೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೧೦೭ ಕೂಡದೆ ? ಇಬ್ಬರೂ ಬದುಕಿದ್ದರೆ ಯಾರನ್ನು ನಿರ್ವಹಿಸುವುದೂ ಕಷ್ಮವಾಗು ವುದು, ವಿಧವೆಯನ್ನು ಸ್ವೀಕರಿಸಿದರೆ, ಅವರ ಅಕ್ಕನಿಗೆ ವಿಪರೀತ ಆಗ್ರಹ ಉಂಟಾಗಿ ಹುಚ್ಚು ಹುಚ್ಚಾಗುವಳು ; ಇದೂ ಅಲ್ಲದೆ ಇವಳ ಗಂಡ ಬದುಕಿರುವ ಕಾರಣ ನನ್ನ ಕಾರ್ ಕೈಗೂಡುವುದು ಕಷ್ಮ, ಅವನ ಬಲದಿಂದ ಈ ಯುದ್ಧ ವನ್ನೇನೋ ಇಡೋಣ ; ಅದಾದ ತರುವಾಯ, ಅವ ಹೋದರೆ ಸಾಕೆಂದು ಅಪೇ ಕ್ಷಿಸತಕ್ಕವಳು ಅವನ ಉಚ್ಛಾಟಣೆಗೆ ತಕ್ಕ ಉಪಾಯವನ್ನು ಹುಡುಕಿಕೊಳ್ಳಲಿ ಧರೆಗೂ ಇಂದುಕಲೆಗೂ ಇವ ತೋರಿಸಬೇಕೆಂದಿರುವ ಕಾರುಣ್ಯದ ವಿಷಯದಲ್ಲಿ ಯುದ್ಧವಾಗಿ ಅವರು ನಮ್ಮ ಸ್ವಾಧೀನಕ್ಕೆ ಸಿಕ್ಕಿದ ತರುವಾಯ ಇವನ ಕ್ಷಮೆಯು ಫಲವನ್ನು ಅವರು ಅನುಭವಿಸಲಾರರು. ಈಗ ಪ್ರಕೃತದಲ್ಲಿ ಚರ್ಚೆ ಯನ್ನು ಬಿಟ್ಟು ರಾಜ್ಯವನ್ನು ಕಾಪಾಡಿಕೊಳ್ಳುವುದೇ ನನ್ನ ಕರ್ತವ್ಯವಾಗಿದೆ. (ನಿಷ್ಮಣ.) ೦ನೇ ಪ್ರಕರಣ ಎರಡು ಪಾಳಯಕ್ಕೂ ಮಧ್ಯೆ ಮೈದಾನ ಒಳಗೆ ಕೋಲಾಹಲ, ಪವೇಕಧೆಗೆ ಇಂದು ಕಲೆ ವೀರಭಟರು-ಇವರೆಲ್ಲರೂ ಭೇರಿ ಪಟಹ ದೊಡನೆ ಹೊರಟುಹೋಗುವರು. ಪ್ರವೇಶ.-ಶುಕ್ಷ್ಯ ಚಂದ), ದುಃಖಗಾರ. ಕುಕೃ.ಅಪ್ಪಾಜಿ, ತಾವು ಈ ಬಳ್ಳೇ ಮರದ ನೆರಳ ಆತಿಥ್ಯವನ್ನು ಸ್ವೀಕರಿಸಿ ; ಧರ ವೃದ್ಧಿಯಾಗಲೆಂದು ದೇವರಿಗೆ ಪ್ರಾರ್ಥನೆ ಮಾಡಿ. ನಾನು ಹಿಂತಿರುಗಿ ತಮ್ಮ ಪಾದದಬಳಿಗೆ ಬಂದರೆ, ತಮಗೆ ಆಪ್ಯಾಯನವಾದ ಸಮಾಚಾರವನ್ನು ತರುತ್ತೇನೆ. ದುಃಖ.--ತಮ್ಮ ಕಾರವು ನಿರ್ವಿಘ್ರ ವಾಗಿ ಜರಗಲಿ ಸ್ವಾಮಿ. (ಶುಕ್ಲಚಂದ್ರ ಹೊ ಗುವನು.) ಒಳಗೆ ಕೋಲಾಹಲ, ಪುನಃ ಪ್ರವೇಶ ಶುಕ್ಲಚಂದ್ರ. ಕು.ಒಡೈಯ್ಯ ಮುದುಕ, ನಡೆ ; ನಿನ್ನ ಕೈತಾ ; ದೊರೆಗೆ ಸೋಲಾಯಿತು. ಆತನೂ ಆತನ ಮಗಳ ಕೈಸೆರೆ ಸಿಕ್ಕಿದರು ನಿನ್ನ ಕೈ ತಾ, ನಡೆ. ದುಃಖ ಮುಂದಕ್ಕೆ ಬೇಡವೈಯ್ಯ ; ಮನುಷ್ಯ ಇಲ್ಲಿಯೇ ಕೊಳಯುವುದಕ್ಕೆ ಸಾಕು, ಶುಕ್-ಏನು, ಪುನಃ ದುರಾಲೋಚನೆಯ ? ಮನುಷ್ಯರು ಜನನವನ್ನು ಹಾಗೆ ಸಹಿಸಿಕೊಂಡರೆ ಮರಣವನ್ನೂ ಹಾಗೆಯೇ ಸಹಿಸಿಕೊಳ್ಳಬೇಕು. ಮರಣಕ್ಕೆ ಪಕ್ಷವಾಗಿರುವುದೇ ಮುಖ್ಯವಾದ್ದು. ಬಾರೆ. ದುಃಖ-ಅದ ನಿಶ್ಚಯ. (ನಿಮ್ಮ ಮಣ.)
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೦
ಗೋಚರ