ಪುಟ:ಪ್ರಬಂಧಮಂಜರಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಪ್ರಬಂಧಮಂಜರಿ-ಮೊದಲನೆಯ ಭಾಗ ಅಲ್ಲಾವುದ್ದೀನನು ಬುದ್ದಿ ಯಿಲ್ಲದವನು, ” ದುಸ್ಸಂಗವು ಒಳ್ಳೆಯವರನ್ನೂ ದುಷ್ಟರನ್ನು ಮಾಡುತ್ತದೆ. 3. ಪ್ರಕ್ರಮ. ಆರಂಭಿಸಿದ ಕ್ರಮವನ್ನು ವಾಕ್ಯದ ಕೊನೆವರೆಗೂ ಅನುಸರಿಸುವುದು. ಉದಾ

  • ಈತನು ಬುದ್ದಿಯಲ್ಲಿ ಬೃಹಸ್ಪತಿಯು, ಭೀಷ್ಮನಂತೆ ಬಿಲ್ಲಾರನು, ಕೀರ್ತಿಯಲ್ಲಿ ಅರ್ಜುನನು” ಎಂಬಲ್ಲಿ ಪ್ರಕ್ರಮಕ್ಕೆ ಭಂಗ ಬಂದಿದೆ; 4 ಬಿಲ್ಲಿನಲ್ಲಿ ಭೀಷ್ಮನು ಎಂದರೆ ಸರಿಯಾಗುವುದು,

(6) ಏಕೀಭಾವ (Unity) ವಾಕ್ಯದ ಪ್ರತಿಯೊಂದು ಭಾಗವೂ ಒಂದೇ ಪ್ರಧಾನ ವಿಷಯಕ್ಕೆ ಅಧೀನವಾಗಿರಬೇಕು. ಅನೇಕ ಪ್ರಧಾನ ವಿಷಯಗಳನ್ನು ಒಂದೇ ವಾಕ್ಯದಲ್ಲಿ ಅಡಗಿಸಬಾರದು, ಬೇರೆ ಬೇರೆ ವಾಕ್ಯಗಳಲ್ಲಿ ಬರೆಯಬೇಕು. ಉದಾ. “ಯುದ್ಧವು ಉಪಕ್ರಮವಾಗುವುದಕ್ಕೆ ಸ್ವಲ್ಪ ಮುಂದೆ, ಈಸ್ಟ್ ಇಂಡಿಯಾ ಕಂಪೆನಿಯವರು, ಆ ವೇಳೆಗೆ ರೋಗ ವಾಸಿಯಾಗಿ ದೃಢವಾಗಿದ್ದ ಈ ವನ್ನು ತಮ್ಮ ಹಿಂದೂ ದೇಶದಲ್ಲಿ ಸೈನ್ಯಾಧಿಪತ್ಯಕ್ಕೆ ಪುನಃ ನಿಯಮಿಸಿ ಕಳುಹಿಸಿಕೊಟ್ಟರು.” ಒಂದಕ್ಕೊಂದಕ್ಕೆ ಬಹಳ ಸಂಬಂಧವಿರುವ ಹಲವು ವಿಷಯಗಳನ್ನು ಒಂದೇ ವಾಕ್ಯದಲ್ಲಿ ಸೇರಿಸಬಹುದು. ಉದಾ « ಕೂಡಲೆ ಸುರಾಜುದೌಲನು ತನ್ನ ಸೆರೆಯಲ್ಲಿದ್ದ ಇಂಗ್ಲಿಷರನ್ನು ಬಿಟ್ಟು ಕೊಟ್ಟು, ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳುವಂತೆ ಹೇಳಿ ಕಳುಹಿಸಿ, ಇಂಗ್ಲಿಷರಿಗೆ ಉಂಟಾದ ನಷ್ಟ - ವನ್ನು ತಾನೇ ವಹಿಸಿಕೊಂಡು ಸರಿಮಾಡುವುದಾಗಿ ಮಾತುಕೊಟ್ಟನು.' <<ಆ ರಾಜಕುಮಾರನು ಎಂಟು ವರ್ಷದ ಹುಡುಗನಾಗಿದ್ದಂದಿನಿಂದ ತಂದ ಸಾಯುವವರೆಗೂ ಎಡೆಬಿಡದೆ ಅವನ ಜತೆಯಲ್ಲಿಯೇ ಇದ್ದು ಅವನು ಅನುಭವಿಸಿದ ಸಂಕಟಗಳನ್ನೆಲ್ಲಾ ತಾನೂ ಅನುಭವಿಸಿದನು.* ವಾಕ್ಯವು ಚಿಕ್ಕದಾಗಿದ್ದಷ್ಟೂ ಏಕೀಭಾವಕ್ಕೆ ಅವಕಾಶವುಂಟು ; ಆದುದರಿಂದ ಅತಿದೀರ್ಘವಾದ ವಾಕ್ಯಗಳನ್ನು ಬರೆವುದು ಯುಕ್ತವಲ್ಲ. ಉದ್ದವಾದ ವಾಕ್ಯಗಳನ್ನು ಬರೆವುದು ಕನ್ನಡದಲ್ಲಿ ಕೆಲವರ ದುರಭ್ಯಾಸ ವಾಗಿದೆ. ವಚನರೂಪದಲ್ಲಿ ಬರೆದಿರುವ ಕಣರ್ ಟಕ ಮಹಾಭಾರತ (ಮುದ್ರಾಮಂಜೂಷ ಮುಂತಾದವುಗಳಲ್ಲಿ ಒಂದೊಂದು ಪುಟದಷ್ಟು ಬಹಳ ಉದ್ದವಾದ ವಾಕ್ಯಗಳು ತುಂಬಿವೆ.