” ವೈವಬಲ ಲವ! ತನ್ನ ಸರದಾರನು ನೆಲಕ್ಕುರುಳಿದಕಲೆ ಮರಾಟರು ತಮ್ಮ ಗಳರದವರಿಗೆ ಓವ ಸರಿದರು. ಇಬ್ರಾಹಿಮಾನನ ತೋಪುಗಳು ಹಾರುತ್ತಿದ್ದರಂದ ಅವರನ್ನು ಬೆನ್ನಟ್ಟ ಬರಲಿಕ್ಕೆ ಶತಗಳಿಗೆ ಆಸ್ಪದವಾಗಲಿಲ್ಲ. ಮೆಹೆಂದಳೆಯು ರಣಾಂಗಣದಲ್ಲಿ ಬಿದ್ದ ದ್ದನ್ನು ನೋಡಿ ಸಿಂದೆ-ಜೋಳಕರರು ಲವ್ರದಿಂದ ತಮ್ಮ ತಮ್ಮ ರಾವತರನು ಶತ್ರು ಗಳಮೇಲೆ ನೂಕಿ, ಐದಾರು ಸಾವಿರ ರೂಬಲರನ್ನು ಕುರಿಗಳಂತೆ ಸೊಯರು, ಹೆಣ ಗಳ ರಾಶಿಯು ಬಿದ್ದಿತು; ರಕ್ತಪ್ರವಾಹವು ಸುಮಿತು! ನಾಲ್ಕುಗಳಿಗೆ ರಾತ್ರಿಯ ವರೆಗೆ ಯುದ್ಧವು ನಡೆದಬಳಿಕ, ಉಭಯ ಸೈನಿಕರು ತಮ್ಮ ತಮ್ಮ ಛಾವಣಿಗೆ ತೆರಳಿದರು. ಮೆಂದಳೆಯಂಥ ಅನುಭವಿಕನಾದ ಸೂರಸರದಾರನು ಮಡಿದದ್ದರಿಂದ, ಭಾವು ಸಾಹೇಬನು ಶೋಕಸಾಗರದಲ್ಲಿ ಮುಣುಗಿದನು. ಗಾಯಹೊಂದಿದ ಮೇಪೇಂದಳೆಯನ್ನು ಪ್ರೇರಿಕೊಂಡು ಛಾವಣಿಗೆ ಹೋದರು. ಆಗ ಮೇdಂವಳಿಗೆ ಟುಕು-ಟುಕು ಜೀವವಿತ್ತು, ಆತನ ನಾಡಿಗಳು ಸರಿಯಹತ್ತಿದ್ದವು. ಬಾಯಲ್ಲಿ ತುಳಸೀಪತ್ರವನ್ನೂ, ಗಂಗಾಜಲವನ್ನೂ ಹಾಕಿ, ಉಪಾಧ್ಯಾಯರು ಬಳಿಯಲ್ಲಿ ಕುಳಿತು ತಾವಾರವನ್ನು ನಡೆಸಿದರು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಮೇಹಂದಳೆಯ ಫಾಣೋತ್ಯ ಮಣವಾಯಿತು. ಆಗ ಆತನ ಹೆಂಡತಿ ಯಾದ ಲಕ್ಷ್ಮೀಬಾಯಿಯ ದುಃಖವನ್ನು ವರ್ಣಿಸಲಸಲ್ಲ; ಆದರೆ ಆ ಪತಿವ್ರತೆಯು ತನಗಾದ ದುಃಖವನ್ನು ಹೊರಗೆಡವದೆ, ಪತಿಯೊಡನೆ ಸತಿಹೋಗುವದನ್ನು ನಿಶ್ಚಯಿಸಿ ದಳು. ಆಕೆಯ ಮಗನಾದ ಅಸ್ಸಾಗಾಯವೆಂಬವನು ಹನ್ನೆರಡು ವರ್ಷದ ಬಾಲಕನಾಗಿ ದ್ದನು. ಲಕ್ಷ್ಮೀಬಾಯಿಯನ್ನು ಭಾವುಸಾಹೇಬನು ಒಡಹುಟ್ಟಿದ ಅಕ್ಕನಂತೆ ಮನ್ನಿಸು ತಿದ್ದನು. ಈ ಸ್ಥಿತಿಯಲ್ಲಿ ಲಕ್ಷ್ಮೀಬಾಯಿಯು ನತಿಯ ಪನ್ಮಾತೆ ಬದುಕಿ ಇರಬಹುದಾ ಗಿತ್ತು. ಇತ್ತ ಪುತ್ರನಾತ್ಸಲ್ಯ, ಅತ ಭಾವುಸಾಹೇಬನ ಭಸ್ಮ ಇವು ಆಕೆಯ ಸಹಗಮನಕ್ಕೆ ಪ್ರತಿಬಂಧಕಗಳಾಗಬಹುದಾಗಿತ್ತು; ಆದರೆ ಆ ಸಾಧಿಯು ಇದಕ್ಯಾನ ದಕ್ಕೂ ಮನಸ್ಸು ಮಾಡಲಿಲ್ಲ. ಬೇಕಾದವರು ಬೇಕಾದ ಶಾಸ್ವಾರ್ಥ ಹೇಳಿದರು, ಬೇಕಾ ದವರು ಬೇಕಾದ ಆಕೆ ತೋರಿಸಿದರು, ಕೂಸಾದ ಅಷ್ಟಾನು ಕೊರಳಿಗೆ ಬಿದ್ದು ಬೇಕಾದಷ್ಟು ಅತನು, ಭಾವುಸಾಹೇಬನು ಸಹಗಮನ ಮಾಡಬಾರದೆಂದು ಸೆರಗೊಡಿ ಬೇಕಾದಷ್ಟು ಬೇಡಿಕೊಂಡನು; ಆದರೆ ಲಕ್ಷ್ಮೀಬಾಯಿಯು ಅದಾವದಕ್ಕೂ ಕಿವಿಗೊಡದೆ-ಸೋಲದೆಮೋಹವಶವಾಗದೆ-ಭಿಡೆಗೆ ಬೀಳದೆ-ಸಹಗಮನವನ್ನೇ ನಿರ್ಧರಿಸಿದಳು. ಆಕೆಯು ಭಾವು ಸಾಹೇಬನನ್ನು ಕುರಿತು--“ಭಾವುಸಾಹೇಬ, ಪ್ರಾಣೇಶ್ವರನು ನನ್ನನ್ನು ಬಿಟ್ಟು ಪರ ಲೋಕಕ್ಕೆ ತೆರಳಿರಲು, ನಾನು ಇಲ್ಲಿ ಉಳಿದು ಮಾಡುವದೇನು? ಅವರೆಲ್ಲಿಯೋ ನಾನು ಅಲ್ಲಿ! ಈಗ ನನಗೆ ಬದುಕಿರೋಣವೇ ಮರಣವು, ಮರಣವೇ ಬದುಕಿರೋಣವೆಂದು ತಿಳಿ ಯಿರಿ. ನನ್ನ ಕೂಸಾದ ಅಪ್ಪಾರಾಯನನ್ನು ನಿಮ್ಮ ಉಡಿಯಲ್ಲಿ ಹಾಕಿರುವೆನು, ಆತ ನನ್ನು ರಕ್ಷಿಸಿರಿ, ಸರ್ವೇಶ್ವರನು ಎಲ್ಲರನ್ನು ರಕ್ಷಿಸುತ್ತಿರುವಾಗ ನಾವು ಯೋಚಿಸಿ ಮಾಡುವವೇನು? ನಾಶವಂತವಾದ ಈ ಐಹಿಕಮೋಹಪಾಶದಲ್ಲಿ ನನ್ನನ್ನು ತೊಡಗಿಸ ಬೇಡಿ. ವೀರಪುತ್ರರಿಗೆ ರಣಾಂಗಣದಲ್ಲಿಯ ಮರಣದಂತೆ, ಸತಿಯರಿಗೆ ಸಹಗಮನವು
ಪುಟ:ಕುರುಕ್ಷೇತ್ರ ಗ್ರಂಥ.djvu/೬೨
ಗೋಚರ