ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಮೊದಮೊದಲು ಠಳಕವಾಡಿಯಲ್ಲಿದ್ದಾಗ ಎಂಟೆತ್ತಿನ ಒಂಬತ್ತನೇ ನಂಬ ರಿನ ರಂಟೆಗಳನ್ನಷ್ಟೇ ಮಾಡುತ್ತಿದ್ದರು. ಮುಂದೆ ಮಧ್ಯಪ್ರಾಂತ, ಗುಜರಾತ, ನಾಳವಾ, ಕೊಂಕಣ ಭಾಗಗಳಿಗೆ ಬೇಕಾಗುವ ನಾಲೈದು ಬಗೆಯ ರಂಟೆಗಳು ಕಾರಖಾನೆಯಲ್ಲಿ ಸಿದ್ದವಾಗಹತ್ತಿದವು, ಅವುಗಳ ವ್ಯಾಪಾರವು ಭರದಿಂದ ಸಾಗಹತ್ತಿತು. ಅದನ್ನು ಕಂಡು ಲಕ್ಷಣರಾಯರು ರೈತರೇ ನಮ್ಮ ಗಿರಾಕಿ ಗಳು, ಇನ್ನು ಮುಂದೆ ರೈತರಿಗೆ ಉಪಯುಕ್ತವಾದ ಸಾಮಾನುಗಳನ್ನೇ ಸಿದ್ದ ಸಡಿಸಬೇಕೆಂಬ ಧೋರಣೆಯನ್ನು ಸ್ವೀಕರಿಸಿದರು. ರೈತರಿಗೆ ಅವಶ್ಯ ಬೇಕಾಗುವ ಎತ್ತಿನ ಗಾಡಿಯ ಗಾಲಿಗಳನ್ನು ಮಾಡುವ ವಿಚಾರವನ್ನು ಮಾಡಿದರು. ಗಾಲಿಗಳನ್ನು ಮಾಡುವ ಭಾರತೀಯ ರೀತಿ ಯನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದರು. ಈ ಹಳೆಯ ಪದ್ಧತಿಯು ಸದೋಷ ನಿದೆಯೆಂದು ಅವರಿಗೆ ಅನಿಸಿತು. ಈ ಪದ್ಧತಿಯಲ್ಲಿ ಕಟ್ಟಿಗೆಯು ಬಹಳ ನಾಶ ವಾಗುವದಲ್ಲದೆ, ಅದು ಅಷ್ಟು ಬಾಳಿಕೆಯುಳ್ಳದ್ದೂ ಆಗುವದಿಲ್ಲ. ಈ ಗಾಲಿಯ ಹಳಿಯನ್ನು ಬೆಂಕಿಯಲ್ಲಿ ಕಾಸಿ ಕೂಡಿಸುವದರಿಂದ ಕಟ್ಟಿಗೆಯು ಸುಟ್ಟು, ಹಳಿಯು ಅಷ್ಟು ಗಟ್ಟಿಯಾಗಿ ಕೂಡುವದಿಲ್ಲ, ಅಮೇರಿಕೆಯಲ್ಲಿ ಇದಕ್ಕಿಂತಲೂ ಸುಧಾರಿಸಿದ ರೀತಿಯಿಂದ ಗಾಲಿಗಳು ಮಾಡಲ್ಪಡುತ್ತವೆ. ಅಲ್ಲಿ ಕಟ್ಟಿಗೆಯ ಪಟ್ಟಿಗಳನ್ನು ಉಗಿಯಿಂದ ಕಾಸಿ ಮೆತ್ತಗೆ ಮಾಡಿ, ಬೇಕಾದಂತೆ ಅವುಗಳನ್ನು ಮಣಿಸುತ್ತಾರೆ, ಮತ್ತು ಹಳಿಯನ್ನು ವಿದ್ಯುತ್ತಿನಿಂದ ಕಾಸುತ್ತಾರೆ, ಮತ್ತು ಯಂತ್ರದಿಂದಲೇ ತಣ್ಣಗೆ ಮಾಡುತ್ತಾರೆ, ಅದರಿಂದ ಹಳಿಗಳು ಬಿಗಿಯಾಗಿ ಕುಳಿತು ಬಿಚ್ಚುವದು ಕಡಿಮೆ. ಇಂತಹ ಗಾಲಿಗಳು ರೈತರಿಗೆ ಮೆಚ್ಚಿಗೆಯಾಗ ಬಹುದೆಂದು ಎಣಿಕೆ ಹಾಕಿದರು. ಇಂತಹ ಸುಧಾರಿಸಿದ ಗಾಲಿಗಳನ್ನು ಸಿದ್ದಪಡಿಸಲು ಬೇಕಾಗುವ ಅಮೇರಿಕೆಯ ಯಂತ್ರ ಹಾಗೂ ಬಾಯಲರಗಳನ್ನು ತರಿಸಿದರು. ಕೆಲಸವು ಪ್ರಾರಂಭವಾಯಿತು, ಜಾಹೀರಾತು ಕೊಟ್ಟರು, ಬೇಡಿಕೆಗಳು ಬರಹ ದವು, ಜನ ಪ್ರಿಯವಾಗುವ ಲಕ್ಷಣಗಳು ಕಂಡವು. ಆದರೆ ಈ ಎಲ್ಲ ಪ್ರಯತ್ನವು ಒಂದೇ ಒಂದು ಕಾರಣದಿಂದ ನಿಷ್ಪಲವಾ ಯಿತು. ಅಮೇರಿಕೆಯ ಕಟ್ಟಿಗೆಯಂತೆ ಇಲ್ಲಿಯ ಸಾಗವಾನಿ ಕಟ್ಟಿಗೆಗೆ ಎಷ್ಟೇ ಉಗಿಯನ್ನು ಕೊಟ್ಟರೂ ಅದು ಮೆತ್ತಗಾಗಲಿಲ್ಲ. ಅದರಿಂದ ಅದನ್ನು ಯಂತ್ರದ ಬಾಯಿಗೆ ಕೊಟ್ಟೂಡನೆ ತುಂಡು ತುಂಡಾಗಹತ್ತಿತು. ಇದಲ್ಲದೆ ಅಳಣಾವರ