ವಾಕ್ಯದ ಸ್ವರೂಪ ဂနု 2. ವಿಶೇಷಣಪದಗಳು ಆಯಾ ವಿಶೇಷ್ಠ ಪದಗಳ ಹಿಂದೆಯೂ, ಕರಣ ಮೊದಲಾದ ಇತರ ಕಾರಕಗಳು ಕ್ರಿಯೆಗೆ ಪೂರ್ವದಲ್ಲಿಯೂ ಷಷ್ಟಂತ ಪದವು ನಾಮಪದದ ಹಿಂದೆಯೂ ಬರುವುವು. ಉದಾ:- - « ಆರ್ಯಾವರ್ತದಲ್ಲಿ ಮಾವಾರದ ಅಧಿಪತಿಯಾದ ರಾಣರಾಜಸಿಂಹನು ಲೋಕಾತೀತವಾದ ಶೌರ್ಯದಿಂದ ಯಥಾರ್ಥವಾದ ರಾಜಧರ್ಮವನ್ನು ತೋರಿಸಿದನು , ” - ಮೇಲಣ ವಿಧಿಗಳು ಸಾಮಾನ್ಯವಾದವುಗಳು. ಕನ್ನಡದಲ್ಲಿ ವಿಭಕ್ತಿವಚನ ಮೊದಲಾದುವುಗಳ ಬಲದಿಂದ ಪದಗಳನ್ನು ಯಾವ ಕ್ರಮದಲ್ಲಿ ಬರೆದರೂ ಅರ್ಥವಾಗುವುದರಿಂದ ಈ ವಿಧಿಗಳಿಗೆ ಪ್ರತಿಷೇಧಗಳು ಬಹಳವುಂಟು:- (6) ಕಾಲ, ಸ್ಥಾನ, ಕಾರಣ, ಪಕ್ಷಾಂತರ ಈಯರ್ಥದ ಕ್ರಿಯಾವಿಶೇಷಣಗಳು ವಾಕ್ಯದ ಆದಿಯಲ್ಲಿ ಬಂದು ಕರ್ತೃಪದವು ಇವುಗಳ ಮುಂದೆ ಬರುವುದು. ಉದಾ.. ಕಾಲಕ್ಕೆ - ಶ್ರಾವಣ ಬಹುಳದ ಅಷ್ಟಮಿಯಲ್ಲಿ ಶ್ರೀಕೃಷ್ಣನು ಅವತರಿಸಿದನು “ಸಾಮ್ರಾಜ್ಯದಲ್ಲೆಲ್ಲಾ ಶಾಂತಿ ನೆಲೆಗೊಂಡ ತರುವಾಯ, ಆಶ್ಚರನ ದೃಷ್ಟಿ ದಿಗ್ವಿಜಯದ ಮೇಲೆ ಬಿತ್ತು,” ಸ್ಥಾನಕ್ಕೆ ಕಾಶಿಯಲ್ಲಿ ಒಬ್ಬ ವಿದ್ವಾಂಸನಿದ್ದನು, ಕಾರಣಕ್ಕೆ_ವ್ ಸೇನಾಪತಿಯ ಮಂತ್ರಾಲೋಚನೆಯು ಯುಕ್ತವಾಗಿ ಕಾಣಬಂದುದರಿಂದ ಗವರ್ನರು ಅದರಂತೆ ನಡೆಸಿಕೊಟ್ಟನು ಪಕ್ಷಾಂತರಕ್ಕೆ -4 ರಾಜನು ಕೋಪಿಷ್ಠನಾಗಿದ್ದಲ್ಲಿ ಪ್ರಜೆಗಳು, ರಾಜಾಜ್ಞೆಯಂ ಮಾರಿದರೆ ಪ್ರಭುವಿನ ಕೋಪಕ್ಕೆ ಪಾತ್ರರಾಗಿ ದಂಡನೆಗೆ ಯೋಗ್ಯರಾದೇವೆಂಬ ಭೀತಿಯಿಂದ ತಗ್ಗಿ ನಡೆದಾರು.” (1) ಕರ್ಮ ಮುಂತಾದ ಕಾರಕಗಳೂ ವಾಕ್ಯದ ಆದಿಯಲ್ಲಿ ಬರುವುದುಂಟು. ಉದಾ. ಹಣವನ್ನು ತಾವೇನೂ ಕೊಡಬೇಕಾಗಿಲ್ಲ. ಬಾಲ್ಯದಿಂದಲೂ ಹುಡುಗರನ್ನು ಸರಿಯಾಗಿ ನೋಡಿಕೊಳ್ಳಬೇಕು, () ಕೆಲವುಕಡೆ ಕ್ರಿಯಾಪದವು ಇರುವುದಿಲ್ಲ. ಉದಾ* ಮೊಟ್ಟಮೊದಲು ರಾಜಪುತ್ರರ ಸ್ವಾತಂತ್ರದ ಗೌರವವನ್ನು ಹಾಳುಮಾಡಿದವನು ಅಕ್ಕರು” ಎಲ್ಲರೂ ತ್ಯಜಿಸಬೇಕಾದ ದುರ್ಗುಣವು ಸ್ವಪ್ರತಿಷ್ಠೆಯು (iv) ವಿಶೇಷಣವು ವಿಶೇಷ್ಯಕ್ಕೆ ಪರದಲ್ಲಿಯೂ ಬರುವುದುಂಟು ಆಗ ಅದಕ್ಕೆ ಉತ್ತರವಿಶೇಷಣ ಅಥವಾ ವಿಧೇಯವಿಶೇಷಣವೆಂದು ಹೆಸರು. ಉದಾ
ಪುಟ:ಪ್ರಬಂಧಮಂಜರಿ.djvu/೩೧
ಗೋಚರ