನು ಕಲ್ಪಿಸಿ ನವಬ್ರಹ್ಮರನ್ನೂ ಚತು ರ್ದಶ ಮನುಗಳನ್ನೂ ಸೂರ್ಯಚಂದ್ರರನ್ನೂ ಇಂದ್ರಾದಿಗಳನ್ನೂ ಸೃಷ್ಟಿಸಿ ಅವರವ ರಿಗೆ ಯೋಗ್ಯವಾದ ಅಧಿಕಾರಗಳನ್ನು ಕಟ್ಟು ಮಾಡಿ ಮಹಾವಿಷ್ಣುವಿನ ಆಜ್ಞಾನುಸಾ ರವಾಗಿ ನಡೆದು ಕೊಂಡಿದ್ದನು. ತರುವಾಯ ಆ ಬ್ರಹ್ಮನ ರಾತ್ರಿಯ ಅವಾಂತರ ಪ್ರಳಯವೆಂಬ ಜಲಪ್ರಳಯದ ಮನುಷ್ಯಮಾನದ ಮುಂಚಿನ ದಿನದಲ್ಲಿ ಈ ಭೂಮಂ ಡಲಕ್ಕೆ ರಾಜನಾಗಿದ್ದಂಥ ಸತ್ಯಾ ಚರಣೆ ಭಗವದ್ಭಕ್ತಿ ಪ್ರಜಾರಂಜನೆ ಈ ಮೊದಲಾದ ಸಕಲಸದ್ಗುಣಗಣಗಳುಳ್ಳವನಾದ ಸತ್ಯವ್ರತನೆಂಬ ರಾಜನು ಪ್ರಾತಃಕರ್ಮವನ್ನು ನೆರವೇ ರಿಸುವುದಕ್ಕಾಗಿ ಗಂಗಾನದಿಗೆ ಬಂದು ಮಿಂದು ಶುಚಿರ್ಭೂತನಾಗಿ ನದೀತೀರದಲ್ಲಿ ಕುಳಿತು ಸಂಧ್ಯಾವಂದನೆಯನ್ನು ಮಾಡುವುದಕ್ಕೆ ಪ್ರಾರಂಭಿಸಿ ಸೂರ್ಯನಿಗೆ ಅರ್ಧ್ಯ ವನ್ನು ಕೊಡುವುದಕ್ಕೋಸ್ಕರ ತನ್ನ ಬೊಗಸೆಯಲ್ಲಿ ಗಂಗಾಜಲವನ್ನು ಎತ್ತಿಕೊಂಡು ಆ ನದಿಯಲ್ಲಿ ಬಿಡಬೇಕೆಂದು ಪ್ರಯತ್ನಿಸಿದಾಗ ಆ ತನ್ನ ಬೊಗಸೆಯಲ್ಲಿರುವ ನೀರಿನಲ್ಲಿ ಒಂದು ಸಣ್ಣ ಮೀನಿನ ಮರಿಯು ಕಾಣಿಸಿದುದರಿಂದ ಆ ಮಿಾನಿನ ಮರಿಯನ್ನು ಆರ್ಥ್ಯದ ನೀರಿನಲ್ಲಿ ಸೇರಿಸಿ ಅರ್ವ್ಯವನ್ನು ಬಿಡಬಾರದೆಂದು ಯೋಚಿಸಿ ಆ ನೀರನ್ನು ಸುಮ್ಮನೆ ನದಿಯಲ್ಲಿ ಬಿಟ್ಟು ತಿರಿಗಿ ಬೊಗಸೆಯ ತುಂಬಾ ನೀರನ್ನು ಎತ್ತಲು ; ಪುನಃ ಆ ಬೊಗಸೆಯ ನೀರಿನಲ್ಲೂ ಅದೇ ಮಾನಿನ ಮರಿಯೇ ರಾಜನ ಕಣ್ಣಿಗೆ ಕಾಣಬಂದಿತು. ಆಗ ರಾಜನು ಆ ನೀರನ್ನು ಪುನಃ ನದಿಯಲ್ಲಿ ಬಿಟ್ಟನು. ಇದೇ ರೀತಿಯಾಗಿ ರಾಜನು ತನ್ನ ಬೊಗಸೆಯಲ್ಲಿ ನೀರನ್ನು ಎಷ್ಟು ಸಾರಿ ಎತ್ತಿದಾಗ ಆ ಮಿಾನಿನ ಪಿಳ್ಳೆ ಯು ಬಂದು ಬಂದು ಕಾಡುತ್ತ ಬಂದುದರಿಂದ ಅರಸನು ಅದನ್ನು ತಿಂಗಿ ನೀರಿನಲ್ಲಿ ಬಿಡಬೇ ಕೆಂದು ಯೋಚಿಸುತ್ತಿರುವಷ್ಟರಲ್ಲಿ ಆ ಮಿಾನ್ನರಿಯು ರಾಜನನ್ನು ಕುರಿತು--ಎಲ್ಲೆ ಮಹಾತ್ಮನಾದ ಸತ್ಯವ್ರತನೇ, ನೀನು ಬಹು ಧರ್ಮಿಷ್ಟನೂ ಕರುಣೆಯುಳ್ಳವನೂ ಸರ್ವ ಪ್ರಾಣಿಹಿತನೂ ಎಂದು ತಿಳಿದು ನಾನು ಈ ಮಹಾ ನದಿಯಲ್ಲಿ ಬೆಸ್ತರ ಬಲೆಯಿಂದುಂ ಟಾಗುವ ವಿಪತ್ತನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಿನ್ನ ಕೈಸೇರಿ ನಿನ್ನ ಮರೆಹೊಕ್ಕೆನು. ಇಂಥ ನಿರಾಶ್ರಯ ಜೀವಿಯಾದ ನನ್ನನ್ನು ನೀನು ಅನಾದರಣೆಯಿಂದ ಬಿಟ್ಟು ಬಿಡಬಹು ದೇನಯ್ಯಾ, ಧರ್ಮಾತ್ಮನೇ ? ಎಂದು ಕೇಳಿತು.