ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಕಥಾಸಂಗ್ರಹ-೪ ನೆಯ ಭಾಗ ನಾಗಿ-ಈ ವಂಚಕನ ತೇರನ್ನು ಹೊಯ್ತು ನುಚ್ಚು ನುರಿಯಾಗಿ ಮಾಡಿಬಿಡುವೆನೆಂದು ಮುಷ್ಟಿಯನ್ನೆತ್ತಿದನು. ಶ್ರೀರಾಮಚಂದ್ರನು ಲಕ್ಷ್ಮಣಾಂಜನೇಯರ ಉದ್ಯೋಗವನ್ನು ನೋಡಿ ಸಾಕು ! ಸಾಕು ! ಅನುಚಿತಕಾರ್ಯದಲ್ಲಿ ಉದ್ಭ ಮಿಸಬೇಡಿರಿ. ಪರರ ಉನ್ನತಿಯನ್ನು ನೋಡಿ ಅಸೂಯೆಪಡತಕ್ಕುದು ಉತ್ತಮರಿಗೆ ಭೂಷಣವಲ್ಲ, ಇಂಥ ಹೆಚ್ಚು ಕಡಮೆಗಳನ್ನು ಯೋಚಿಸುವುದರಿಂದ ಪ್ರಯೋಜನವೇನು ? ಯುದ್ದದಿಂದ ಉಂಟಾಗುವ ಜಯಾಪಜಯಗಳಲ್ಲಿ ನ್ಯೂನಾಧಿಕಾಂಶಗಳನ್ನು ನೋಡುವುದರಲ್ಲಿ ಮನಸ್ಸಿಡಿರಿ ಎಂದು ಹೇಳಿ ಅವರಿಬ್ಬರನ್ನೂ ಸಮಾಧಾನಪಡಿಸಿ ನಿಲ್ಲಿಸಿದನು. ಅನಂತರದಲ್ಲಿ ಲೋಕಾದ್ಭುತಯುದ್ಧ ನಿರೀಕ್ಷಣಾರ್ಥವಾಗಿ ಗಗನಮಂಡಲದಲ್ಲಿ ನೆರೆದಿದ್ದ ಸುರಸಮೂಹವು ನೊಸಲುಗಳಲ್ಲಿ ಅಂಜಲಿಗಳನ್ನಿಟ್ಟು ಕೊಂಡು ನಿಂತು ಸ್ವಸ್ವಾಮಿಯಾದ ಪಾಕಶಾಸನನನ್ನು ಕುರಿತು ಮೃದುಮಧುರವಾದ ಮಾತುಗಳಿಂದ ಎಲೈ, ಸುರಕಿರೀಟಖಚಿತರತ್ನ ರುಚಿರಾಜಿತಚರಣಯುಗಳನೇ, ನೋಡು, ಸದ್ಧ ರ್ಮ ಸ್ಥಾಪಕನಾದ ಶ್ರೀರಾಮನು ನೆಲದ ಮೇಲೆ ನಿಂತಿದ್ದಾನೆ. ಅವನಿಗೆ ಪ್ರತಿಭಟನೂ ನೀಚನೂ ಆದ ರಾವಣನು ರಥಾರೂಢನಾಗಿ ಮೆರೆಯುತ್ತಿದ್ದಾನೆ. ಮಹಾತ್ಮನಾದ ಸೀನು ಈ ಅಸಂಗತವನ್ನು ನೋಡುತ್ತ ಸುಮ್ಮನಿರುವುದುಚಿತವೇ ಎಂದು ಬಿನ್ನವಿಸಲು; ಇಂದ್ರನು ಆ ಮಾತುಗಳಿಗೊಪ್ಪಿ ಆ ವಿಷಯವನ್ನು ಬ್ರಹ್ಮರುದ್ರರಿಗೆ ತಿಳಿಸಿ ಅವರ ಸಮ್ಮತಿಯಿಂದ ತನ್ನ ಸಾರಥಿಯಾದ ಮಾತಲಿಯನ್ನು ಕರೆದು--ಎಲೈ ಮಾತಲಿಯೇ, ನನ್ನ ರಥವನ್ನು ಸಮಸ್ತ ಯುದ್ಧ ಸಾಮಗ್ರಿಗಳೊಡನೆ ಸಿದ್ಧ ಮಾಡಿ ತೆಗೆದು ಕೊಂಡು ಹೋಗಿ ನೃಸಚೂಡಾಮಣಿಯಾದ ರಾಮನಿಗೊಪ್ಪಿಸಿ ನೀನು ' ಸಾರಥ್ಯವನ್ನು ಮಾಡು, ನಡೆ ! ಎಂದು ಅಪ್ಪಣೆಯನ್ನಿತ್ತನು. ಆಗ ಮಾತಲಿಯು ದಿವ್ಯರಥಕ್ಕೆ ಉತ್ತಮಾಶ್ಚಗ ಳನ್ನು ಕಟ್ಟಿ ಯುದ್ಧೋಚಿತ ಸಾಮಗ್ರಿಗಳನ್ನು ಅದರಲ್ಲಿ ಸಿದ್ಧ ಮಾಡಿಟ್ಟು ಮೇಲೇರಿ ಕೊಂಡು ಹೊರಟು ಶೀಘ್ರವಾಗಿ ರಣಭೂಮಿಗೆ ಬಂದು ಸರೋಜದಳನಯನನಾದ ಶ್ರೀರಾಮನಿಗೆ ನಮಸ್ಕರಿಸಿಎಲೈ ರಾಜೇಂದ್ರನೇ, ಇದು ದೇವೇಂದ್ರನ ರಥವು. ನಿನ್ನ ಅಡಿದಾವರೆಗಳಿಂದ ಇದನ್ನು ಅಲಂಕರಿಸಬೇಕೆಂದು ಆತನು ಇದನ್ನು ನಿನಗಾಗಿ ಕಳುಹಿಸಿರುವನು. ಅದು ಕಾರಣ ಈ ರಥದ ಮೇಲೆ ಬಿಜಯಮಾಡಬೇಕೆಂದು ಬಿನ್ನವಿ ಸಿದನು. ಆಗ ಶ್ರೀರಾಮನು ಮಾತಲಿಯನ್ನು ಕುರಿತು-ಎಲೈ ಇಂದ್ರಸಾರಥಿಯೇ, ವನವಾಸಿಗಳಾದ ನಾವು ಇಂದಿನ ವರೆಗೂ ಯಾವ ತೇರಿನ ಬಲದಿಂದಲೂ ವಿರೋಧಿ ಗಳನ್ನು ಜಯಿಸಲಲ್ಲ, ಈಗ ಮಾತ್ರ ನಿನ್ನೊಡೆಯನ ಹಂಗು ನಮಗೇಕೆಬೇಕು ? ಆತನು ಮಾಡಿದ ಈ ಉಪಕಾರದಿಂದ ನಾವು ತುಂಬಾ ಸಂತುಷ್ಟರಾಗಿರುವೆವು. ಮತ್ತು ಕೃತಜ್ಞರಾಗಿರುವೆವು, ನಾನು ಬರಿಗಾಲಿನಿಂದಲೇ ನಿಂತು ನಿನ್ನೊಡೆಯನು ಮೆಚ್ಚುವ ಹಾಗೆ ಈ ಸುರವಿರೋಧಿಯೊಡನೆ ಕಾದಿ ಗೆಲ್ಲುವೆನು. ಅದು ಕಾರಣ ನೀನು ಸುರಲೋಕವನ್ನು ಕುರಿತು ತೆರಳು, ಅಲ್ಲದಿದ್ದರೆ ನನ್ನ ಪಾರ್ಶ್ವದಲ್ಲಿದ್ದು ಕೊಂಡು ನಮ್ಮ ಜಗಳದ ಕ್ರಮವನ್ನೆಲ್ಲಾ ನೋಡಿಕೊಂಡು ಹೋಗಿ ಇಂದ್ರಾದಿಗಳಿಗೆ ಚೆನ್ನಾಗಿ ತಿಳಿಸು ಎಂದು ಹೇಳಿದಷ್ಟರಲ್ಲೇ ನಾರದನು ಬಂದು--ಎಲೈ ದಿನಕರಕುಲತಿಲಕನಾದ