ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಮಯು ೬೩ ಕಾವು ಆತನಿಗೆ ದಿಲ್ಲಿಯ ವಜೀರನ ಅಧಿಕಾರ ಕೊಡುವವೆಂದು ಹೇಳಿದ್ದಕ ಆಶ ಮಾಡಿಕೊಂಡು ಆತನು ನಿಮ್ಮ ವಸಾಗಿ ಇರುವನು; ಆದರೂ ಈ ಪ್ರಸಂಗದಲ್ಲಿ ಆತನಿಂದ ನಮಗೆ ಹೆಚ್ಚು ಪ್ರಯೋಜನವಾದೀತೆಂದು ನಾನು ಹೇಳಲಾರೆನು. - ಭಾವು ಸಾಹೇಬ-ಅದೇಕೆ? ಹಾಗೆ ನೀವು ಹೇಳುವದಕ್ಕೆ ಸ್ಪಷ್ಟ ಕಾರಣ ವೇನಾದರೂ ಇದ್ದರೆ ಅದನ್ನು ನನ್ನ ಮುಂದೆ ಬಚ್ಚಿಡದೆ ಹೇಳಿರಿ. ಮಹದಾಜ-ಸರಕಾರ, ಈವರೆಗೆ ನಾವು ಮುಸಲ್ಮಾನರೊಡನೆ ನಡೆದು ಕೊಂಡರೀತಿಯನ್ನೂ, ನಾವು ದಿಲ್ಲಿಯಲ್ಲಿ ನಡೆಸಿದ ಕೃತ್ಯಗಳನ್ನೂ ಮನಸ್ಸಿನಲ್ಲಿ ತಂದರೆ, ಮುಸಲ್ಮಾನರು ತಮ್ಮ ಜಾತಿಯವರನ್ನು ಬಿಟ್ಟು ನಮ್ಮ ಕಡೆಗೆ ಬರುವ ಧೈರ್ಯಮಾಡಲಾರರೆಂದು ತಮಗೂ ತೋರಬಹುದು. ಸುಜಾಉದ್ಬಲನು ನಮ್ಮ ಕಡೆಗೆ ಬಂದರೂ ಅವನ ಸೈನ್ಯದವರು ಅವನನ್ನು ಅನುಸರಿಸುವರೋ ಇಲ್ಲವೋ ಹೇಳಲಾಗುವದಿಲ್ಲ, ಅಂದಬಳಿಕ ಸೈನ್ಯವಿಲ್ಲದೆ ಒಬ್ಬ ಸುಜಾನನನ್ನು ಕಟ್ಟಿಕೊಂಡು ನಾವು ಮಾಡುವದೇನು ? ನಮ್ಮ ಮೇಲೆ ಯಾವ ಮುಸಲ್ಮಾನನ ನಂಬಿಗೆಯ ಇರುವದಿಲ್ಲ. ಹಿಂದುಸ್ಥಾನದಲ್ಲಿದ್ದ ಮಸೀದೆಗಳಲ್ಲಿ ಪ್ರಾರ್ಥನೆಗಾಗಿ ಕರೆಯುವ ಶಬ್ದಗಳನ್ನು ನಾವು ಉಚ್ಚರಿಸಗೊಡುವದಿಲ್ಲೆಂದು ಎಲ್ಲ ಕಡೆಗೆ ತಾವು ಪ್ರಸಿದ್ಧ ಪಡಿಸಿರುವಿರಿ; ಬಾದಶಾಹಿಯ ಸಿಂಹಾಸನದ ಮೇಲೆ ಶ್ರೀಮಂತ ವಿಶ್ವಾಸರಾಯರವರನ್ನು ಕುಳ್ಳಿರಿಸಿದಿರಿ; ದಿಲ್ಲಿಯ ಬಾದಶಾಹಿಯ ವಾಡೆಯನ್ನು ಸುಳಿದು-ಸೂರಮಾಡಿದಿರಿ. ಅಂದಬಳಿಕ ಸರಕಾರ, ನಮ್ಮನ್ನು ಯಾವ ಮುಸ ಲಾನನು ನಂಬಬಹುದು? ನೀವು ಸುಜಾ ಉದೌಲನಿಗೆ ದಿಲ್ಲಿಯ ವಜೀರಿಯ ಅಧಿಕಾರವನ್ನು ಕೊಡುತ್ತೇವೆಂದು ಹೇಳಿರುವಿರಿ, ಆದರೆ ನಾಳೆ ಪ್ರಸಂಗವಶಾತ್ ಯುದ್ಧದಲ್ಲಿ ನಮಗೆ ಜಯವಾದರೆ, ನೀವು ವಚನಭ್ರಷ್ಟ ರಾಗಿ ದಿಲ್ಲಿಯ ವಜೀರಿ ಯ ಅಧಿಕಾರವನ್ನು ಒಬ್ಬ ಹಿಂದುವಿಗೆ ಕೊಡಬಹುದೆಂದು ಸುಜಾನು ಯಾಕೆ ಶಂಕಿಸಬಾರದು ? ಈಗ ಸುಮ್ಮನ ಆಶ ತೋರಿಸುವದಕ್ಕಾಗಿ ವಚನಕೊಟ್ಟಿರುವಿ ರೆಂದು ಆತನು ತಿಳಿದುಕೊಳ್ಳುವ ಸಂಭವವಿಲ್ಲವೆ ? ನಮ್ಮ ಕೃತಿಯೇ ಇದಕ್ಕೆ ಸಾಕ್ಷಿಯು, ಸರಕಾರ, ಸ್ಪಷ್ಟ ಮಾತಾಡುವದಕ್ಕಾಗಿ ಕ್ಷಮೆ ಇರಬೇಕು. ಹಾಗೆ ಸ್ಪಷ್ಟವಾಗಿ ಹೇಳದಿದ್ದರೆ ಮುಂದಿನ ಆಲೋಚನೆಗೆ ತೊಂದರೆ ಬರುವದು, ಆದ್ದ ರಿಂದ, ಸುಜಾಉದ್ಲನು ಇಂಥ ಕಠಿಣ ಪ್ರಸಂಗದಲ್ಲಿ ಅಬದಾಳಿಗೆ ವಿರೋಧಿ ಯಾಗಿ ನಮಗೆ ಸಹಾಯ ಮಾಡುವನೆಂದು ನಾನಂತೂ ಹೇಳಲಾರೆನು, ನಮ್ಮ ಈ ವಿಪನ್ನ ಸ್ಥಿತಿಯಲ್ಲಿ ಯೂ ಆತನು ಯಾವ ದೊಡ್ಡ ಆಶೆಯಿಂದ ನಮಗೆ ಸಹಾ ಯಮಾಡಬೇಕು ? ಭಾವುಸಾಹೇಬ-(ಪಶ್ಚಾತ್ತಾಪದಿಂದ) ಮಹದಾಜಿ, ನಿಮ್ಮ ಮಾತು ಸರಿ, ಆದರೆ ಹಲವು ಪ್ರಸಂಗಗಳಲ್ಲಿ ನಾನೂ, ಸುಜಾನೂ ವಚನ ರುವದರಿಂದ, ಅಂಥ ಕಠಿಣಪ್ರಸಂಗವೇ ಒದಗಿದರೆ ನಮ್ಮ ಕುಟುಂಬ ದವ ರಕ್ಷಣವನ್ನೂ ಸುಜಾನು ಮಾಡಲಿಕ್ಕಿಲ್ಲವೆ? ಅಬದಾಲಿಯು ಸುಜಾನ ಅಷ್ಟು ಮಾತನ್ನೂ ನಡಿಸಲಿಕ್ಕಿಲ್ಲವೆ ? ನಮ್ಮ ಗಂಡಸರದು ಹ್ಯಾ ಗಾದರೂ ಆಗಲಿ, ಪಾಪ! (ಪರದೆಯ ಕಡೆಗೆ ಬೆರಳುನಾಡಿ) ಈ ಅಬಲಾಜನರ ಸುರಕ್ಷತೆಯ ವ್ಯವ