ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಗಳಂಕ. AM ಈ ಯಷಿಗಳಿಗೂ ದೇವತೆಗಳಿಗೂ ಗುರುಗಳಿಗೂ ಯಥೇಚ್ಛವಾಗಿ ಬದಿಸುತ್ತಿದ್ದ ರು. ಅನಂತರ ಸದುಪ್ತ ಋತ್ವಿಜರೂ ತಮ್ಮ ನಿತ್ಯ ಕಾರ್ಯಗಳನ್ನು ಮುಗಿಸಿ ಕೊಂಡು ಯಜ್ಞಶಾಲೆಯಲ್ಲಿ ನಡೆಯತಕ್ಕ ಹೋಮಗಳನ್ನು ಯಥಾವಿಧಿಯಾಗಿ ನ ಡಿಸುವರು. ಆಗ ಸಮಸ್ತ ದೇವತೆಗಳೂ ತಮ್ಮ ತಮ್ಮ ಹವಿಸ್ಸುಗಳನ್ನು ಯಜ್ಞ ಕುಂಡಕ್ಕೆ ಬಂದು ತಾವೇ ಸ್ವೀಕರಿಸುತ್ತಿದ್ದರು. ಆಶ್ವಯ, ಅಸ್ತುಷw? ಎಂಬ ಧ್ವನಿಗಳು ಮೇಘಗರ್ಜನೆಯಂತೆ ಸಮಸ್ತರಿಗೂ ಕೇಳಲಾರಂಭಿಸಿದವು. ಆ ಯಜ್ಞಶಾಲೆಯ ಮಧ್ಯದಲ್ಲಿ ಒಂದು ದೊಡ್ಡ ಅಗ್ನಿಕುಂಡವಿತ್ತು, ಅದರ ಸಮೀಪ ದಲ್ಲಿ ಯತ್ನಿ ಜರು ಕುಳಿತಿದ್ದರು. ಮುನಿಗಳು, ರಾಜರು, ಪಂಡಿತರು, ಸ್ತ್ರೀಯರು, ಇವರೇ ಮೊದಲಾದ ಸಮಸ್ತ ಮಂಡಲಿಗಳೂ ತಮ್ಮ ತಮ್ಮ ಯೋಗ್ಯನಗಳಲ್ಲಿ ವ್ಯವಸ್ಥಿತ ರೀತಿಯಿಂದ ಕುಳಿತಿದ್ದರು. ಮಧ್ಯಾಹ್ನ ಕಾಲದ ಆಹುತಿಗಳು ಮುಗಿದ ಬಳಕ'ಸಮಸ್ತರಾ ಮಧ್ಯಾತ್ಮಿಕ ಕೃತ್ಯಗಳನ್ನು ನೆರವೇರಿಸಲು ತೆರಳಿದರು. ಅನಂ ತರ ಲಕ್ಷಣನು ಭೋಜನ ಶಾಲೆಯಲ್ಲಿ ಮಂಡವಿ, ಶ್ರುತಕೀರ್ತಿ, ಊರ್ಮಿಳಾ ಇ ವರ ಸಹಾಯದಿಂದ ಶೀಘ್ರವಾಗಿ ಭೋಜನ ವ್ಯವಸ್ಥೆಯನ್ನು ನಡೆಸಿದ್ದನು. ಅಲ್ಲಿ ಎಲ್ಲಿ ನೋಡಿದರೂ ರತ್ನಖಚಿತವಾದ ಮಣೆಗಳು, ಸುವರ್ಣದ ಭೋಜನ ಪಾತ್ರೆ ಗಳು, ಅವುಗಳಲ್ಲಿ ಷಡ್ರಸಯುಕ್ತವಾದ ಭಕ್ಷ್ಯ-ಭೋಜ್ಯಗಳು ಕಂಗೊಳಿಸುತ್ತಿದ್ದವು. ಅನಂತರ ಬ್ರಾಹ್ಮಣರೂ, ಮುನಿಗಳೇ ಮೊದಲಾದ ಅತಿಥಿಗಳೆಲ್ಲರೂ ಭೋಜನಶ ಲೆಗೆ ಬಂದು ತಮತಮಗೆ ಯೋಗ್ಯವಾದ ಅಸನಗಳಲ್ಲಿ ಕಳಿತರು. ಬ್ರಾಹ್ಮಣರ ಭೋಜನವು ಪ್ರಾರಂಭವಾಯಿತು. ಆಗ ರಾಮ-ಲಕ್ಷ್ಮಣ-ಭರತ-ಶತ್ರುಘ್ನ ರು ಕೈಜೋಡಿಸಿಕೊಂಡು “ಎಲೈ ದ್ವಿಜೋತ್ತಮರ, ಯಥೇಚ್ಛ ಭೋಜನ ಮಾಡ ಬೇಕು. ಸಂಕೋಚ ಮಾಡಿಕೊಳ್ಳಬೇಡಿರಿ, ಇಷ್ಟವಿಲ್ಲದ ಪದಾರ್ಥವನ್ನು ಚೆಲ್ಲಿ ಬಿಡಿಸಿ, ಬೇಕಾದ ಪದಾರ್ಥವನ್ನು ಮತ್ತೆ ಮತ್ತೆ ಕರೆಸಿಕೊಳ್ಳಿರಿ,” ಎಂದು ಪ್ರಾರ್ಥ ನೆ ಮಾಡಿದರು. ಮತ್ತು ಸೀತಾ, ಮಾಂಡವಿ, ಶ್ರುತಕೀರ್ತಿ, ಊರ್ಮಿಳ ಇವರೆಲ್ಲ ರೂ ಬಹು ಸಂತೋಷದಿಂದ ದೇರಬುಹ್ಮಣರಿಗೆ ರುಚಿಕರಗಳಾದ ಪದಾರ್ಥಗಳನ್ನು ತಂದುತಂದು ಬಡಿಸುತ್ತಿದ್ದರು. ಸುಮಂತ್ರನೇ ಮೊದಲು ಮಂತ್ರಿಗಳು ಬ್ರಾಹ್ಮಣ ರೆಲ್ಲರಿಗೂ ಘಳಿಬೀಸುತ್ತಿದ್ದರು. ಇನ್ನೂ ಕೆಲವರು ಕೇಸರಿ, ಪಚ್ಚ ಕರ್ಪೂರಗಳಿಂದ ಘಮಘಮಾಯಮಾನವಾದ ನೀರನ್ನು ಬಡಿಸುತ್ತಿದ್ದರು. ಭೋಜನವಾದ ಮೇಲೆ ಬ್ರಾಹ್ಮಣರಿಗೆ ಕೈತೊಳೆಯಲು ದೂತರು ಬಿಸಿನೀ ರುಗಳನ್ನು ಸಿದ್ಧಪಡಿಸಿದ್ದರು. ಅನಂತರ ಬ್ರಾಹ್ಮಣರು, ದೇವತೆಗಳು, ಮುನಿಗಳು